ಭದ್ರಾ ಮೀಸಲು ಅರಣ್ಯ ಪ್ರದೇಶದಲ್ಲಿ ಕುವೆಂಪು ವಿ.ವಿ.ಯ ನಿರ್ಮಾಣ ಕಾರ್ಯಕ್ಕೆ ಇಲಾಖೆ ತಡೆ!

ಭದ್ರಾ ಮೀಸಲು ಅರಣ್ಯದ ಲಕ್ಕವಳ್ಳಿ ವಲಯದಲ್ಲಿ ಕುವೆಂಪು ವಿಶ್ವವಿದ್ಯಾಲಯ ಕೈಗೊಂಡಿದ್ದ ನಿರ್ಮಾಣ ...
ನಿರ್ಮಾಣ ಚಟುವಟಿಕೆಯಲ್ಲಿ ನಿರತವಾಗಿದ್ದ ಸಂದರ್ಭ
ನಿರ್ಮಾಣ ಚಟುವಟಿಕೆಯಲ್ಲಿ ನಿರತವಾಗಿದ್ದ ಸಂದರ್ಭ
ಬೆಂಗಳೂರು: ಭದ್ರಾ ಮೀಸಲು ಅರಣ್ಯದ ಲಕ್ಕವಳ್ಳಿ ವಲಯದಲ್ಲಿ ಕುವೆಂಪು ವಿಶ್ವವಿದ್ಯಾಲಯ ಕೈಗೊಂಡಿದ್ದ ನಿರ್ಮಾಣ ಕಾರ್ಯವನ್ನು ನಿಲ್ಲಿಸಲಾಗಿದೆ.
ಸರ್ಕಾರದಿಂದ ಅಗತ್ಯ ಅನುಮತಿಯನ್ನು ವಿಶ್ವವಿದ್ಯಾಲಯ ಪಡೆಯದ ಕಾರಣ ಅರಣ್ಯ ಇಲಾಖೆ ರಸ್ತೆ, ಸ್ಟೇಡಿಯಂ ಮತ್ತು ಹಾಸ್ಟೆಲ್ ನಿರ್ಮಾಣ ಕಾರ್ಯವನ್ನು ನಿಲ್ಲಿಸಿದೆ. ಅರಣ್ಯ ಮತ್ತು ವನ್ಯಜೀವಿ ನಿಯಮವನ್ನು ವಿಶ್ವವಿದ್ಯಾಲಯ ಉಲ್ಲಂಘಿಸುತ್ತಿರುವುದು ಇದು ಮೊದಲ ಸಲವೇನಲ್ಲ. ಕಳೆದ ವರ್ಷ ಕೂಡ ಅರಣ್ಯಾಧಿಕಾರಿಗಳು ವಿಶ್ವವಿದ್ಯಾಲಯದ ಕೆಲವು ಕೆಲಸಗಳಿಗೆ ತಡೆಯೊಡ್ಡಿದ್ದರು.
ಲಕ್ಕವಳ್ಳಿ ವಲಯದ ಸಿಂಗನಮನೆ ಅರಣ್ಯ ವಲಯದಲ್ಲಿ ಅಕ್ರಮ ಕೆಲಸಗಳು ನಡೆಯುತ್ತಿವೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿತ್ತು. ಈ ಕುರಿತು ತಪಾಸಣೆ ಮಾಡಲು ಎಸಿಎಫ್ ರತ್ನಪ್ರಭ ಅವರನ್ನು ನೇಮಿಸಲಾಗಿತ್ತು. ಲಕ್ಕವಳ್ಳಿ ಮೀಸಲು ಅರಣ್ಯ ಹುಲಿಗಳಿಗೆ ತವರೂರು. ಆದರೆ ಇಲ್ಲಿ ನಿರ್ಮಾಣ ಚಟುವಟಿಕೆಗಳಿಗೆ ವಿಶ್ವವಿದ್ಯಾಲಯ ಅನುಮತಿ ಪಡೆದಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com