ಬೆಳಗಾವಿ:  ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದಾಖಲೆಗಳನ್ನು ಸಂರಕ್ಷಿಸಿಡಲು ತಂಬಾಕು ಬಳಕೆ

ಕುಂದಾನಗರಿ ಬೆಳಗಾವಿಯ ಉಪ ನೋಂದಣಾಧಿಕಾರಿಗಳ ಕಚೇರಿ  ತಂಬಾಕು ಮುಕ್ತ ವಲಯ. ಆದರೆ, ಆಶ್ಚರ್ಯವೆಂದರೆ, ಇಲ್ಲಿ ದಾಖಲೆಗಳನ್ನು ಸಂರಕ್ಷಿಸಲು ತಂಬಾಕನ್ನು ಬಳಸಲಾಗುತ್ತಿದೆ. ಕರ್ಫೂರದೊಂದಿಗೆ  ಶತಮಾನಗಳಿಂದಲೂ ಈ ರೀತಿಯಲ್ಲಿ ದಾಖಲೆಗಳನ್ನು ಸಂರಕ್ಷಿಸಿಕೊಂಡು ಬರಲಾಗುತ್ತಿದೆ.
ಮರದ ಕಪಾಟಿನಲ್ಲಿ ತಂಬಾಕು, ಕರ್ಪೂರ
ಮರದ ಕಪಾಟಿನಲ್ಲಿ ತಂಬಾಕು, ಕರ್ಪೂರ
Updated on

ಬೆಳಗಾವಿ:  ಕುಂದಾನಗರಿ ಬೆಳಗಾವಿಯ ಉಪ ನೋಂದಣಾಧಿಕಾರಿಗಳ ಕಚೇರಿ  ತಂಬಾಕು ಮುಕ್ತ ವಲಯ. ಆದರೆ, ಆಶ್ಚರ್ಯವೆಂದರೆ, ಇಲ್ಲಿ ದಾಖಲೆಗಳನ್ನು ಸಂರಕ್ಷಿಸಲು ತಂಬಾಕನ್ನು ಬಳಸಲಾಗುತ್ತಿದೆ. ಕರ್ಫೂರದೊಂದಿಗೆ ಶತಮಾನಗಳಿಂದಲೂ ಈ ರೀತಿಯಲ್ಲಿ ದಾಖಲೆಗಳನ್ನು ಸಂರಕ್ಷಿಸಿಕೊಂಡು ಬರಲಾಗುತ್ತಿದೆ

ಮರದ ಕಪಾಟಿನಲ್ಲಿ ಕರ್ಪೂರ ಹಾಗೂ ತಂಬಾಕು ಇರಿಸುವ ಮೂಲಕ 100 ವರ್ಷಕ್ಕೂ ಹಳೆಯದಾದ  ಕೆಲ ದಾಖಲೆಗಳನ್ನು  ಯಾವುದೇ ರೀತಿಯಲ್ಲಿ ಹಾಳಾಗದಂತೆ ಸಂರಕ್ಷಿಸಿಡಲಾಗಿದೆ. 

ಬ್ರಿಟಿಷ್ ಕಾಲದಲ್ಲಿ ಈ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ತುಕ್ಕು ಹಿಡಿಯದಂತಹ ಕಪಾಟವನ್ನು ಇರಿಸಲಾಗಿದೆ. ಅದರಲ್ಲಿ ಜಿರಲೆ, ಗೆದ್ದಿಲು, ಇರುವೆಗಳು ಹೋಗದಂತೆ ತಡೆಯಲು ತಂಬಾಕು ಹಾಗೂ ಕರ್ಪೂರವನ್ನು ಬಳಸಲಾಗುತ್ತದೆ ಎಂದು ಸಬ್ ರಿಜಿಸ್ಟ್ರಾರ್ ಕಚೇರಿಯ ಮೋದಿ ಲಿಪಿ ( ಹಳೆಯ ಮಾರಾಠಿ ಭಾಷೆ ಲಿಪಿ) ಅನುವಾದಕ  ಕೆಕೆ ಮಾರುಚಿ ಹೇಳುತ್ತಾರೆ. 

ಈ ಕಪಾಟಿನಲ್ಲಿ ಹಳೆಯ ಕಾಲದ ಕನ್ನಡ  ಹಾಗೂ ಮೋದಿ ಲಿಪಿಗೆ ಸಂಬಂಧಿಸಿದ ದಾಖಲೆಗಳು ಇವೆ. 1867ರಿಂದಲೂ ಕಚೇರಿಯ ದಾಖಲೆಗಳು ಇರುವುದಾಗಿ ಹಿರಿಯ ಉಪ ನೋಂದಣಾಧಿಕಾರಿ ಗಿರೀಶ್ ಚಂದ್ರ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com