ಬೆಂಗಳೂರು: ಹಿಂದಿ ಬ್ಯಾನರ್ ಹರಿದ 6 ಕನ್ನಡ ಕಾರ್ಯಕರ್ತರ ಬಂಧನ

ಬೆಂಗಳೂರಿನ ಇನ್ ಫ್ಯಾಂಟ್ರಿ ರಸ್ತೆಯ ಪ್ರಾರ್ಥನಾ ಮಂದಿರದ ಹೊರಗೆ ಜೈನ ಸಮುದಾಯದ ಕೆಲವು ಸದಸ್ಯರು ಹಾಕಿದ ಹಿಂದಿ ಬೋರ್ಡ್ ನ್ನು ಕೆಲ ಕನ್ನಡ ಪರ ಕಾರ್ಯಕರ್ತರು ತೆಗೆದುಹಾಕಿದ ಘಟನೆಯೊಂದು ರಾಜ್ಯದಲ್ಲಿ ಮತ್ತೊಂದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. 
ಬೆಂಗಳೂರು: ಹಿಂದಿ ಬ್ಯಾನರ್ ಹರಿದ 6 ಕನ್ನಡ ಕಾರ್ಯಕರ್ತರ ಬಂಧನ
ಬೆಂಗಳೂರು: ಹಿಂದಿ ಬ್ಯಾನರ್ ಹರಿದ 6 ಕನ್ನಡ ಕಾರ್ಯಕರ್ತರ ಬಂಧನ
Updated on

ಬೆಂಗಳೂರು: ಬೆಂಗಳೂರಿನ ಇನ್ ಫ್ಯಾಂಟ್ರಿ ರಸ್ತೆಯ ಪ್ರಾರ್ಥನಾ ಮಂದಿರದ ಹೊರಗೆ ಜೈನ ಸಮುದಾಯದ ಕೆಲವು ಸದಸ್ಯರು ಹಾಕಿದ ಹಿಂದಿ ಬೋರ್ಡ್ ನ್ನು ಕೆಲ ಕನ್ನಡ ಪರ ಕಾರ್ಯಕರ್ತರು ತೆಗೆದುಹಾಕಿದ ಘಟನೆಯೊಂದು ರಾಜ್ಯದಲ್ಲಿ ಮತ್ತೊಂದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಈ ಘಟನೆ ಸಂಬಂಧ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಯಿವೆ.

ಇನ್ನು ಘಟನೆ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಪೋಲೀಸರು ಆರು ಮಂದಿ ಕನ್ನಡ ಹೋರಾಟಗಾರರನ್ನು ಬಂಧಿಸಿದ್ದಾರೆ.“ಆಗಸ್ಟ್ 16 ರಂದು ಈ ಘಟನೆ ಸಂಭವಿಸಿದೆ ಮತ್ತು ಮರುದಿನ ಜೈನ ಸಮುದಾಯದ ಮುಖಂಡರು ಪೊಲೀಸರನ್ನು ಸಂಪರ್ಕಿಸಿದರು.ಇದಕ್ಕಾಗಿ ಕನ್ನಡ ಪರ ಸಂಘಟನೆಯ ಸದಸ್ಯರಾದ ಹರೀಶ್ ಗೌಡ ಮತ್ತು ಅವರ ಐದು ಸಹಚರರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ”ಪೋಲೀಸರು ಹೇಳಿದ್ದಾರೆ.

ಆದರೆ  ಕನ್ನಡ ಪರ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಂಡ ಸರ್ಕಾರದ ಈ ಕ್ರಮವನ್ನು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಖಂಡಿಸಿದೆ. ಅಲ್ಲದೆ  ಬೆಂಗಳೂರು ದಕ್ಷಿಣದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಜೈನ ಸಮುದಾಯದ ಯುವಕರನ್ನು ಸಮರ್ಥಿಸಿ ಟ್ವೀಟ್ ಮಾಡಿದ್ದಾರೆ.“ಬೆಂಗಳೂರಿನಲ್ಲಿರುವ ನಮ್ಮ ಜೈನ ಸಹೋದರರ ದೇವಾಲಯದ ಬ್ಯಾನರ್‌ ಹರಿದು ಹಾಕಿ ರೌಡಿಗಳಂತೆ ಹಲ್ಲೆ ನಡೆಸಿದ ಬಗ್ಗೆ ತೀವ್ರವಾಗಿ ನೋವಿದೆ.ಆದಾಗ್ಯೂ ಅವರು ಎಂದಿಗೂ ಬೆಂಗಳೂರಿನಲ್ಲಿ ಉರ್ದು ಬಳಕೆಯನ್ನು ಪ್ರಶ್ನಿಸುವುದಿಲ್ಲ. ಕರ್ನಾಟಕಕ್ಕೆ ಕೊಡುಗೆ ನೀಡಿದ ಶಾಂತಿಯುತ ಜೈನರ ಮೇಲೆ ಹಲ್ಲೆ ಮಾಡುವುದು ನಿಜವಾದ ಕನ್ನಡ ಪ್ರಿಯರಿಗೆ ಮತ್ತು ಕಾರ್ಯಕರ್ತರಿಗೆ ಅಪಖ್ಯಾತಿಯನ್ನು ತರುತ್ತದೆ. ’’ ಅವರು ಹೇಳಿದ್ದಾರೆ.

"ಪಂಪ, ರನ್ನ, ಪೊನ್ನರನ್ನು ಪ್ರಾಚೀನ ಕನ್ನಡದ ರತ್ನತ್ರಯರು ಎಂದು ಕರೆಯುತ್ತೇವೆ.ಇಂತಹಾ ನೇಕ ಶ್ರೇಷ್ಠ ಕವಿಗಳು ಅಥವಾ ಕನ್ನಡ ಸಾಹಿತ್ಯದ ಮೇರು ವ್ಯಕ್ತಿಗಳು  ಜೈನರು. ಕನ್ನಡ ಸಾಹಿತ್ಯದ ಪ್ರಾರಂಭವು ಜೈನ ಯುಗ. ಆದ್ದರಿಂದ, ಈ ಇತಿಹಾಸವನ್ನು ಕಲಿಯಲು ಹಾಗೂ ಇಂದಿನ ಯುವ ಜೈನ ಸಮುದಾಯ ತಮ್ಮ ಸಂವಹನಗಳಲ್ಲಿ ಕನ್ನಡವನ್ನು ಬಳಸುವಂತೆ ನಾನು ಒತ್ತಾಯಿಸುತ್ತೇನೆ" ಸಂಸದ ಹೇಳಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಟ್ವೀಟ್‌ನಲ್ಲಿ ಈ ಘಟನೆಗೆ ಧಾರ್ಮಿಕ ಮತ್ತು ರಾಜಕೀಯ ಬಣ್ಣವನ್ನು ನೀಡುವ ಮೂಲಕ ಕನ್ನಡ ಕಾರ್ಯಕರ್ತರ ಸ್ವಾತಂತ್ರ್ಯವನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ಈ ಘಟನೆಯನ್ನು ಖಂಡಿಸಿದ ಅವರು, ಈ ಕಾರ್ಯಕರ್ತರನ್ನು ಸರ್ಕಾರ ಬಿಡುಗಡೆ ಮಾಡಬೇಕು ಮತ್ತು ಕನ್ನಡ ಮತ್ತು ಸಂಸ್ಕೃತಿಗೆ ಕೆಲಸ ಮಾಡುವ ಜನರ ಮನೋಭಾವವನ್ನು ಗೌರವಿಸಬೇಕು ಎಂದು ಹೇಳಿದರು

ಆರು ಮಂದಿಯ ವಿರುದ್ಧ ಐಪಿಸಿ 153 ಎ ಮತ್ತು ಐಪಿಸಿ ಸೆಕ್ಷನ್ 427 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮತ್ತು ಅವರಾರಿಗೂ ಜಾಮೀನು ಸಿಕ್ಕಿಲ್ಲ.

ಜೆಡಿಎಸ್ ಪಕ್ಷ ಸಹ ಕಾರ್ಯಕರ್ತರ ಬಂಧನ ವಿರುದ್ಧ ಕಳವಳ ವ್ಯಕ್ತಪಡಿಸಿದೆ. ಪಕ್ಷದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ "ಕಾರ್ಯಕರ್ತರು ಕನ್ನಡ ಪೋಸ್ಟರ್ ಗಳನ್ನು ಹಾಕಿರೆಂದು ಹೇಳಿದ್ದಾರೆ. ಆದರೆ ಈ ಘಟನೆಗೆ ಬಿಜೆಪಿ ಧಾರ್ಮಿಕ ಸ್ಪರ್ಶ ನೀಡುತ್ತಿರುವುದು ದುರದೃಷ್ಟಕರ," ಎಂದು ಹೇಳೀದೆ.

ಈ ಘಟನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ, “ನಮ್ಮ ಕನ್ನಡಿಗರ ಹಿತಾಸಕ್ತಿಗಳನ್ನು ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಕಾನೂನಿನ ಪ್ರಕಾರ ಹಲ್ಲೆ ನಡೆಸಿದ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಇದಕ್ಕೆ ಕನ್ನಡ ಕಾರ್ಯಕರ್ತರಿಗೆ ಯಾವುದೇ ಸಂಬಂಧವಿಲ್ಲ. ನಾನು ಕನ್ನಡಿಗ ಪರವಾಗಿರುವಷ್ಟೇ ರೈತಪರವೂ ಆಗಿದ್ದೇನೆ" ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com