ರಾಜ್ಯದ ಮೊದಲ 'ರೈಲ್ ನೀರ್' ಘಟಕ ಸ್ಥಾಪಿಸಲು ಮೈಸೂರು ಬಳಿ ಜಮೀನು ಕೊಡಿ: ಸರ್ಕಾರಕ್ಕೆ ಐಆರ್‌ಸಿಟಿಸಿ ಮನವಿ

ಭಾರತೀಯ ರೈಲ್ವೆ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದು, ರಾಜ್ಯದ ಮೊದಲ ರೈಲ್ ನೀರು ಸ್ಥಾವರವನ್ನು  ಸ್ಥಾಪಿಸಲು ಮೈಸೂರು ಬಳಿ ಭೂಮಿಯನ್ನು ನಿಡುವಂತೆ ಮನವಿ ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಭಾರತೀಯ ರೈಲ್ವೆ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದು, ರಾಜ್ಯದ ಮೊದಲ ರೈಲ್ ನೀರು ಸ್ಥಾವರವನ್ನು  ಸ್ಥಾಪಿಸಲು ಮೈಸೂರು ಬಳಿ ಭೂಮಿಯನ್ನು ನಿಡುವಂತೆ ಮನವಿ ಮಾಡಿದೆ. ನಿಗಮವು ಪ್ರಸ್ತುತ ಚೆನ್ನೈನ ಪಾಲೂರ್ ಸ್ಥಾವರದಿಂದ ದಿನಕ್ಕೆ 36,000 ಲೀಟರ್ ನೀರನ್ನು ನೈಋತ್ಯ ರೈಲ್ವೆಯಾದ್ಯಂತ ನಿಲ್ದಾಣಗಳಲ್ಲಿ ಬಾಟಲಿಗಳಲ್ಲಿ ಮಾರಾಟ ಮಾಡಲು ಸಾಗಿಸುತ್ತದೆ. ಇದೀಗ ಮಾಡಿರುವ ಪ್ರಸ್ತಾಪವು ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಆಲೋಚನೆಯ ಫಲ ಎಂದೂ ಹೇಳಲಾಗಿದೆ.

ಮೈಸೂರಿನ ಕಾವೇರಿ ನದಿಯ ಬಳಿ ಎಲ್ಲಿಯಾದರೂ ನೀರಿನ ಸ್ಥಾವರವನ್ನು ಸ್ಥಾಪಿಸಲು ನಿಗಮವು ಮುಂದಾಗಿದ್ದು ಐಆರ್‌ಸಿಟಿಸಿ ಹಿರಿಯ ಅಧಿಕಾರಿಯೊಬ್ಬರು ಹೇಳುವಂತೆ “ನಾವು ಭೂಮಿ ಕೇಳಿ  ಪ್ರಸ್ತಾಪವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದೇವೆ. ಪಾಲೂರ್‌ನಿಂದ 3,000 ಕೇಸಸ್ ಗಳಲ್ಲಿ ಟ್ರಕ್‌ಗಳ ಮೂಲಕ ನೀರನ್ನು ಸಾಗಿಸಲು ಖರ್ಚು ಮಾಡಿದ ಹಣವನ್ನು ಉಳಿಸಲು ಐಆರ್‌ಸಿಟಿಸಿಗೆ ಸಹಾಯ ಮಾಡುವುದರ ಹೊರತಾಗಿಯೂ ಇಲ್ಲಿನ ಸ್ಥಳೀಯರಿಗೆ ಯೋಜನೆಯಿಂಡಾಗಿ ಉದ್ಯೋಗ ಲಭಿಸಲಿದೆ."

ಒಂದು ಲೀಟರ್ಬಾಟಲ್ ನೀರನ್ನು ಸಾರ್ವಜನಿಕರಿಗೆ 15 ರೂ.ಗೆ ಮಾರಾಟ ಮಾಡಿದರೂ, ಐಆರ್‌ಸಿಟಿಸಿ ತನ್ನ ಮಾರಾಟಗಾರರಿಗೆ ಕೇವಲ 9.50 ರೂ.ಗೆ ಮಾರಾಟ ಮಾಡುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ. “ನಾವು ಪ್ರತಿ ಬಾಟಲಿಯಿಂದ ಕೇವಲ 50 ಪೈಸೆ ಲಾಭ ಪಡೆಯುತ್ತೇವೆ. ಸಾರಿಗೆ ವೆಚ್ಚವು ದೊಡ್ಡದಾಗಿದೆ ಮತ್ತು ಕರ್ನಾಟಕದಲ್ಲಿ ಸ್ಥಾವರವನ್ನು ಸ್ಥಾಪಿಸುವುದರಿಂದ ಅದನ್ನು ಆದಷ್ಟು ತಗ್ಗಿಸಬಹುದು400 ಕಿ.ಮೀ ದೂರದಿಂದ ಪ್ರತಿದಿನ ನೀರನ್ನು ಸಾಗಿಸುವ ಬದಲು, ಎರಡು ನಗರಗಳ ನಡುವೆ ಒಂದು ಸ್ಥಾವರ ಸ್ಥಾಪಿಸಿದ್ದಾದರೆ ನಾವು ಅದನ್ನು ಸುಮಾರು 120 ಕಿ.ಮೀ ಗೆ ಇಳಿಸಬಹುದು,

‘ರೈಲ್ ನೀರ್’ ಸ್ಥಾವರ ಮೂಲಸೌಕರ್ಯ ವೆಚ್ಚದ ಅಂದಾಜು20-30 ಕೋಟಿ ರೂಪಾಯಿಗಳು ಎಂದು ಅಧಿಕಾರಿ ತಿಳಿಸಿದ್ದಾರೆ. ಪ್ರತಿದಿನ ಸಾಗಿಸುವ ನೀರಿನ ದೂರ ಗಮನಿಸಿದರೆ ಪ್ರಯಾಣಿಕರು ಹೆಚ್ಚಾಗಿ ಬೆಂಗಳೂರು ರೈಲ್ವೆ ವಿಭಾಗದಲ್ಲಿ ಮಾತ್ರ ನೀರನ್ನು ಬಳಸುತ್ತಾರೆ. ಹುಬ್ಬಳ್ಳಿ ಮತ್ತು ಮೈಸೂರು ರೈಲ್ವೆ ವಿಭಾಗಗಳಲ್ಲಿ ಪ್ಯಾಕೇಜ್ ಮಾಡಿದ ನೀರಿಗೆ ಕಡಿಮೆ ಬೇಡಿಕೆ ಇದೆ

ದೇಶದ 10 ರೈಲ್ ನೀರ್ ಸ್ಥಾವರಗಳಲ್ಲಿ, ಪಾಲೂರು ಹೊರತುಪಡಿಸಿ ದಕ್ಷಿಣ ಭಾರತದ ಏಕೈಕ ಸ್ಥಳವೆಂದರೆ ತಿರುವನಂತಪುರಂ. ದಕ್ಷಿಣ ಭಾರತದಲ್ಲಿ ಎರಡು ಹೊಸ ನೀರಿನ ಸ್ಥಾವರಗಳನ್ನು ನಿರ್ಮಾಣ ಮಾಡಬೇಕೆಂದು ಯೋಜನೆ ಇದೆ ಅದರಲ್ಲಿ ಒಂದು ವಿಜಯವಾಡ ಮತ್ತು ಇನ್ನೊಂದು ವಿಶಾಕಪಟ್ಟಣಂನಲ್ಲಿ ಇರಲಿದೆ ಎಂದು ಅವರು ವಿವರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com