ಹಿಂಡಲಗಾ ಜೈಲು
ರಾಜ್ಯ
ಹಿಂಡಲಗಾ ಜೈಲಿನಿಂದ ಖೈದಿ ಪರಾರಿ: ಜೈಲರ್ ಸೇರಿ ನಾಲ್ವರ ಅಮಾನತು
ಹಿಂಡಲಗಾ ಜೈಲಿನಿಂಡ ಮರಣದಂಡನೆ ಶಿಕ್ಷೆಗೊಳಗಾಗಿದ್ದ ಖೈದಿ ಪರಾರಾಇಯಾದ ಘಟನೆ ಬೆಳಕಿಗೆ ಬಂದು ಒಂದು ದಿನದ ನಂತರ ಶುಕ್ರವಾರ ಜೈಲು ಇಲಾಖೆಯ ಹಿರಿಯ ಜೈಲರ್....
ಬೆಳಗಾವಿ: ಹಿಂಡಲಗಾ ಜೈಲಿನಿಂಡ ಮರಣದಂಡನೆ ಶಿಕ್ಷೆಗೊಳಗಾಗಿದ್ದ ಖೈದಿ ಪರಾರಾಇಯಾದ ಘಟನೆ ಬೆಳಕಿಗೆ ಬಂದು ಒಂದು ದಿನದ ನಂತರ ಶುಕ್ರವಾರ ಜೈಲು ಇಲಾಖೆಯ ಹಿರಿಯ ಜೈಲರ್, ಮುಖ್ಯ ವಾರ್ಡನ್ ಮತ್ತು ಇಬ್ಬರು ಕಾನ್ಸ್ಟೇಬಲ್ ಗಳನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ತಮಿಳುನಾಡಿನ ಸೇಲಂ ಮೂಲದ ಮುರುಗನ್ ಎಂದು ಗುರುತಿಸಲ್ಪಟ್ಟ ಆರೋಪಿ 2017ರಲ್ಲಿ ಮರಣದಂಡನೆಗೆ ಗುರಿಯಾಗಿ ಹಿಂಡಲಗಾ ಜೈಲಿನಲ್ಲಿದ್ದನು. ಚಾಮರಾಜನಗರದಲ್ಲಿ ಐವರ ಹತ್ಯೆ ಪ್ರಕರಣದಲ್ಲಿ ಆತನಿಗೆ ಮರಣದಂಡನೆ ಶಿಕ್ಷೆಯಾಗಿತ್ತು.
ಪ್ರಾಥಮಿಕ ತನಿಖೆಯ ವೇಳೆ ಜೈಲಿನಿಂದ ತಪ್ಪಿಸಿಕೊಳ್ಳಲು ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಂಡ ಮುರುಗನ್ ಗೆ ಇನ್ನೂ ಮೂವರು ಖೈದಿಗಳು ಸಹಾಯ ಮಾಡಿದ್ದರು ಎನ್ನುವುದು ತಿಳಿದುಬಂದಿದೆ.
"ಜೈಲಿನ ಸಿಬ್ಬಂದಿಯ ನಿರ್ಲಕ್ಷವೇ ಈ ಘಟನೆಗೆ ಕಾರಣವಾಗಿದೆ ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ.ಈ ಹಿನ್ನೆಲೆಯಲ್ಲಿ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.ಕಾರಾಗೃಹದ ಮುಖ್ಯ ಅಧೀಕ್ಷ ಟಿ.ಪಿ.ಶೇಷ ತಿಳಿಸಿದ್ದಾರೆ. ಮುರುಗನ್ ಬಂಧನಕ್ಕೆ ಐದು ತಂಡಗಳನ್ನು ರಚಿಸಲಾಗಿದೆ ಎಂದು ಅವರು ವಿವರಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ