ಡಾ.ವಿಜಯಕುಮಾರ ಖಂಡ್ರೆ(
ರಾಜ್ಯ
ಭಾಲ್ಕಿ ಮಾಜಿ ಶಾಸಕ ಡಾ. ವಿಜಯಕುಮಾರ ಖಂಡ್ರೆ ನಿಧನ
ಬೀದರ್ ಜಿಲ್ಲೆ ಭಾಲ್ಕಿ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಡಾ.ವಿಜಯಕುಮಾರ ಖಂಡ್ರೆ(60) ಸೋಮವಾರ ವಿಧಿವಶರಾದರು.
ಬೀದರ್: ಬೀದರ್ ಜಿಲ್ಲೆ ಭಾಲ್ಕಿ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಡಾ.ವಿಜಯಕುಮಾರ ಖಂಡ್ರೆ(60) ಸೋಮವಾರ ವಿಧಿವಶರಾದರು.
ಕೆಪಿಸಿಸಿ ಕಾರ್ಯಾಧ್ಯಕ್ಶ್ಜ ಈಶ್ವರ್ ಖಂಡ್ರೆ ಅವರ ಹಿರಿಯ ಸೋದರರಾದ ವಿಜಯ್‍ಕುಮಾರ್ ಇಂದು ಬೆಳಗ್ಗೆ 10.30 ಗಂಟೆಗೆ ಹೈದರಾಬಾದ್ ನ ಸನ್ ಶೈನ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಎರಡು ಬಾರಿ ಭಾಲ್ಕಿ ಕ್ಷೇತ್ರದ ಶಾಸಕರಾಗಿದ್ದ ವಿಜಯ್‍ಕುಮಾರ್ ಅಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿ ಜನಪ್ರಿಯತೆ ಗಳಿಸಿದ್ದರು.
ಮೃತರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 1 ಕ್ಕೆ ನಡೆಯಲಿದೆ ಎಂದು ಈಶ್ವರ್ ಖಂಡ್ರೆ ಕಛೇರಿಯ ಅಧಿಕೃತ ಟ್ವೀಟ್ ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ