ಕನಕಪುರದಲ್ಲಿ ಒಂಟಿ ಸಲಗ ದಾಳಿ, ಯುವಕ ಸಾವು

ಯುವಕರ ಗುಂಪೊಂದರ ಮೇಲೆ ದಾಳಿ ನಡೆಸಿದ ಒಂಟಿ ಸಲಗವೊಂದು ಓರ್ವನನ್ನು ಕಾಲಿನಿಂದ ತುಳಿದು ಸಾಯಿಸಿರುವ ಘಟನೆ ಕನಕಪುರ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಕನಕಪುರ-ಕೋಡಿಹಳ್ಳಿ ಮುಖ್ಯರಸ್ತೆಯ ನಾರಾಯಣಪುರ ಗ್ರಾಮ-ಅಂಕಚಾರಿ ದೊಡ್ಡಿ ಬಳಿ ನಡೆದಿದೆ.
ಆನೆ ದಾಳಿ
ಆನೆ ದಾಳಿ
Updated on

ಬೆಂಗಳೂರು: ಯುವಕರ ಗುಂಪೊಂದರ ಮೇಲೆ ದಾಳಿ ನಡೆಸಿದ ಒಂಟಿ ಸಲಗವೊಂದು ಓರ್ವನನ್ನು ಕಾಲಿನಿಂದ ತುಳಿದು ಸಾಯಿಸಿರುವ ಘಟನೆ ಕನಕಪುರ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಕನಕಪುರ-ಕೋಡಿಹಳ್ಳಿ ಮುಖ್ಯರಸ್ತೆಯ ನಾರಾಯಣಪುರ ಗ್ರಾಮ-ಅಂಕಚಾರಿ ದೊಡ್ಡಿ ಬಳಿ ನಡೆದಿದೆ.

ಕನಕಪುರದ ಬೇಕುಪ್ಪೆಯ ಹೊಂಬೇಗೌಡ ಎಂಬುವರ ಪುತ್ರ ಚೇತನ್‌ಕುಮಾರ್ (21) ಮೃತಪಟ್ಟವರು. ಅವರೊಂದಿಗೆ ಇದ್ದ ಇನ್ನಿಬ್ಬರು ಸ್ನೇಹಿತರ ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದಾರೆ. 

ಇಬ್ಬರು ಸ್ನೇಹಿತರೊಂದಿಗೆ ಚೇತನ್‌ಕುಮಾರ್ ಬುಧವಾರ ಮುಂಜಾನೆ ವಾಯುವಿಹಾರಕ್ಕೆ ತೆರಳಿದ್ದರು. ಕನಕಪುರ-ಕೋಡಿಹಳ್ಳಿ ಮುಖ್ಯರಸ್ತೆಯ ನಾರಾಯಣಪುರ ಗ್ರಾಮ-ಅಂಕಚಾರಿ ದೊಡ್ಡಿ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರು ಸ್ನೇಹಿತರು ಸ್ವಲ್ಪ ಮುಂದೆ ಹೋಗಿದ್ದರು. ಚೇತನ್‌ಕುಮಾರ್ ನಿಧಾನವಾಗಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಲೆ ಏಕಾಏಕಿ ಒಂಟಿ ಸಲಗ ಎದುರಾಗಿದೆ. ತಕ್ಷಣ ಭಯಭೀತನಾದ ಚೇತನ್ ಸಹಾಯಕ್ಕಾಗಿ ಕೂಗಿಕೊಳ್ಳುತ್ತಾ ತಪ್ಪಿಸಿಕೊಳ್ಳಲು ಯತ್ನಿಸಿದರಾದರೂ ಸಫಲವಾಗದೆ ಆನೆಗೆ ಸಿಕ್ಕಿ ಸಾವನ್ನಪ್ಪಿದ್ದಾನೆ. ಕಿರುಚಾಟ ಕೇಳಿದ ಸ್ನೇಹಿತರು ಈತನ ಬಳಿಗೆ ಬರುವಷ್ಟರಲ್ಲಿ ಚೇತನ್ ಪ್ರಾಣಪಕ್ಷಿ ಹಾರಿಹೋಗಿತ್ತು.

ರಸ್ತೆ ತಡೆ: ಸುದ್ದಿ ಸುತ್ತಮುತ್ತಲ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ರಸ್ತೆಯಲ್ಲೇ ಕುಳಿತು ಪ್ರತಿಭಟನೆಗೆ ಮುಂದಾದರು. ಬನ್ನೇರುಘಟ್ಟ ರಾಷ್ಟ್ರೀಯ ಅರಣ್ಯ ಪ್ರದೇಶ ವ್ಯಾಪ್ತಿಯ ಬೆಟ್ಟಹಳ್ಳಿ ಕಾಡು ಮೂಲಕ ಆನೆಗಳು ನಾಡಿಗೆ ಬಂದು ತೊಂದರೆ ಕೊಡುತ್ತಿದೆ. ಅಪಾರ ಪ್ರಮಾಣದ ಬೆಳೆ ನಾಶ ಮಾಡುತ್ತಿದೆ. ಆದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಇಂದಿನ ಘಟನೆ ಮೊದಲನೆಯದಲ್ಲ ಈಗಾಗಲೇ ನಾಲ್ವರು ಸಾವನ್ನಪ್ಪಿದ್ದಾರೆ. ಈ ಭಾಗದ ಅರಣ್ಯ ಇಲಾಖೆ ಕಾಡು ಪ್ರಾಣಿಗಳು ಗ್ರಾಮದೊಳಗೆ ಬರದಂತೆ ತಡೆಯಲು ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ರಸ್ತೆ ಮಧ್ಯೆಯೇ ಕುಳಿತು ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿದ ಎಎಸ್‌ಪಿ ರಾಮರಾಜನ್, ಸರ್ಕಲ್ ಇನ್‌ಸ್ಪೆಕ್ಟರ್ ಪ್ರಕಾಶ್, ಗ್ರಾಮಾಂತರ ಪೊಲೀಸರು, ಡಿಎಫ್‌ಒ ಸದಾಶಿವಯ್ಯ ಎನ್.ಹೆಗಡೆ, ಡಿಆರ್‌ಎಫ್ ದೇವರಾಜ್ ಮತ್ತು ಅರಣ್ಯ ಸಿಬ್ಬಂದಿ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದರು.

ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಪ್ರತಿಭಟನಕಾರರ ಮನವೊಲಿಸಿ ಸರ್ಕಾರದಿಂದ ಹಾಗೂ ಅರಣ್ಯ ಇಲಾಖೆ ವತಿಯಿಂದ ದೊರೆಯಬಹುದಾದಂತಹ ಸೂಕ್ತ ಪರಿಹಾರವನ್ನು ಮೃತನ ಕುಟುಂಬಕ್ಕೆ ಕೊಡಿಸುವುದಾಗಿ ಭರವಸೆ ನೀಡಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com