'ರಾಮನನ್ನು ಮಹಾಪುರುಷನನ್ನಾಗಿಸಿದ್ದೇ ವಾಲ್ಮೀಕಿ'

ಅಯೋಧ್ಯೆಯಲ್ಲಿ ರಾಮ ಭವನ ನಿರ್ಮಾಣ ಮಾಡುವಾಗ ದೇವಾಲಯದ ಒಳಗಡೆ ವಾಲ್ಮೀಕಿ ಮಹರ್ಷಿಗಳ ಪ್ರತಿಮೆ ಸ್ಥಾಪಿಸಬೇಕೆಂದು  ನಾಯಕ ಸಮುದಾಯ ಒತ್ತಾಯಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು:  ಅಯೋಧ್ಯೆಯಲ್ಲಿ ರಾಮ ಭವನ ನಿರ್ಮಾಣ ಮಾಡುವಾಗ ದೇವಾಲಯದ ಒಳಗಡೆ ವಾಲ್ಮೀಕಿ ಮಹರ್ಷಿಗಳ ಪ್ರತಿಮೆ ಸ್ಥಾಪಿಸಬೇಕೆಂದು  ನಾಯಕ ಸಮುದಾಯ ಒತ್ತಾಯಿಸಿದೆ.

ವಾಲ್ಮೀಕಿ ರಾಮಾಯಣ ಬರೆದರು, ಹೀಗಾಗಿ ಅವರ ಪ್ರತಿಮೆ ನಿರ್ಮಿಸಬೇಕೆಂದು ಮನವಿ ಸಲ್ಲಿಸಿದ್ದಾರೆ. ರಾಮ ದೇವರ ಹೆಸರಿನ ಜೊತೆ ವಾಲ್ಮೀಕಿ ಹೆಸರನ್ನು ಕಡ್ಡಾಯವಾಗಿ ಬಳಸಬೇಕು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಅಭಿಯಾನ ಆರಂಭಿಸುವುದಾಗಿ  ನಾಯಕ ಸಮುದಾಯ ಒತ್ತಾಯಿಸಿದೆ.

ಅಯೋಧ್ಯೆಯ ರಾಮ ಭವನದ ಒಳಗೆ ವಾಲ್ಮೀಕಿ ಭವನ ನಿರ್ಮಿಸುವ ಸಲುವಾಗಿ ಜಿಲ್ಲೆಯ ಪ್ರತಿ ಗ್ರಾಮಕ್ಕೂ ಪತ್ರ ಬರೆದು  ಅಭಿಯಾನ ಮಾಡುವುದಾಗಿ  ವಾಲ್ಮೀಕಿ ನಾಯಕ ಸಮಿತಿ ಅಧ್ಯಕ್ಷ ಭೀಮಪ್ಪ ಹೇಳಿದ್ದಾರೆ.

ಧ್ರೋಣಾಚಾರ್ಯರ ನೆನೆಯದೇ ಹೇಳದೇ ಏಕಲವ್ಯನ ಹೆಸರು ಹೇಳಲು ಸಾಧ್ಯವೇ? ರಾಮನನ್ನು ಮಹಾಪುರಷನ್ನಾಗಿಸಿದ್ದೇ  ವಾಲ್ಮೀಕಿ ಎಂದು ಹೇಳಿದ್ದಾರೆ. ರಾಜ್ಯದಲ್ಲಿ 52 ಲಕ್ಷ ವಾಲ್ಮೀಕಿ ಸಮುದಾಯದ ಮಂದಿಯಿದ್ದಾರೆ. ಇಬ್ಬರು 2 ಸಂಸದರು  ಹಾಗೂ 17 ಶಾಸಕರಿದ್ದಾರೆ ಎಂದು ಹೇಳಿದ್ದಾರೆ.

ತಮ್ಮ ಬೇಡಿಕೆಗೆ  ಬೆಂಬಲ ನೀಡುವಂತೆ ಪೇಜಾವರ ಸ್ವಾಮಿಗಳಿಗೆ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com