ನ್ಯಾಯಾಲಯ ಆವರಣದಲ್ಲೇ ಭ್ರಷ್ಟಾಚಾರ ತಾಂಡವ: ಎಸಿಬಿ ಬಲೆಗೆ ಬಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್

ತಿಪಟೂರು ನ್ಯಾಯಾಲಯದ ಆವರಣದಲ್ಲೇ ಕಕ್ಷಿದಾರಿಂದ 20 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಪಬ್ಲಿಕ್‍ ಪ್ರಾಸಿಕ್ಯೂಟರ್ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ತಿಪಟೂರು: ನ್ಯಾಯಾಲಯದ ಆವರಣದಲ್ಲೇ ಕಕ್ಷಿದಾರಿಂದ 20 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಪಬ್ಲಿಕ್‍ ಪ್ರಾಸಿಕ್ಯೂಟರ್ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. 
ತುಮಕೂರು ಜಿಲ್ಲೆಯ ತಿಪಟೂರು ಮುನ್ಸಿಫ್ ನ್ಯಾಯಾಲಯದ ಪೂರ್ಣಿಮಾ ಜಿ.ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್.  
ಕೆ.ಇ‌.ಬಿ‌ ಇಂಜಿನಿಯರ್ ಗುರುಬಸವಸ್ವಾಮಿ ಎಂಬವರಿಂದ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೂರ್ಣಿಮಾ 40, 000 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಪೈಕಿ 20 ಸಾವಿರ ರೂ. ಹಣವನ್ನು ಬ್ಯಾಂಕ್‍ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಉಳಿದ 20 ಸಾವಿರ ರೂ.ಹಣವನ್ನು ನೇರವಾಗಿ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.
ಪೂರ್ಣಿಮಾ ಅವರನ್ನು ಅವರ ಕಚೇರಿಯಲ್ಲೇ ರಾತ್ರಿ 10.30 ರವೆರೆಗೆ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದರು. 
2015 ರಲ್ಲಿ ವಿದ್ಯುತ್ ಕಂಬ ವೃದ್ದೆ ಮೇಲೆ ಬಿದ್ದು ಕಾಲು ತುಂಡಾಗಿತ್ತು. ಇದೇ  ಪ್ರಕರಣದ ವಕಾಲತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ವಹಿಸಿದ್ದರು. ಪ್ರಕರಣ ನ್ಯಾಯಾಲಯದಲ್ಲಿ ನಿನ್ನೆ ಇತ್ಯರ್ಥಗೊಂಡಿತ್ತು. ಮೇಲ್ಮನವಿ ಸಲ್ಲಿಸದಿರಲು ಪೂರ್ಣಿಮಾ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com