ಸದಾ ತಂದೆಯ ನೆರಳಿನಂತಿದ್ದ ಅಮಾರ್ಥ್ಯ: ಸಿದ್ದಾರ್ಥ್ ಸ್ಥಿತಿ ತಿಳಿದಿದ್ದರೂ ಕುಟುಂಬ ಎಡವಿದ್ದೆಲ್ಲಿ?

ಕೆಫೆ ಕಾಫಿ ಡೇ ಮಾಲೀಕ ವಿಜೆ ಸಿದ್ದಾರ್ಥ್ ಅವರ ಸಾವು ಇಡೀ ದೇಶವನ್ನೇ ದಿಗ್ಭ್ರಮೆಗೊಳಿಸಿದೆ, ಸಿದ್ದಾರ್ಥ್ ಸಾವಿನ ನಂತರ ಹಲವು ವಿಷಯಗಳು ಬೆಳಕಿಗೆ ಬಂದಿವೆ. ...
ಸಿದ್ದಾರ್ಥ್
ಸಿದ್ದಾರ್ಥ್
Updated on
ಬೆಂಗಳೂರು: ಕೆಫೆ ಕಾಫಿ ಡೇ ಮಾಲೀಕ ವಿಜೆ ಸಿದ್ದಾರ್ಥ್ ಅವರ ಸಾವು ಇಡೀ ದೇಶವನ್ನೇ ದಿಗ್ಭ್ರಮೆಗೊಳಿಸಿದೆ, ಸಿದ್ದಾರ್ಥ್ ಸಾವಿನ ನಂತರ ಹಲವು ವಿಷಯಗಳು ಬೆಳಕಿಗೆ ಬಂದಿವೆ. 
ಕಳೆದ ನಾಲ್ಕು ತಿಂಗಳಿಂದ ಸಿದ್ದಾರ್ಥ್ ಖಿನ್ನತೆಗೆ ಒಳಗಾಗಿದ್ದರು. ಸಾಕಷ್ಟು ಸಮಯವನ್ನು ಒಬ್ಬಂಟಿಯಾಗಿಯೇ ಕಳೆಯುತ್ತಿದ್ದರು. ಯಾವಾಗಲೂ ನೋವಿನಿಂದ ಏನನ್ನೋ ಯೋಚಿಸುತ್ತಿದ್ದರು. ಸಿಸಿಡಿ ಕಾರ್ಯ ನಿರ್ವಾಹಕರೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದರು. ತೆರಿಗೆ ಅಧಿಕಾರಿಗಳ ಕಿರುಕುಳದಿಂದಾಗಿ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಕುಟುಂಬಸ್ಥರಿಗೆ ಸಿದ್ದಾರ್ಥ್ ಮನಸ್ಥಿತಿ ಬಗ್ಗೆ ತಿಳಿದಿತ್ತು. ಖಿನ್ನತೆಯ ಎಲ್ಲಾ ರೋಗ ಲಕ್ಷಣಗಳು ಅವರಲ್ಲಿ ಕಂಡು ಬಂದಿದ್ದವು, ಆದರೆ ಮಾನಸಿಕ ಆರೋಗ್ಯ ವೈದ್ಯ ಬಳಿ ಮಾತ್ರ ಹೋಗಿರಲಿಲ್ಲ. ಇದರ ಬಗ್ಗೆ ತಿಳಿದಿದ್ದ ಪತ್ನಿ ಮಾಳವಿಕಾ ಹಾಗೂ ಕುಟುಂಬಸ್ಥರು ಅವರ ಬಗ್ಗೆ ತುಂಬಾ ಎಚ್ಚರಿಕೆ ವಹಿಸಿದ್ದರು.  ಅವರ ಕಣ್ಣು ದೃಷ್ಟಿಯಿಂದ ಎಲ್ಲೂ ಹೊರಹೋಗಲು ಬಿಡುತ್ತಿರಲಿಲ್ಲ. ಅವರ ಪುತ್ರ ಅಮಾರ್ಥ್ಯ ಸದಾ ತಂಜೆ ಸಿದ್ದಾರ್ಥ್ ನೆರಳಿನಂತಿದ್ದ. ಆದರೆ ಆ ದಿನ ಮಾತ್ರ ವಿಧಿಯ ಕೈವಾಡ ಬೇರೆಯೇ ಇತ್ತು ಅಮಾರ್ಥ್ಯ ಜೊತೆಗಿರಲಿಲ್ಲ ಎಂದು ಆಪ್ತ ಮೂಲಗಳು ತಿಳಿಸಿವೆ.
ಸಿದ್ದಾರ್ಥ್ ಮೊದಲೇ ಎಲ್ಲವನ್ನು ಪ್ಲಾನ್ ಮಾಡಿಕೊಂಡು ಹೋಗಿದ್ದಾರೆ,ತಮ್ಮ ಆಪ್ತ ಕಾರ್ಯದರ್ಶಿಗೆ ಪತ್ರ ಬರೆದಿದ್ದ ಸಿದ್ದಾರ್ಥ್ ಮಂಗಳವಾರ ಅದನ್ನು ರಿಲೀಸ್ ಮಾಡುವಂತೆ ಸೂಚಿಸಿದ್ದರು. ಏಕೆಂದರೇ ಸೋಮವಾರ ಏನಾಗುತ್ತದೆ ಎಂಬುದು ಅವರ ಅರಿವಿಗೆ ಬಂದಿತ್ತು. ಸೋಮವಾರ ಬೆಳಗ್ಗೆ 8 ಗಂಟೆಗೆ ಕೆಲಸಕ್ಕೆ ಹೋಗಿದ್ದ ಸಿದ್ದಾರ್ಥ್ ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಿದ್ದರು. ತಮ್ಮ ಸ್ನೇಹಿತನ ವಾಹನ ಅಪಘಾತಕ್ಕೀಡಾಗಿದ್ದು, ಅವರಿಗೆ ತಮ್ಮ ನೆರವಿನ ಅವಶ್ಯಕತೆ ಇದೆ,. ಹೀಗಾಗಿ ನಾನು ಸಕಲೇಶಪುರಕ್ಕೆ ಹೋಗುತ್ತಿರುವುದಾಗಿ ಪತ್ನಿ ಮಾಳವಿಕಾಗೆ ತಿಳಿಸಿದ್ದಾರೆ, ಆದರೆ ಸಕಲೇಶಪುರದ ಬದಲಾಗಿ ಮಂಗಳೂರಿಗೆ ತೆರಳಿದ್ದಾರೆ,
ಮಾಳವಿಕಾ, ಸಿದ್ದಾರ್ಥ್ ಸ್ನೇಹಿತನಿಗೆ ಕರೆ ಮಾಡಿದ್ದಾರೆ, ಆದರೆ ಸಮಯ ಬಹಳ ಮೀರಿ ಹೋಗಿತ್ತು, ಸಿದ್ದಾರ್ಥ್ ತಮ್ಮಿಂದ ಬಹಳ ದೂರ ಹೋಗಿದ್ದಾರೆ ಎಂದು ಮಾಳವಿಕಾ ಅರಿವಿಗೆ ಬಂದಿತ್ತು, ಪರಿಸ್ಥಿತಿ ನೆನೆದು ತೀವ್ರ ಭಯಭೀತರಾಗಿದ್ದರು. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿಹೋಗಿತ್ತು ಎಂದು ಮೂಲಗಳು ತಿಳಿಸಿವೆ.
ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜು ವಿದ್ಯಾರ್ಥಿಯಾಗಿದ್ದ ಸಿದ್ದಾರ್ಥ್, ಮಂಗಳೂರಿನ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರು. ಅವರಿಗೆ ಸ್ಥಳೀಯ ಸೂಸೈಡ್ ಪಾಯಿಂಟ್ ಕೂಡ ಗೊತ್ತಿತ್ತು. ನಾಲ್ಕು ಪಥಗಳ ನೇತ್ರಾವತಿ ನದಿಯ ಸೇತುವೆ ಸುಮಾರು 800 ಮೀಟರ್ ದೂರದಲ್ಲಿ ಸೂಸೈಡ್ ಪಾಯಿಂಟ್ ಇದೆ ಎಂದು ತಿಳಿದಿತ್ತು. ಹೀಗಾಗಿ ದೂರದಲ್ಲಿಯೇ ಕಾರು ನಿಲ್ಲಿಸಿ, ಚಾಲಕನಿಗೆ ಅಲ್ಲಿಯೇ ಕಾಯುವಂತೆ ಸೂಚಿಸಿ, ಸೇತುವೆ ಮೇಲೆ ನಡೆದುಕೊಂಡು ಹೋಗಿದ್ದರು.
ಆದರೆ ಕತ್ತಲೆಯಲ್ಲಿ ಸಿದ್ದಾರ್ಥ್ ಅವರನ್ನು ಒಬ್ಬರೇ ಸೇತುವೆ ಮೇಲೆ ನಡೆದುಕೊಂಡು ಹೋಗಲು ಚಾಲಕ ಬಿಟ್ಟ ಎಂಬುದನ್ನು ಹಲವರು ಪ್ರಶ್ನಿಸಿದ್ದಾರ.  ಇನ್ನೂ ಬರುವ ದಾರಿಯುದ್ದಕ್ಕೂ ತಮ್ಮ ಹಲವು ಸ್ನೇಹಿತರಿಗೆ ಕರೆ ಮಾಡಿದ್ದ ಸಿದ್ದಾರ್ಥ್ ಎಲ್ಲರಿಗೂ ಕ್ಷಮೆ ಕೋರಿದ್ದರು. ಅವರು ಸಾಯುವ ಹಿಂದಿನ ದಿನ ತಮಗೆ ಬೇಕಾದ ಹಲವು ಸ್ನೇಹಿತರನ್ನು ಭೇಟಿ ಮಾಡಲು ಬಯಸಿದ್ದರು, ಆದರೆ ಅವರು ಯಾರ ಮೇಲೆ ತುಂಬಾ ಅವಲಂಬಿತವಾಗಿದ್ದರೋ ಆ ಗೆಳೆಯರು ಸಿದ್ದಾರ್ಥ್ ಗೆ ಸಿಕ್ಕಿರಲಿಲ್ಲ.
ಎಲ್ಲವೂ ಮುಗಿದು ಹೋಗಿದೆ, ಅಂದು ಸಿದ್ದಾರ್ಥ್ ಪುತ್ರ ಅಮಾರ್ಥ್ಯ ತಂದೆಯ ಜೊತೆಗಿದ್ದರೇ ಅವರ ಸಾವು ಸಂಭವಿಸುತ್ತಿರಲಿಲ್ಲವೇನೋ ಎಂಬ ಮಾತುಗಳು ಕೇಳಿ ಬರುತ್ತಿವೆ, ಆದರೆ ಭಗವಂತನ ಇಚ್ಚೆ ಏನಿರುತ್ತದೆಯೋ ಅದರಂತೆ ನಡೆಯುವ ಬದುಕು ಇದು, ಯಾವುದನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com