ಸಂಗ್ರಹ ಚಿತ್ರ
ರಾಜ್ಯ
ಮಂಡ್ಯ: ಉಡುಪಿ ಉಪ ವಿಭಾಗಾಧಿಕಾರಿ ಮನೆ ಮೇಲೆ ಎಸಿಬಿ ದಾಳಿ!
ಉಡುಪಿ ಉಪ ವಿಭಾಗಾಧಿಕಾರಿಯೊಬ್ಬರ ಮಂಡ್ಯದ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಮಂಡ್ಯ: ಉಡುಪಿ ಉಪ ವಿಭಾಗಾಧಿಕಾರಿಯೊಬ್ಬರ ಮಂಡ್ಯದ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಉಡುಪಿ ಉಪ ವಿಭಾಗಾಧಿಕಾರಿಯಾಗಿರುವ ಡಾ.ಎಂ.ದಾಸೇಗೌಡರ ಮಂಡ್ಯದ ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿದೆ.
ಮಂಡ್ಯದ ಕಾವೇರಿ ನಗರದ ದಾಸೇಗೌಡರ ನಿವಾಸ ಯದುಗಿರಿ ನಿಲಯದ ಮೇಲೆ ಉಡುಪಿಯಿಂದ ಆಗಮಿಸಿ ಎಸಿಬಿ ಅಧಿಕಾರಿಗಳ ತಂಡ ಬೆಳಿಗ್ಗೆಯಿಂದಲೇ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವರದಿ: ನಾಗಯ್ಯ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ