ನೆರವಿಗೆ ಧಾವಿಸಿದ ದತ್ತಿ ಇಲಾಖೆ, ಪ್ರವಾಹ ಸಂತ್ರಸ್ತರಿಗೆ ದೇಗುಲದ ಹರಕೆ ವಸ್ತ್ರಗಳ ವಿತರಣೆ!

ಭಾರಿ ಮಳೆ ಮತ್ತು ಭೀಕರ ಪ್ರವಾಹದಿಂದಾಗಿ ತತ್ತರಿಸಿ ಹೋಗಿರುವ ಕರ್ನಾಟಕದ ಜನತೆಯ ನೆರವಿಗೆ ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಕೂಡ ಮುಂದಾಗಿದ್ದು...
ನೆರವಿಗೆ ಧಾವಿಸಿದ ದತ್ತಿ ಇಲಾಖೆ, ಪ್ರವಾಹ ಸಂತ್ರಸ್ತರಿಗೆ ದೇಗುಲದ ಹರಕೆ ವಸ್ತ್ರಗಳ ವಿತರಣೆ!

ಬೆಂಗಳೂರು: ಭಾರಿ ಮಳೆ ಮತ್ತು ಭೀಕರ ಪ್ರವಾಹದಿಂದಾಗಿ ತತ್ತರಿಸಿ ಹೋಗಿರುವ ಕರ್ನಾಟಕದ ಜನತೆಯ ನೆರವಿಗೆ ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಕೂಡ ಮುಂದಾಗಿದ್ದು, ಪ್ರವಾಹ ಸಂತ್ರಸ್ತರಿಗೆ ದೇಗುಲದ ಹರಕೆ ವಸ್ತ್ರಗಳ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದೆ.

ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳ ಸಂತ್ರಸ್ತರಿಗೆ ಆಯಾ ಜಿಲ್ಲೆಯ ದೇವಾಲಯಗಳಿಗೆ ಹರಕೆ ರೂಪದಲ್ಲಿ ಸಲ್ಲಿಕೆಯಾಗಿರುವ ಸೀರೆ ಮತ್ತಿತರರ ವಸ್ತ್ರಗಳನ್ನು ವಿತರಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ. ಸತತ ಮಳೆ ಹಾಗೂ ನೆರೆ ಹಾವಳಿಯಿಂದ ರಾಜ್ಯದ ಅನೇಕ ಜಿಲ್ಲೆಗಳ ಬಹುತೇಕ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡು, ಹೊರಜಗತ್ತಿನಿಂದ ಸಂಪರ್ಕ ಕಡಿದುಕೊಂಡಿರುವುದರಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿಯಾಗಿದೆ. ಆದ್ದರಿಂದ ಅನೇಕ ಪ್ರಮುಖ ದೇವಾಲಯಗಳು ಹರಕೆ ರೂಪದಲ್ಲಿ ಭಕ್ತಾದಿಗಳಿಂದ ಸಲ್ಲಿಕೆಯಾಗಿರುವ ವಸ್ತ್ರಗಳನ್ನು ಸಂತ್ರಸ್ತರಿಗೆ ವಿತರಿಸಲು ಮುಂದೆ ಬಂದಿವೆ ಎಂದು ಇಲಾಖೆ ತಿಳಿಸಿವೆ.

ಇದಕ್ಕಾಗಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಇಲಾಖೆ ಆದೇಶ ನೀಡಲಾಗಿದ್ದು, ದತ್ತಿ ಇಲಾಖೆ ಅಡಿಯಲ್ಲಿ ಬರುವ ಎಲ್ಲ ಪ್ರಮುಖ ದೇಗುಲಗಳಲ್ಲಿ ಹರಕೆ ರೂಪದಲ್ಲಿ ಸಂಗ್ರಹವಾಗಿರುವ ವಸ್ತ್ರಗಳು ಮತ್ತು ಇತರೆ ನಿತ್ಯ ಬಳಕೆಯ ವಸ್ತುಗಳನ್ನು ಸಂತ್ರಸ್ಥರಿಗೆ ವಿತರಿಸುವಂತೆ ಆದೇಶ ನೀಡಿದೆ. ದತ್ತಿ ಇಲಾಖೆಯ ಈ ಆದೇಶ ಇತರೆ ಇಲಾಖೆಗಳು ಮಾತ್ರವಲ್ಲದೇ ರಾಜ್ಯದ ಜನರಿಗೂ ಪ್ರವಾಹ ಸಂತ್ರಸ್ಥರಿಗೆ ನೆರವಾಗುವ ಕುರಿತು ಸ್ಪೂರ್ತಿ ನೀಡಿದಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com