ನಿಮಗೂ ಹಾರ್ಟ್ ಇದೆ ಅಂತ ಗ್ಯಾರೆಂಟಿ ಆಯ್ತು: ಸಿದ್ದರಾಮಯ್ಯ ಕಾಲೆಳೆದ ಈಶ್ವರಪ್ಪ

ಅನಾರೋಗ್ಯದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದಾರಾಮಯ್ಯ ಅವರನ್ನು ಸಿಎಂ ಯಡಿಯೂರಪ್ಪ, ಸಚಿವ ಈಶ್ವರಪ್ಪ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. 
ನಿಮಗೂ ಹಾರ್ಟ್ ಇದೆ ಅಂತ ಗ್ಯಾರೆಂಟಿ ಆಯ್ತು: ಸಿದ್ದರಾಮಯ್ಯ ಕಾಲೆಳೆದ ಈಶ್ವರಪ್ಪ
ನಿಮಗೂ ಹಾರ್ಟ್ ಇದೆ ಅಂತ ಗ್ಯಾರೆಂಟಿ ಆಯ್ತು: ಸಿದ್ದರಾಮಯ್ಯ ಕಾಲೆಳೆದ ಈಶ್ವರಪ್ಪ
Updated on

ಬೆಂಗಳೂರು: ಅನಾರೋಗ್ಯದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದಾರಾಮಯ್ಯ ಅವರನ್ನು ಸಿಎಂ ಯಡಿಯೂರಪ್ಪ, ಸಚಿವ ಈಶ್ವರಪ್ಪ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. 

ರಾಜಕೀಯವಾಗಿ ಪರಸ್ಪರ ಆರೋಪ-ಪ್ರತ್ಯಾರೋಪಗಳಿಂದಲೇ ಸುದ್ದಿಯಲ್ಲಿರುತ್ತಿದ್ದ ಸಿದ್ದರಾಮಯ್ಯ-ಈಶ್ವರಪ್ಪ ಇಂದು ಆತ್ಮೀಯವಾಗಿ ಮಾತನಾಡಿದರು. ರಾಜಕೀಯ ನಾಯಕರ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ವೇಳೆ ಸಚಿವ ಈಶ್ವರಪ್ಪ ಮಾಜಿ ಮುಖ್ಯಮಂತ್ರಿಗಳ ಕಾಲೆಳೆದು ಹಾಸ್ಯ ಚಟಾಕಿ ಹಾರಿಸಿದ್ದು ವಿಶೇಷವಾಗಿತ್ತು. 

ಸಿದ್ದರಾಮಯ್ಯ ಅವರನ್ನು ಮಾತನಾಡಿಸಿದ ಈಶ್ವರಪ್ಪ ನಿಮಗೂ ಹಾರ್ಟ್ ಇದೆ ಅಂತ ಗ್ಯಾರೆಂಟಿ ಆಯ್ತು ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇದಕ್ಕೆ ನಗುತ್ತಲೇ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ನೀವೇನು ಇಲ್ಲ ಅಂತ ಅಂದ್ಕೊಂಡಿದ್ರಾ ಎಂದು ಕೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com