ಸಂಗ್ರಹ ಚಿತ್ರ
ರಾಜ್ಯ
ಚಿಕ್ಕಮಗಳೂರು: ಭದ್ರಾ ಹಿನ್ನೀರಲ್ಲಿ ಮುಳುಗಿ ಇಬ್ಬರು ಯುವಕರು ನೀರುಪಾಲು
ಭದ್ರಾ ಹಿನ್ನೀರಿನಲ್ಲಿ ದಾಟುವ ವೇಳೆ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರದಲ್ಲಿ ನಡೆದಿದೆ.
ಶೃಂಗೇರಿ: ಭದ್ರಾ ಹಿನ್ನೀರಿನಲ್ಲಿ ದಾಟುವ ವೇಳೆ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರದಲ್ಲಿ ನಡೆದಿದೆ.
ಎನ್.ಆರ್.ಪುರ ತಾಲೂಕಿನ ಮೂರು ಕಣ್ಣಿನ ಸೇತುವೆ ಸಮೀಪ ಸಂಭವಿಸಿದ ದುರಂತದಲ್ಲಿ ಸಂತೋಷ್ (19), ದಮ್ಮೂರ್ (24) ಎಂಬುವವರು ಸಾವನ್ನಪ್ಪಿದ್ದಾರೆ.
ಮೃತರಲ್ಲಿ ಸಂತೋಷ್ ನೇಪಾಳ ಮೂಲದವರಾಗಿದ್ದು ಎನ್.ಆರ್. ಪುರದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಇನ್ನೋರ್ವ ಮೃತ ದುರ್ದೈವಿ ದಮ್ಮೂರ್ ಸಂತೋಷ್ ಸಂಬಂಧಿಯಾಗಿದ್ದು ಈತ ಸಂತೋಷ್ ಮನೆಗೆ ಬಂದಿದ್ದನು.
ದಮ್ಮೂರ್ ನನ್ನು ಕರೆದುಕೊಂಡು ಸಂತೋಷ್ ಹಿನ್ನೀರನ್ನು ದಾಟುವ ವೇಳೆ ಆಯತಪ್ಪಿ ನೀರಿನಲ್ಲಿ ಬಿದ್ದಿದ್ದಾರೆ. ಶನಿವಾರ ಸಂಜೆಈ ಘಟನೆ ನಡೆದಿದ್ದು ಮಾಹಿತಿ ಪಡೆದ ಪೋಲೀಸರು ಸ್ಥಳಕ್ಕಾಗಮಿಸಿಮೃತದೇಹದ ಹುಡುಕಾಟ ನಡೆಸಿದ್ದಾರೆ. ಕಡೆಗೆ ಇಂದು (ಭಾನುವಾರ) ಬೆಳಿಗ್ಗೆ ಎರಡೂ ಮೃತದೇಹಗಳು ಪತ್ತೆಯಾಗಿದೆ.
ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ