
ಬೆಂಗಳೂರು: ಆರ್ ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಒಡೆತದನ ಖಾಸಗಿ ಶಾಲೆಯಲ್ಲಿ ಡಿಸೆಂಬರ್ 6, 1992ರಲ್ಲಿ ನಡೆದ ಬಾಬ್ರಿ ಮಸೀದಿ ಧ್ವಂಸ ಘಟನೆಯನ್ನು ವಿದ್ಯಾರ್ಥಿಗಳಿಂದ ಮರುಸೃಷ್ಟಿ ಮಾಡಲಾಗಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
ನಿನ್ನೆ ಶ್ರೀರಾಮ ವಿದ್ಯಾ ಕೇಂದ್ರ ಶಾಲೆಯಲ್ಲಿ ನಡೆದ ವಾರ್ಷಿಕ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳು ಬಾಬ್ರಿ ಮಸೀದಿ ಧ್ವಂಸ ಘಟನೆ ಮರುಸೃಷ್ಟಿಸಿ ಅಭಿನಿಯಿಸಿದ್ಧಾರೆ. ಈ ಮಕ್ಕಳು ಅಭಿನಯಿಸಿದ ಕಾರ್ಯಕ್ರಮಕದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ ಮತ್ತು ಪಾಂಡಿಚೇರಿ ಲೆಫ್ಟೆನೆಂಟ್ ಗವರ್ನರ್ ಕಿರಣ್ ಬೇಡಿ ಅಥಿತಿಗಳಾಗಿ ಭಾಗಿಯಾಗಿದ್ದರು.
ಶಾಲಾ ಮಕ್ಕಳು ಬಾಬ್ರಿ ಮಸೀದಿ ಧ್ವಂಸ ಘಟನೆ ಮರುಸೃಷ್ಟಿಸಿದ ಎರಡು ವಿಡಿಯೋಗ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿ 27 ವರ್ಷಗಳ ಹಿಂದೆ ಹೇಗೆ ವಿಶ್ವ ಹಿಂದು ಪರಿಷತ್, ಬಜರಂಗದಳ ಸೇರಿದಂತೆ ಅನೇಕ ಹಿಂದೂ ಸಂಘಟನೆಗಳ ಕರ ಸೇವಕರು ಬಾಬ್ರಿ ಧ್ವಂಸ ಮಾಡಿದರು ಎಂಬುದನ್ನು ಮಕ್ಕಳು ಮರುಸೃಷ್ಟಿ ಮಾಡಿ ಅಭಿನಯಿಸಿದ್ಧಾರೆ.
ಇತ್ತೀಚಿಗಷ್ಟೇ ಸುಪ್ರೀಂ ಕೋರ್ಟ್ ಅಯೋಧ್ಯೆ ಭೂವಿವಾದಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ನೀಡಿದ್ದು, ವಿವಾದಿತ 2.77 ಎಕರೆ ಜಾಗದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿದೆ. ಅಲ್ಲದೆ ಮಸೀದಿ ನಿರ್ಮಾಣಕ್ಕೆ ಬೇರೆಡೆ ಪ್ರತ್ಯೇಕ 5 ಎಕರೆ ಭೂಮಿ ನೀಡಬೇಕು ಎಂದು ಆದೇಶಿಸಿತ್ತು.
Advertisement