
ಬೆಂಗಳೂರು: ರಾಜ್ಯಾದ್ಯಂತ ಅತೀವೃಷ್ಟಿಯಿಂದಾದ ನಷ್ಟವನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರ್ಕಾರ ಘೋಷಿಸಿ ನೆರವು ನೀಡಬೇಕು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಆಗ್ರಹಿಸಿದ್ದಾರೆ, ಆದರೆ ಈ ವಿಷಯವಾಗಿ ಸಿಎಂ ಯಡಿಯೂರಪ್ಪ ತುಟಿ ಬಿಚ್ಚದೇ ಮೌನವಾಗಿದ್ದಾರೆ.
ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಅವರಿಗೆ ಇನ್ನೂ ಗೊಂದಲವಿರುವ ಕಾರಣ ಯಾವುದೇ ಹೇಳಿಕೆ ನೀಡುತ್ತಿಲ್ಲ, ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವ ಸಂಬಂಧ ಕಾನೂನಿನಲ್ಲಿ ಸರಿಯಾದ ಉಲ್ಲೇಖವಿಲ್ಲ,
ಕಳೆದ ವರ್ಷ ಕೇರಳದಲ್ಲಿ ಇದೇ ರೀತಿಯ ಪ್ರವಾಹ ಸಂಭವಿಸಿತ್ತು. ಆಗ ಕೇಂದ್ರ ಸರ್ಕಾರ ತೀವ್ರ ಸ್ವರೂಪದ ನೈಸರ್ಗಿಕ ವಿಪತ್ತು ಎಂದು ಘೋಷಿಸಿತ್ತು. ರಾಷ್ಟ್ರೀಯ ವಿಪತ್ತಪ ನಿರ್ವಹಣಾ ಮಾರ್ಗಸೂಚಿಯ ಅಡಿಯಲ್ಲಿ 3ನೇ ಮಟ್ಟದ ವಿಪತ್ತು ಎಂದು ಘೋಷಿಸಲಾಗಿತ್ತು.
ರಾಜ್ಯದಲ್ಲಿ 95 ತಾಲೂಕುಗಳು ಪ್ರವಾಹ ಪೀಡಿತವಾಗಿವೆ. ಇದು ರಾಜ್ಯದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉಂಟಾದ ಪ್ರವಾಹವಾಗಿದೆ, ಇದು ರಾಷ್ಟ್ರೀಯ ವಿಪತ್ತು ಎಂಬ ಬಗ್ಗೆ ನಮಗೆ ಸ್ಪಷ್ಟತೆಯಿಲ್ಲ, ಎನ್ ಡಿ ಆರ್ ಎಫ್ ಮಾರ್ಗಸೂಚಿ ಅನ್ವಯ ಕಂದಾಯ ಇಲಾಖೆ ಮನೀಡುವ ಮಾಹಿತಿ ಮೇಲೆ ನಿರ್ಧರಿಸಲಾಗುತ್ತದೆ ಎಂದುರಾಜ್ಯ ವಿಪತ್ತು ನಿರ್ವಹಣಾ ದಳದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ನಿರ್ದಿಷ್ಟ ಮಾನದಂಡಗಳಿಲ್ಲದ ಕಾರಣ ಎನ್ ಡಿಆರ್ ಎಫ್ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಪರಿಹಾರ ನಿಧಿ ಬಿಡುಗಡೆ ಮಾಡಿದೆ. ಭಾಗಶಃ ಹಾನಿಗೊಳಗಾದ ಮನೆಗಳಿಗೆ ಒಂದು ರೀತಿಯ ಪರಿಹಾರ, ಪೂರ್ಣ ಹಾನಿಯಾದ ಮನೆಗಳಿಗೆ ಒಂದು ರೀತಿಯ ಪರಿಹಾರ ನೀಡಲಾಗುತ್ತದೆ. ಹದಗೆಟ್ಟ ಮೂಲಭೂತ ಸೌಕರ್ಯಗಳ ಪುನರ್ ನಿರ್ಮಾಣಕ್ಕೆ ಹಾಗೂ ಪ್ರವಾಹಕ್ಕೆ ಬಲಿಯಾದವರಿಗೆ ಪ್ರತ್ಯೇಕ ಪರಿಹಾರ ನೀಡಲಾಗುತ್ತದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ್ ಭಾಸ್ಕರ್ ಹೇಳಿದ್ದಾರೆ.
ದೇಶದ ಇನ್ನೂ ಇತರೆ 5 ರಾಜ್ಯಗಳಲ್ಲಿ ಕರ್ನಾಟಕದ ಪರಿಸ್ಥಿತಿಯೇ ಇದೆ,. ಅವರಿಗೂ ಕೂಡ ನಾವು ನೆರವು ನೀಡುತ್ತಿದ್ದೇವೆ, ಪ್ರವಾಹವನ್ನು “ರಾಷ್ಟ್ರೀಯ ವಿಪತ್ತು” ಎಂದು ಘೋಷಿಸಿದ ನಂತರವೇ ನೆರವು ನೀಡಬೇಕಾಗಿಲ್ಲ, ಅದಕ್ಕೂ ಮೊದಲೇ ನಾವು ಪರಿಹಾರ ನೆರವು ನೀಡಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.
Advertisement