ನಾಲ್ವರು ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಕೋರ್ಟ್ ನಿಂದ 1.2 ಕೋಟಿ ರೂ ದಂಡ, 4 ವರ್ಷ ಜೈಲು!

ಲೋಕಾಯುಕ್ತ ಕೋರ್ಟ್ ನಾಲ್ವರು ಸರ್ಕಾರಿ ಅಧಿಕಾರಿಗಳನ್ನು ದೋಷಿಗಳೆಂದು ತೀರ್ಪು ಪ್ರಕಟಿಸಿದ್ದು, 1.25 ಕೋಟಿ ರೂಪಾಯಿ ದಂಡ, 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ನಾಲ್ವರು ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಕೋರ್ಟ್ ನಿಂದ 1.2 ಕೋಟಿ ರೂ ದಂಡ, 4 ವರ್ಷ ಜೈಲು!
ನಾಲ್ವರು ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಕೋರ್ಟ್ ನಿಂದ 1.2 ಕೋಟಿ ರೂ ದಂಡ, 4 ವರ್ಷ ಜೈಲು!
ಬೆಂಗಳೂರು: ಲೋಕಾಯುಕ್ತ ಕೋರ್ಟ್ ನಾಲ್ವರು ಸರ್ಕಾರಿ ಅಧಿಕಾರಿಗಳನ್ನು ದೋಷಿಗಳೆಂದು ತೀರ್ಪು ಪ್ರಕಟಿಸಿದ್ದು, 1.25 ಕೋಟಿ ರೂಪಾಯಿ ದಂಡ, 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. 
ಅಪರಾಧಿಗಳು ಪ್ರಾಣಿ ಆರೋಗ್ಯ ಮತ್ತು ಪಶುವೈದ್ಯ ಜೀವಶಾಸ್ತ್ರಜ್ಞರ ಸಂಸ್ಥೆ, ಕರ್ನಾಟಕ ಪಶುವೈದ್ಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಅಧಿಕಾರಿಗಳಾಗಿದ್ದಾರೆ. 
ನ್ಯಾ. ಆರ್ ಎನ್ ಸಚಿನ್ ಕೌಶಿಕ್ ತೀರ್ಪು ಪ್ರಕಟಿಸಿದ್ದು, ಉದ್ದೇಶಪೂರ್ವಕವಾಗಿ ಯುಟಿಐ ಮ್ಯುಚುಯಲ್ ಫಂಡ್ಸ್ ನಲ್ಲಿ1.33 ಕೋಟಿ ರೂಪಾಯಿ ಪಿಂಚಣಿ ನಿಧಿಯನ್ನು ಹೂಡಿಕೆ ಮಾಡುವ ಮೂಲಕ ಕರ್ನಾಟಕ ಪಶುವೈದ್ಯ, ಪ್ರಾಣಿ ಮತ್ತು ಮೀನುಗಾರಿಕೆ ವಿಶ್ವವಿದ್ಯಾನಿಲಯ ಕಾಯಿದೆ, 2004 ನ್ನು ಉಲ್ಲಂಘನೆ ಮಾಡಿರುವ ಅಧಿಕಾರಿಯನ್ನು ಅಪರಾಧಿ ಎಂದು ಘೋಷಿಸಿದ್ದಾರೆ. ಕಾಯ್ದೆ ಉಲ್ಲಂಘನೆಯಾಗಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ 84.31 ಲಕ್ಷ ರೂಪಾಯಿ ನಷ್ಟವಾಗಿತ್ತು. 
ಪ್ರಾಣಿ ಆರೋಗ್ಯ ಮತ್ತು ಪಶುವೈದ್ಯ ಜೀವಶಾಸ್ತ್ರಜ್ಞ ವಿಭಾಗದ ಮಾಜಿ ನಿರ್ದೇಶಕ ಡಾ. ಸಿ ರೇಣುಕಾ ಪ್ರಸಾದ್, ಕರ್ನಾಟಕ  ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ  ಮಾಜಿ ಉಪಕುಲಪತಿ ಡಾ. ಆರ್ ಎನ್ ಶ್ರೀನಿವಾಸ್ ಗೌಡ, ವಿಶ್ವವಿದ್ಯಾನಿಲಯದ ಮಾಜಿ ಲೆಕ್ಕಪತ್ರ ವಿಭಾಗದ ಅಧಿಕಾರಿ, ಪ್ರಾಣಿ ಆರೋಗ್ಯ ಮತ್ತು ಪಶುವೈದ್ಯ ಜೀವಶಾಸ್ತ್ರಜ್ಞರ ಸಂಸ್ಥೆಯ ಲೆಕ್ಕಪತ್ರ ವಿಭಾಗದ ಅಧಿಕಾರಿ ಇಬ್ರಾಹಿಂ ಶರೀಫ್ ಅಪರಾಧಿಗಳಾಗಿದ್ದಾರೆ. 
ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಪಿಂಚಣಿ ಪ್ರಾಣಿ ಆರೋಗ್ಯ ಮತ್ತು ಪಶುವೈದ್ಯ ಜೀವಶಾಸ್ತ್ರಜ್ಞರ ಸಂಸ್ಥೆ ಬದಲು ಯುಟಿಐ ಮ್ಯೂಚುಯಲ್ ಫಂಡ್ಸ್ ನಲ್ಲಿ ಅಕ್ರಮ ಸಂಪಾದನೆಯ ಮೊತ್ತವನ್ನು ಹೂಡಿಕೆ ಮಾಡಿದ್ದರು ಈ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧವೂ ಲೋಕಾಯುಕ್ತ ಪೊಲೀಸರು ಚಾರ್ಜ್ ಶೀಟ್ ದಾಖಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com