ಬೇಸಿಗೆಯಲ್ಲಿ ಬತ್ತಿಹೋಗುವ ಜೀವಜಲ: ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿಗಾಗಿ ಕೆರೆ ನಿರ್ಮಿಸಿದ ವೈದ್ಯ!

ವೃತ್ತಿಯಲ್ಲಿ ವೈದ್ಯ ಮತ್ತು ಪ್ರಾಣಿಪ್ರೇಮಿ ಆಗಿರುವ ನಾಗರಾಜ್ ಗ್ರಾಮಪುರೋಹಿತ್ ನರೇಗಲ್ ಪಟ್ಟಣದಲ್ಲಿ ಕೆರೆಯೊಂದನ್ನು ನಿರ್ಮಿಸಲು ಹೊರಟಿದ್ದಾರೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಗದಗ: ವೃತ್ತಿಯಲ್ಲಿ ವೈದ್ಯ ಮತ್ತು ಪ್ರಾಣಿಪ್ರೇಮಿ ಆಗಿರುವ ನಾಗರಾಜ್ ಗ್ರಾಮಪುರೋಹಿತ್ ನರೇಗಲ್ ಪಟ್ಟಣದಲ್ಲಿ ಕೆರೆಯೊಂದನ್ನು ನಿರ್ಮಿಸಲು ಹೊರಟಿದ್ದಾರೆ.
ನಗರದ ಖಾಸಗಿ ಭೂಮಾಲೀಕರ ಜಮೀನಿನಲ್ಲಿ, ಬಾಯಾರಿ ಬರುವ ಪಕ್ಷಿಗಳಿಗಾಗಿ ಮತ್ತು ಪ್ರಾಣಿಗಳಿಗಾಗಿ ನೀರನ್ನು ಸಂಗ್ರಹಿಸಿಟ್ಟಿದ್ದಾರೆ, ಭೂಮಿ ಮಾಲೀಕರು ತಮ್ಮ ಜಮೀನಿನಲ್ಲಿ ಜಾಗ ನೀಡಲು ಒಪ್ಪಿಕೊಂಡು ಭೂಮಿ ನೀಡಿದ್ದಾರೆ. 
ಕೆಲವು ವನ್ಯಜೀವಿಗಳು ಹಾಗೂ ಪ್ರಾಣಿಗಳು ಮತ್ತು ಪಕ್ಷಿಗಳು ನೀರಿಲ್ಲದೇ  ಬಾಯಾರಿಕೆಯಿಂದಿರುವ ದೃಶ್ಯ ಕಣ್ಣಿಗೆ ಕಾಣಿಸಿತು, ಬೇಸಿಗೆಯಲ್ಲಿ ನೀರಿಗಾಗಿ ಪರಿತಪಿಸುವುದನ್ನು ನೋಡಿದ ಅವರು ತಮ್ಮ ಸ್ವಂತ ಹಣ ಖರ್ಚು ಮಾಡಿ, ಬಾವಿ ತೋಡುವ ಕೆಲಸ ಆರಂಭಿಸಿದ್ದಾರೆ, ಒಮ್ಮೆ ಕೆರೆಗೆ ನೀರು ಸಂಗ್ರಹವಾದರೇ ಹಲವು ವರ್ಷಗಳ ವರೆಗೂ ನೀರು ಸಂಗ್ರಹವಾಗಿಯೇ ಇರುತ್ತದೆ, ಈಗ ಅಲ್ಲಿ ಕೆಲವು ಪೊದೆಗಳನ್ನು ನೋಡಬಹುದಾಗಿದೆ, 
ಕಳೆದ ಮೂರು ನಾಲ್ಕು ವರ್ಷಗಳಿಂದ ಉತ್ತಮವಾಗಿ ಮಳೆಯಾಗಿದೆ,ಹೀಗಾಗಿ ಕೆರೆ ತುಂಬಿದೆ, ಈ ಕೆರೆಯ ನೀರನ್ನು ಕೇವಲ ಪ್ರಾಣಿ ಮತ್ತು ಪಕ್ಷಿಗಳು ಕುಡಿಯುವ ನೀರಿಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಗ್ರಾಮಪುರೋಹಿತ್ ಹೇಳಿದ್ದಾರೆ.
ವೈದ್ಯರ ಈ ಯೋಜನೆಗೆ ಹಲವರು ಸಹಾಯ ಮಾಡಲು ಮುಂದೆ ಬಂದಿದ್ದಾರೆ, ವೈದ್ಯರ ಯೋಜನೆ ಉತ್ತಮವಾಗಿದ್ದು, ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳ ಕುಡಿಯುವ ನೀರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com