ಪ್ರಧಾನಿ ಮೋದಿ ಕನಸಿನ ಯೋಜನೆ 'ಎಲ್ಲರಿಗೂ ಸೂರು' ಸಾಕಾರಗೊಳಿಸಲು ನಾನು ಬದ್ಧ: ಸೋಮಣ್ಣ

ಲಿಂಗಾಯತ ಪ್ರಮುಖ ನಾಯಕ ವಿ.ಸೋಮಣ್ಣ ಅವರನ್ನು ಯಡಿಯೂರಪ್ಪ ಸರ್ಕಾರದಲ್ಲಿ ವಸತಿ ಸಚಿವರನ್ನಾಗಿ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ  ಕನಸಿನ ಯೋಜನೆಯಾದ 2022ರ ವೇಳೆಗೆ 'ಎಲ್ಲರಿಗೂ ಸೂರು'...
ವಿ.ಸೋಮಣ್ಣ
ವಿ.ಸೋಮಣ್ಣ
Updated on

ಮೈಸೂರು: ಲಿಂಗಾಯತ ಪ್ರಮುಖ ನಾಯಕ ವಿ.ಸೋಮಣ್ಣ ಅವರನ್ನು ಯಡಿಯೂರಪ್ಪ ಸರ್ಕಾರದಲ್ಲಿ ವಸತಿ ಸಚಿವರನ್ನಾಗಿ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ  ಕನಸಿನ ಯೋಜನೆಯಾದ 2022ರ ವೇಳೆಗೆ 'ಎಲ್ಲರಿಗೂ ಸೂರು' ನನಸು ಮಾಡಲು ತಾವು ಬದ್ದರಾಗಿರುವುದಾಗಿ ವಸತಿ ಸಚಿವ ವಿ, ಸೋಮಣ್ಣ ಹೇಳಿದ್ದಾರೆ. ದಿನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದಲ್ಲಿ ಬಡವರಿಗೆ ಕನಸಿನ ಮನೆ ನಿರ್ಮಿಸಲು ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗಿದೆ.

ಪ್ರ: ಎರಡನೇ ಬಾರಿ ವಸತಿ ಸಚಿವರಾಗಿ ನೇಮಕವಾಗಿದ್ದೀರಿ, ನಿಮ್ಮ ಮುಂದಿರುವ ಸವಾಲುಗಳೇನು?
ನಾನು ಇಂಥಹುದ್ದೆ ಖಾತೆ ನೀಡಿ ಎಂದು ಕೇಳಿರಲಿಲ್ಲ,  ಸಿಎಂ ಯಡಿಯೂರಪ್ಪ ಮತ್ತು ಪಕ್ಷದ ನಾಯಕರು ನನ್ನ ಮೇಲೆ ನಂಬಿಕೆ ಇಟ್ಟು ಜವಾಬ್ದಾರಿ ವಹಿಸಿದ್ದಾರೆ,  ನಾನು ಹಿಂದೆ ಇದೇ ಕಾತೆ ನಿರ್ವಹಿಸಿದ್ದ ಕಾರಣ ನನಗೆ ವಸತಿ ಖಾತೆಯಲ್ಲಿ ಅನುಭವವಿದೆ ಎಂಬ ಕಾರಣಕ್ಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಪ್ರ: ಮೋದಿ  ಕನಸಿನ ಸಾಕಾರಕ್ಕೆ ಇನ್ನೂ ಮೂರು ವರ್ಷ ಮಾತ್ರ ಬಾಕಿಯಿದೆ, ನೀವು ಸಿದ್ದರಾಗಿದ್ದೀರಾ?
ಸೂರಿಲ್ಲದವರಿಗೆ ಮನೆ ಕಲ್ಪಿಸುವ ಮೋದಿ ಕನಸನ್ನು ಸಾಕಾರಗೊಳಿಸಲು ನಾವೆಲ್ಲರೂ ಬದ್ದರಾಗಿದ್ದೇವೆ, ಮನೆ ನಿರ್ಮಿಸಿಕೊಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜೊತೆಗೂಡಿ ನಿರ್ಮಿಸುತ್ತಿದ್ದೇವೆ, ಈ ಹಿಂದೆ ಮನೆ ನಿರ್ಮಾಣ ಮಾಡಲು ಸರ್ಕಾರ 5 ಲಕ್ಷ ರು ನೀಡುತ್ತಿತ್ತು, ಆದರೆ ಈ ಸಂಬಂಧ ನಾನು ಪ್ರದಾನಿ ಮಂತ್ರಿ ಅವರನ್ನು ಭೇಟಿ ಮಾಡಿ ಗುತ್ತಿಗೆದಾರರಿಗೆ ಹಣ ನೀಡುವ ಬದಲು ಫಲಾನುಭವಿಗಳಿಗೆ ಹಣ ನೀಡಿ ಅವರೇ ಮನೆ ನಿರ್ಮಿಸಿಕೊಳ್ಳಲು ಕೋರುತ್ತೇನೆ.

ಪ್ರ: ಕರ್ನಾಟಕವನ್ನು ಕೊಳಚೆಪ್ರಪದೇಶ ಮುಕ್ತವನ್ನಾಗಿ ಮಾಡಲು ಕೊಳಚೆ ನಿರ್ಮೂಲನಾ ಮಂಡಳಿ ಹಾಗೂ ವಸತಿ ಇಲಾಖೆ ಕೈಗೊಂಡಿರುವ ಕ್ರಮ ಏನು?

ಕರ್ನಾಟಕ ವಸತಿ ಮಂಡಳಿ ಮತ್ತು ಕೊಳೆಗೇರಿ ಮಂಡಳಿಯನ್ನು ಪುನರುಜ್ಜೀವನಗೊಳಿಸಲು ನಾನು ನಿರ್ಧರಿಸಿದ್ದೇನೆ. ನನ್ನ ಹಿಂದಿನ ಆಡಳಿತದಲ್ಲಿ ಮಾಡಿರುವ ಕೆಲಸವನ್ನು ಮಾಡಬೇಕೆಂದು ನಾನು ಬಯಸುತ್ತೇನೆ. ಹಿಂದಿನ ಸಮೀಕ್ಷೆ ಮತ್ತು ವರದಿಗಳನ್ನು ನಾನು ಒಪ್ಪುವುದಿಲ್ಲ, ಹೀಗಾಗಿ ವಸತಿ ಹೀನರ ಸಂಖ್ಯೆ ಹೆಚ್ಚಾಗುತ್ತಿದೆ, ಹೀಗಾಗಿ ಹೊಸದಾಗಿ ಅಂಕಿ ಅಂಶ ತರಿಸಿಕೊಳ್ಳುತ್ತೇನೆ, ನಾನು ಸದ್ಯ ದಸರಾದ ಸಿದ್ದತೆಗಳ ಬಗ್ಗೆ ಗಮನ ವಹಿಸುತ್ತಿದ್ದೇನೆ.

ಪ್ರ: ದಸರಾ ಹಬ್ಬಕ್ಕಾಗಿ ಮಾಡಿಕೊಂಡಿರುವ ಸಿದ್ಧತೆಗಳೇನು?
ದಸರಾ ವಿಶ್ವ ವಿಖ್ಯಾತವಾದ ಹಬ್ಬ,ಜಗತ್ತಿನ ಹಲವು ಭಾಗದ ಪ್ರವಾಸಿಗರನ್ನು ಆಕರ್ಷಿಸಲು ನಾನು ವಿವಿಧ ರೀತಿಯ ಸಿದ್ಧತೆ ನಡೆಸುತ್ತಿದ್ದೇನೆ,  ಯಾವುದೇ ರೀತಿಯ ಗೊಂದಲಗಳಿಲ್ಲದೇ ತಯಾರಿ ನಡೆಯುತ್ತಿದೆ.

ಪ್ರ: ಮೈಸೂರು ದಸಾರಗೆ ನಿಮ್ಮದೇ ಪಕ್ಷದ ಕೆಲ ಮುಖಂಡರು ಸಹಕರಿಸುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿವೆ?

ಅಂತಹ ಯಾವುದೇ ಸಮಸ್ಯೆಗಳಿಲ್ಲ, ಎಲ್ಲರನ್ನು ವಿಶ್ವಾಸತ್ತೆ ತೆಗೆದುಕೊಂಡು ದಸರಾ ಸಂಬಂಧಿತ ಎಲ್ಲಾ ಕೆಲಸ ಮಾಡುತ್ತಿದ್ದೇವೆ, ಸಿಎಂ ಆಗಮಿಸಿದ್ದಾಗ ಶಾಸಕ ರಾಮದಾಸ್ ಬಂದಿದ್ದರು. ಎಲ್ಲರೂ ಜೊತೆಗೂಡಿ ಕೆಲಸ ಮಾಡುತ್ತಿದ್ದೇವೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com