ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ: ಪೇಜಾವರ ಶ್ರೀಗಳಿಂದ 15 ಲಕ್ಷ ರು. ನೆರವು ಘೋಷಣೆ

ರಾಜ್ಯದ ಪ್ರವಾಹ ಪರಿಸ್ಥಿತಿ ದಿನದಿನಕ್ಕೆ ಬಿಗಡಾಯಿಸುತ್ತಿದೆ, ಜನತೆ ಕಷ್ಟದಲ್ಲಿದೆ. ಇದಕ್ಕಾಗಿ ಮಠದಿಂಡ ಹದಿನೈದು ಲಕ್ಷ  ರು. ನೆರವು ನೀಡುವುದಾಗಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿ  ಘೋಷಿಸಿದ್ದಾರೆ. 
ಪೇಜಾವರ  ಶ್ರೀಗಳು
ಪೇಜಾವರ ಶ್ರೀಗಳು

ಮೈಸೂರು: ರಾಜ್ಯದ ಪ್ರವಾಹ ಪರಿಸ್ಥಿತಿ ದಿನದಿನಕ್ಕೆ ಬಿಗಡಾಯಿಸುತ್ತಿದೆ, ಜನತೆ ಕಷ್ಟದಲ್ಲಿದೆ. ಇದಕ್ಕಾಗಿ ಮಠದಿಂಡ ಹದಿನೈದು ಲಕ್ಷ  ರು. ನೆರವು ನೀಡುವುದಾಗಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿ  ಘೋಷಿಸಿದ್ದಾರೆ.

ಮೈಸೂರಿನ ಸರಸ್ವತಿಪುರಂನ ಕೃಷ್ಣಧಾಮದಲ್ಲಿ  ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸ್ವಾಮೀಜಿ ರಾಜ್ಯದಲ್ಲಿ ನಾನಾ ಕಡೆ ನೆರೆ ಪರಿಸ್ಥಿತಿ ಉಂತಾಗಿದ್ದು ಜನರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಸಾರ್ವಜನಿಕರು, ಭಕ್ತರು ಅವರ ಕಷ್ಟಗಳಿಗೆ ಸ್ಪಂದಿಸಿ ಎಂದು ಮನವಿ ಮಾಡಿದ್ದಾರೆ.

ಇದೀಗ ಚಾತುರ್ಮಾಸದ ಕಾರಣ ನೆರೆ ಪೀಡಿತ ಪ್ರದೇಶಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಆದರೆ ಮಠದ ಪದಾಧಿಕಾರಿಗಳನ್ನು ಇಲ್ಲಿಗೆ ಬರಹೇಳಿದ್ದು ಮುಂದೆ ಯಾವ ರೀತಿಯಲ್ಲಿ ಸಹಾಯ ನೀಡಬಹುದೆಂದು ತೀರ್ಮಾನಿಸುತ್ತೇನೆ. ಸದ್ಯ ಬೆಳಗಾವಿಯ ಒಂದು ಪ್ರದೇಶ ಆಯ್ಕೆ ಮಾಡಿಕೊಂಡು  ಪರಿಹಾರ ಕಾರ್ಯ ಕೈಗೊಳ್ಳಲಾಗುವುದು. ಯುವಕರು ಶ್ರಮದಾನದ ಮೂಲಕ  ಪರಿಸ್ಥಿತಿ ನಿಭಾಯಿಸಲು ಸಹಕರಿಸಬೇಕಿದೆ. ಚಾತುರ್ಮಾಸ ಮುಗಿದ ನಂತರ ಧಾರವಾಡ, ಹುಬ್ಬಳ್ಳಿ, ಬೆಳಗಾವಿಗಳಲ್ಲಿ ಪಾದಯಾತ್ರೆ ಕೈಗೊಳ್ಳಲಾಗುವುದು ಎಂದು ಶ್ರೀಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com