ಶೃಂಗೇರಿ: ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಅರವಿಂದ್ ಬೋಬ್ಡೆ ಡಿ.26 ರಂದು ಶೃಂಗೇರಿಗೆ ಭೇಟಿ ನೀಡಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಆಗಮಿಸಿದ ಸಿಜೆಐ ಕ್ಷೇತ್ರದ ದೇವಿ ಶಾರದಾಂಬೆ ಹಾಗೂ ಉಭಯ ಜಗದ್ಗುರುಗಳ ದರ್ಶನ ಪಡೆದಿದ್ದಾರೆ. ಡಿ.26 ರಂದು ಶೃಂಗೇರಿ ಮಠದಲ್ಲೇ ವಾಸ್ತವ್ಯ ಹೂಡಲಿರುವ ಬೋಬ್ಡೆ, ಶುಕ್ರವಾರ ಬೆಳಗ್ಗೆ 8:30ಕ್ಕೆ ಮಂಗಳೂರಿನ ಮೂಲಕ ದೆಹಲಿಗೆ ತೆರಳಲಿದ್ದಾರೆ.
ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಗೌರಿ ಶಂಕರ್, ಜಿಲ್ಲಾಧಿಕಾರಿ ಬಗಾದಿ ಗೌತಮ್, ಎಸ್ ಪಿ ಹರೀಶ್ ಪಾಂಡೆ, ಕರ್ನಾಟಕ ಹೈ ಕೋರ್ಟಿನ ರಿಜಿಸ್ಟ್ರಾರ್, ಚಿಕ್ಕಮಗಳೂರು ಹಾಗೂ ಶೃಂಗೇರಿ ನ್ಯಾಯಾಲಯದ ನ್ಯಾಯಮೂರ್ತಿಗಳು ಅರವಿಂದ್ ಬೋಬ್ಡೆ ಅವರ ಜೊತೆಗಿದ್ದರು.
Advertisement