ಜಿಗ್ನೇಶ್ ಮೇವಾನಿ
ರಾಜ್ಯ
ಪ್ರಧಾನಿ ಮೋದಿ ವಿರುದ್ಧ ಭಾಷಣ: ಜಿಗ್ನೇಶ್ ಮೇವಾನಿ ವಿಚಾರಣೆಗೆ ಹೈಕೋರ್ಟ್ ಅಸ್ತು
2018ರ ವಿಧಾನಸಬೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿದ್ದ ಗುಜರಾತಿನ ವಡಗಾಂವ್ ಕ್ಷೇತ್ರದ ಶಾಸಕ, ದಲಿತ ಸಮುದಾಯದ ನಾಯಕ ಜಿಗ್ನೇಶ್ ಮೇವಾನಿ ವಿರುದ್ಧ....
ಬೆಂಗಳೂರು: 2018ರ ವಿಧಾನಸಬೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿದ್ದ ಗುಜರಾತಿನ ವಡಗಾಂವ್ ಕ್ಷೇತ್ರದ ಶಾಸಕ, ದಲಿತ ಸಮುದಾಯದ ನಾಯಕ ಜಿಗ್ನೇಶ್ ಮೇವಾನಿ ವಿರುದ್ಧ ಚಿತ್ರದುರ್ಗ ಪೋಲಿಸರು ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಐಪಿಸಿ ಸೆಕ್ಷನ್ 153 ಮತ್ತು 117ರ ಅಡಿಯ;ಲ್ಲಿ ಸಲ್ಲಿಸಲಾದ ಚಾರ್ಜ್ ಶೀಟ್ ರದ್ದತಿಗೆ ಹೈಕೋರ್ಟ್ ನಿರಾಕರಿಸಿದೆ.
ಮೇವಾನಿ ಹಾಗೂ ಟಿ. ಶಫಿಉಲ್ಲಾ ಅವರ ವಿರುದ್ಧ ಸಲ್ಲಿಸಲಾಗಿದ್ದ ದೋಷಾರೋಪಪಟ್ಟಿಯ ಐಪಿಸಿ ಸೆಕ್ಷನ್ 188 ಅಡಿಯಲ್ಲಿನ ಆರೋಪ ರದ್ದತಿಗೆ ನ್ಯಾಯಮೂರ್ತಿ ಅರವಿಂದ ಕುಮಾರ್ ಭಗಷಃ ಸಮ್ಮತಿಸಿದ್ದರು. ಆದರೆ ಉಳಿದೆರಡು ಸೆಕ್ಷನ್ ಗಳಡಿಯ ಆರೋಪ ವಜಾಗೆ ಅವರು ನಿರಾಕರಿಸಿದ್ದಾರೆ.
ಚಾರ್ಜ್ ಶೀಟ್ ವಿರುದ್ಧ ಮನವಿ ಸಲ್ಲಿಸಿದ ಮೇವಾನಿ ಇಡೀ ಭಾಷಣವು ಒಟ್ಟಾರೆಯಾಗಿ ಓದಿದರೆ, ಯಾವುದೇ ಅಪರಾಧ ಕೃತ್ಯ ಎಸಗಲು ಪ್ರಚೋದನೆ ನೀಡುವಂತಿಲ್ಲ ಎನ್ನುವುದು ತಿಳಿಯುತ್ತದೆ. ಅಲ್ಲದೆ ಪ್ರಧಾನಿ ಮೋದಿ ಭಾಷಣಕ್ಕೆ ಅಡ್ಡಿ ಉಂಟುಮಾಡುವ ಯಾವುದೇ ಉದ್ದೇಶವೂ ಇದರಲ್ಲಿಲ್ಲ, ಆದರೆ ಮೋದಿ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುವ ಕೆಲಸವನ್ನಷ್ಟೇ ಇಲ್ಲಿ ಮಾಡಲಾಗಿದೆ. ಪೋಲೀಸರು ತಮಗೆ ಯಾವ ಮಾಹಿತಿ ನೀಡದೆ ಈ ಚಾರ್ಜ್ ಶಿಟ್ ಸಲ್ಲಿಸಿದ್ದಾರೆ. ಅವರು ಉದ್ದೇಶಪೂರ್ವಕ ತನಿಖೆ ನಡೆಸಲಿಲ್ಲ, ಎಂದು ವಿವರಿಸಿದ್ದಾರೆ.
ಏಪ್ರಿಲ್ 6, 2018 ರಂದು ಚಿತ್ರದುರ್ಗದಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯು ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮೋದಿ ವಿರುದ್ಧ ಪ್ರಚೋದನಾತ್ಮಕ ಭಾಷಣ ಮಾಡಿದ್ದರೆಂದು ಮೇವಾನಿ ವಿರುದ್ದ ಪ್ರಕರಣ ದಾಖಲಾಗಿತ್ತು.
ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಸಲ್ಲಿಸಿದ ದೂರಿನ ಆಧಾರದ ಮೇಲೆ ಸ್ಥಳೀಯ ಪೊಲೀಸರು ಎಫ್ಐಆರ್ ದಾಕಲಿಸಿಕೊಂಡಿದ್ದರು.ಈ ಕುರಿತಂತೆ ಜೂನ್ 19, 2018 ರಂದು, ಪೊಲೀಸರು ಜೆಎಂಎಫ್ಸಿ ನ್ಯಾಯಾಲಯಕ್ಕೆ ಮೊದಲು ಆರೋಪಪಟ್ಟಿ ಸಲ್ಲಿಸಿದರು.


