ಗೃಹ ಪ್ರವೇಶದ ವೆಚ್ಚವನ್ನು ಪ್ರವಾಹ ಸಂತ್ರಸ್ತರಿಗೆ ನೀಡಲು ಮುಂದಾಗಿರುವ ಬೆಂಗಳೂರಿನ ಯುವಕ ಶೇಖರ್!

ಮಾಗಡಿ ರಸ್ತೆಯ ಗಂಗೊಂಡನಹಳ್ಳಿಯಲ್ಲಿ ಒಂದು ಕನಸಿನ ಮನೆಯನ್ನು ಕಟ್ಟಿಕೊಳ್ಳಲು ಹೂವಿನ ಅಲಂಕಾರ ಕೆಲಸ ಮಾಡುವ ಶೇಖರ್ ಗೆ ಮೂರು ವರ್ಷ ಹಿಡಿಯಿತು. ಈಗ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಅನೇಕ ಜಿಲ್ಲೆಗಳ ಜನರು ತತ್ತರಿಸಿಹೋಗಿದ್ದಾರೆ.  
ಶೇಖರ್
ಶೇಖರ್

ಬೆಂಗಳೂರು: ಮಾಗಡಿ ರಸ್ತೆಯ ಗಂಗೊಂಡನಹಳ್ಳಿಯಲ್ಲಿ ಒಂದು ಕನಸಿನ ಮನೆಯನ್ನು ಕಟ್ಟಿಕೊಳ್ಳಲು ಹೂವಿನ ಅಲಂಕಾರ ಕೆಲಸ ಮಾಡುವ ಶೇಖರ್ ಗೆ ಮೂರು ವರ್ಷ ಹಿಡಿಯಿತು. ಈಗ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಅನೇಕ ಜಿಲ್ಲೆಗಳ ಜನರು ತತ್ತರಿಸಿಹೋಗಿದ್ದಾರೆ. 


ಇಂತಹ ಪರಿಸ್ಥಿತಿಯಲ್ಲಿ ತನ್ನ ಗೃಹ ಪ್ರವೇಶ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡದೆ ಕಾರ್ಯಕ್ರಮ ವೆಚ್ಚದ ಹಣವನ್ನು ಶೇಖರ್ ಪ್ರವಾಹ ಪೀಡಿತ ಪ್ರದೇಶಗಳ ಜನರ ಸಹಾಯಕ್ಕೆ ಕಳುಹಿಸುತ್ತಿದ್ದಾರೆ. 


35 ವರ್ಷದ ಶೇಖರ್ ಚಂದ್ರ ಲೇ ಔಟ್ ನಲ್ಲಿ ಹೂವಿನ ಅಲಂಕಾರ ಉದ್ಯಮ ನಡೆಸುತ್ತಿದ್ದಾರೆ. ಇತರ ಮಧ್ಯಮ ವರ್ಗದವರಂತೆ ಶೇಖರ್ ಕೂಡ ಬೆಂಗಳೂರಿನಲ್ಲಿ ಒಂದು ಸ್ವಂತ ಮನೆ ಕಟ್ಟಿಕೊಳ್ಳಬೇಕೆಂಬ ಕನಸು ಕಾಣುತ್ತಿದ್ದರು. ತನ್ನ ಸಂಪಾದನೆಯಲ್ಲಿ ಉಳಿತಾಯ ಮಾಡಿದ್ದ ಸ್ವಲ್ಪ ಹಣ ಮತ್ತು ಸಾಲ ತೆಗೆದುಕೊಂಡು ಶೇಖರ್ ಮನೆ ಕಟ್ಟಿಸಿ ಅದಕ್ಕೆ ಭಾಗ್ಯಮ್ಮ ಎಂದು ಹೆಸರಿಟ್ಟರು. 
ಶ್ರಾವಣ ಮಾಸದಲ್ಲಿ ಒಂದು ಒಳ್ಳೆಯ ಮುಹೂರ್ತ ನೋಡಿ ಆಗಸ್ಟ್ 24ಕ್ಕೆ ಗೃಹಪ್ರವೇಶ ಮಾಡುವುದೆಂದು ತೀರ್ಮಾನಿಸಿದ್ದರು.

ಕಾರ್ಯಕ್ರಮಕ್ಕೆ ಸುಮಾರು 200 ಜನ ಅತಿಥಿಗಳಿಗೆ ಕರೆದಿದ್ದರು. ಊಟಕ್ಕೆ ಕ್ಯಾಟರಿಂಗ್ ಸರ್ವಿಸ್ ನವರಿಗೆ ಕೂಡ ಶೇಖರ್ ಹೇಳಿಟ್ಟಿದ್ದರು. ಆದರೆ ಉತ್ತರ ಕರ್ನಾಟಕ, ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ ಮೊದಲಾದ ಕಡೆಗಳಲ್ಲಿ ಉಂಟಾಗಿರುವ ಪ್ರವಾಹ ಮತ್ತು ಅದರಿಂದ ಜನರು ಅನುಭವಿಸುತ್ತಿರುವ ಕಷ್ಟ ನೋಡಿ ಕ್ಯಾಟರಿಂಗ್ ಗೆ ಇಟ್ಟಿದ್ದ ಹಣವನ್ನು ದವಸ-ಧಾನ್ಯ ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಿ ಅದನ್ನು ಕಳುಹಿಸಲು ಶೇಖರ್ ಮುಂದಾಗಿದ್ದಾರೆ. ಬೆಂಗಳೂರಿನ ಒಂದು ಪರಿಹಾರ ಸಾಮಗ್ರಿ ಸಂಗ್ರಹ ಕೇಂದ್ರಕ್ಕೆ ಈಗಾಗಲೇ 20 ಸಾವಿರ ರೂಪಾಯಿ ನೀಡಿದ್ದಾರೆ. 


ತಮ್ಮ ಗೃಹ ಪ್ರವೇಶಕ್ಕೆ ಸ್ನೇಹಿತರು ಮತ್ತು ಬಂಧುಗಳು ಗಿಫ್ಟ್ ಗಳನ್ನು ನೀಡುವ ಬದಲು ಅದೇ ಹಣವನ್ನು ಪ್ರವಾಹ ಪೀಡಿತರ ನೆರವಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com