ಪಾಂಡಿಚೇರಿ ಬೀಚ್‌ನಲ್ಲಿ ಚಾಮರಾಜನಗರ ಯುವಕ ಸಾವು

ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದ ಹರವೆ ಗ್ರಾಮದ ಯುವಕ ಪಾಂಡಿಚೇರಿ ಬೀಚ್‌ನಲ್ಲಿ ಅಲೆಗಳಿಗೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಚಾಮರಾಜನಗರ: ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದ ಹರವೆ ಗ್ರಾಮದ ಯುವಕ ಪಾಂಡಿಚೇರಿ ಬೀಚ್‌ನಲ್ಲಿ ಅಲೆಗಳಿಗೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ.

ಹರವೆ ಗ್ರಾಮದ ಅಂಗಡಿ ಬಸಪ್ಪ ಎಂಬುವರ ಪುತ್ರ ಬಿ. ದೀಪು(26) ಮೃತ ವ್ಯಕ್ತಿ.

ಬೆಂಗಳೂರಿನ ಖಾಸಗಿ ಕಂಪನಿಯೊಂದರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ದೀಪು ಸ್ನೇಹಿತರ ಜೊತೆ ಪಾಂಡಿಚೇರಿಗೆ ಪ್ರವಾಸಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಬೀಚ್​ನಲ್ಲಿ ಆಟವಾಡುವ ವೇಳೆ ನೀರಿನ ಸೆಳವಿಗೆ ಸಿಲುಕಿ ಮೃತಪಟ್ಟಿದ್ದಾನೆ ಎನ್ನಲಾಗ್ತಿದೆ. ಸದ್ಯ, ಯುವಕನ ಮೃತದೇಹ ದೊರೆತಿದ್ದು, ಮೃತನ ಅಂತ್ಯಕ್ರಿಯೆ ಸೋಮವಾರ ಅವರ ಜಮೀನಿನಲ್ಲಿ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವರದಿ:-ಗೂಳಿಪುರ ನ೦ದೀಶ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com