ವಿದೇಶಿ ಪ್ರವಾಸಿಗರಿಗಾಗಿ ಬನಶಂಕರಿಯಲ್ಲಿ ಸ್ಟಾರ್ ಹೋಟೆಲ್

ವಾಸ್ತು ಶಿಲ್ಪಗಳ ತೊಟ್ಟಿಲು, ಐತಿಹಾಸಿ ಸ್ಮಾರಕಗಳ ಪ್ರವಾಸಿ ತಾಣವಾಗಿರುವ ಬಾಗಲಕೋಟೆ ಜಿಲ್ಲೆಗೆ ಬರುವ ವಿದೇಶಿ ಪ್ರವಾಸಿಗರು ವಾಸ್ತವ್ಯಕ್ಕೆ ಅಗತ್ಯ ಮೂಲ ಸೌಕರ್ಯಗಳ ಕೊರತೆ ಪರಿಣಾಮ ಹಂಪಿ ಇಲ್ಲವೆ ಗೋವಾಕ್ಕೆ ಹೋರಟು ಬಿಡುತ್ತಾರೆ ಎನ್ನುವ ಅಪವಾದದಿಂದ ಮುಕ್ತವಾಗುವ ಕಾಲ ಸನ್ನಿಹಿತವಾಗಿದೆ.
ವಿದೇಶಿ ಪ್ರವಾಸಿಗರಿಗಾಗಿ ಬನಶಂಕರಿಯಲ್ಲಿ ಸ್ಟಾರ್ ಹೋಟೆಲ್
ವಿದೇಶಿ ಪ್ರವಾಸಿಗರಿಗಾಗಿ ಬನಶಂಕರಿಯಲ್ಲಿ ಸ್ಟಾರ್ ಹೋಟೆಲ್
Updated on

ಬಾಗಲಕೋಟೆ: ವಾಸ್ತು ಶಿಲ್ಪಗಳ ತೊಟ್ಟಿಲು, ಐತಿಹಾಸಿ ಸ್ಮಾರಕಗಳ ಪ್ರವಾಸಿ ತಾಣವಾಗಿರುವ ಬಾಗಲಕೋಟೆ ಜಿಲ್ಲೆಗೆ ಬರುವ ವಿದೇಶಿ ಪ್ರವಾಸಿಗರು ವಾಸ್ತವ್ಯಕ್ಕೆ ಅಗತ್ಯ ಮೂಲ ಸೌಕರ್ಯಗಳ ಕೊರತೆ ಪರಿಣಾಮ ಹಂಪಿ ಇಲ್ಲವೆ ಗೋವಾಕ್ಕೆ ಹೋರಟು ಬಿಡುತ್ತಾರೆ ಎನ್ನುವ ಅಪವಾದದಿಂದ ಮುಕ್ತವಾಗುವ ಕಾಲ ಸನ್ನಿಹಿತವಾಗಿದೆ.

ಜಿಲ್ಲೆಯಲ್ಲಿನ ಐತಿಹಾಸಿಕ ಪ್ರವಾಸಿ ತಾಣಗಳನ್ನು ವೀಕ್ಷಿಸಲು, ಅಧ್ಯಯನ ಮಾಡಲು ಬರುವ ವಿದೇಶಿ ಪ್ರವಾಸಿಗರಿಗೆ ಅಗತ್ಯ ಮೂಲ ಸೌಕರ್ಯಗಳಿಲ್ಲದ ಪರಿಣಾಮ ಹೀಗೆ ಬಂದವರು ಹಾಗೆ ಹೊರಟು ಬಿಡುತ್ತಾರೆ ಎನ್ನುವ ಹಣೆ ಅಂಟಿಕೊAಡು ಬಿಟ್ಟಿದೆ. ಈ ಹಣೆ ಪಟ್ಟಿಯನ್ನು ಕಳಚಿ  ಅವರೆಲ್ಲ ಇಲ್ಲಿಯೂ ಉಳಿದುಕೊಳ್ಳುವಂತಾಗಲು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ತ್ರಿಸ್ಟಾರ್ ಹೋಟಲ್ ನಿರ್ಮಾಣಕ್ಕೆ ಮುಂದಾಗಿದೆ.

ದೇಶ, ವಿದೇಶಿ ಪ್ರವಾಸಿಗರನ್ನು ಕೈ ಬಿಸಿ ಕರೆಯುವ ಪ್ರವಾಸಿ ತಾಣಗಳು ಇಲ್ಲಿದ್ದರೂ ಇದುವರೆಗೂ ಒಂದು ತ್ರೀ ಸ್ಟಾರ್ ಹೋಟೆಲ್ ಇಲ್ಲ. ಇದೀಗ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಬಾದಾಮಿ ಬನಶಂಕರಿಯಲ್ಲಿ ಸುಸಜ್ಜಿತ ತ್ರಿ ಸ್ಟಾರ್ ಹೋಟೆಲ್ ನಿರ್ಮಾಣಕ್ಕೆ ಸಜ್ಜಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಜಿಲ್ಲೆಯ ಪ್ರವಾಸಿ ತಾಣಗಳಾಗಿರುವ ಐಹೊಳೆ, ಪಟ್ಟದಕಲ್ಲು ಮತ್ತು ಬಾದಾಮಿಗೆ ಬರುವ ಪ್ರವಾಸಿಗರಿಗೆಲ್ಲ ಕೇಂದ್ರ ಸ್ಥಾನವಾಗಬಲ್ಲ ಬನಶಂಕರಿಯಲ್ಲಿ ಸ್ಟಾರ್ ಹೋಟೆಲ್ ನಿರ್ಮಾಣಕ್ಕೆ ಬೇಕಿರುವ ಅಗತ್ಯ ಜಾಗವೂ ಇದೆ. ಸದ್ಯ ಲಭ್ಯವಿರುವ ೮ ಎಕರೆ ಜಾಗೆ ದೊಡ್ಡ ಮರಗಳಿಂದ ಹಚ್ಚ ಹಸುರಾಗಿದೆ. ಜತೆಗೆ ಅಲ್ಲಿರುವ ಪ್ರವಾಸಿಗರ ಸಂದರ್ಶನ ಕಟ್ಟಡದಲ್ಲಿ ಹಂಪಿ ಕನ್ನಡ ವಿವಿಯ ಶಿಲ್ಪ ಮತ್ತು ವರ್ಣಚಿತ್ರಕಲಾ ಕೇಂದ್ರವಿದೆ.

ಸAದರ್ಶನ ಕಟ್ಟಡವನ್ನು ಪ್ರವಾಸೋದ್ಯಮ ಇಲಾಖೆ ಲೀಸ್ ಮೇಲೆ ನೀಡಿದ್ದು, ಸದ್ಯ ಲೀಸ್ ಅವಧಿ ಮುಗಿದಿದೆ. ಅದನ್ನು ತೆರವುಗೊಳಿಸುವಂತೆ ಪ್ರವಾಸೋದ್ಯಮ ನಿಗಮವು ಸಂಬAಧಿಸಿದವರಿಗೆ ನೋಟಿಸ್ ನೀಡಿದೆ. ಶಿಲ್ಪ ಮತ್ತು ವರ್ಣಚಿತ್ರ ಕಲಾ ಕೇಂದ್ರವನ್ನು ಅಲ್ಲಿಯೇ ಉಳಿಸಿಕೊಂಡು ಸ್ಟಾರ್ ಹೋಟೆಲ್ ನಿರ್ಮಿಸಲು ಅವಕಾಶಗಳಿವೆ. ಆದಾಗ್ಯೂ ನಿಗಮ  ಯಾವ ನಿರ್ಧಾರಕ್ಕೆ ಬರುತ್ತದೋ ಏನೋ ಗೊತ್ತಿಲ್ಲ. ಆ ಬಗ್ಗೆ ತಮಗೆ ಯಾವುದೇ ಮಾಹಿತಿ ಇದುವರೆಗೂ ಬಂದಿಲ್ಲ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರಾದ ಧನಪಾಲ ಅಭಿಪ್ರಾಯ ಪಟ್ಟಿದ್ದಾರೆ. 

ಇದೀಗ ಬಾದಾಮಿ ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಹಂಪಿ ಕನ್ನಡ ವಿವಿಯ ಶಿಲ್ಪ ಮತ್ತು ವರ್ಣಚಿತ್ರಕಲಾ ಕೇಂದ್ರವನ್ನು ಉಳಿಸಿಕೊಂಡು, ಸ್ಟಾರ್ ಹೋಟೆಲ್ ನಿರ್ಮಾಣವೂ ಆಗುವಂತೆ ನಿಗಾ ವಹಿಸಬೇಕಿದೆ. ಹಂಪಿ ವಿವಿಯ ಈ ಕೇಂದ್ರ ಸ್ಥಾಪನೆ ಆದಾಗಿನಿಂದ ಕೇಂದ್ರವು ಉತ್ತಮವಾಗಿ ನಡೆಯುತ್ತಿದೆ. ಹಾಗಾಗಿ ಇದು ಬನಶಂಕರಿಯಿಂದ ಕೈ ತಪ್ಪಿ ಬೇರೆ ಕಡೆ ಹೋಗದಂತೆ ನೋಡಿಕೊಳ್ಳಬೇಕಿದೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಹೆಚ್ಚಿನ ಉದ್ಯೋಗಾವಕಾಶಗಳ ಲಭ್ಯತೆ ಹಿನ್ನೆಲೆಯಲ್ಲಿ ಸ್ಟಾರ್ ಹೋಟೆಲ್ ನಿರ್ಮಾಣದ ಅಗತ್ಯವಿದೆ. ಆ ಮೂಲಕ ಇಲ್ಲಿ ವಿದೇಶಿ ಪ್ರವಾಸಿಗರು ಹೆಚ್ಚಿನ ಕಾಲ ಉಳಿದುಕೊಳ್ಳಲು ಅವಕಾಶ ಮಾಡಿಕೊಡಬೇಕಿದೆ. ಹಾಗೆ ಶಿಲ್ಪ ಮತ್ತು ವರ್ಣಚಿತ್ರಕಲಾ ಕೇಂದ್ರವನ್ನು ಅಲ್ಲಿಯೇ ಮುಂದುವರಿಸಲು ಕ್ರಮ ಕೈಗೊಳ್ಳಬೇಕಿದೆ. ಸದ್ಯ ಎರಡನ್ನೂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಿದ್ದರಾಮಯ್ಯ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಅದಕ್ಕಾಗಿ ಅವರು ಸರ್ಕಾರದ ಮೇಲೆ ಯಾವ ರೀತಿಯ ಒತ್ತಡ ಹಾಕುತ್ತಾರೆ ಎನ್ನವುದು ಕುತೂಹಲಕರ ಸಂಗತಿ ಆಗಿದೆ.

ವರದಿ: ವಿಠ್ಠಲ ಆರ್. ಬಲಕುಂದಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com