ವೀರೇಶ್ ಕುರತ್ತಿ
ರಾಜ್ಯ
ಕಾಶ್ಮೀರದ ಉರಿಯಲ್ಲಿ ಉಗ್ರರೊಡನೆ ಹೋರಾಟ: ಗದಗದ ಯೋಧ ಹುತಾತ್ಮ
ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ನಡೆದ ಉಗ್ರರ ಜತೆಗಿನ ಹೋರಾಟದ ವೇಳೆ ಗದಗ ಜಿಲ್ಲೆಯ ಯೋಧನೊಬ್ಬ ಹುತಾತ್ಮರಾಗಿದ್ದಾರೆ. ಗುರುವಾರ ಜಮ್ಮು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ನಡೆದ ಕಾಳಗದ ವೇಳೆ ಗದಗದ ವೀರೇಶ್ ಕುರತ್ತಿ (50)ಎಂಬ ಯೋಧ ಹುತಾತ್ಮರಾಗಿದ್ದಾರೆ.
ಗದಗ: ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ನಡೆದ ಉಗ್ರರ ಜತೆಗಿನ ಹೋರಾಟದ ವೇಳೆ ಗದಗ ಜಿಲ್ಲೆಯ ಯೋಧನೊಬ್ಬ ಹುತಾತ್ಮರಾಗಿದ್ದಾರೆ. ಗುರುವಾರ ಜಮ್ಮು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ನಡೆದ ಕಾಳಗದ ವೇಳೆ ಗದಗದ ವೀರೇಶ್ ಕುರತ್ತಿ (50)ಎಂಬ ಯೋಧ ಹುತಾತ್ಮರಾಗಿದ್ದಾರೆ.
ವೀರೇಶ್ ಮೂಲತಃ ಗದಗದ ಹೊಳೆಯಾಲೂರು ಸಮೀಪದ ಕರಮುಡಿ ಗ್ರಾಮದವರಾಗಿದ್ದು ಳೆದ 30 ವರ್ಷದಿಂದ ಭಾರತೀಯ ಸೇನೆ 18ನೇ ಮರಾಠ ಬೆಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರು ಪ್ರಸ್ತುತ ಸುಬೇದಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಯೋಧನ ಪಾರ್ಥಿವ ಶರೀರ ನಾಳೆ ಅಥವಾ ನಾಡಿದ್ದು ಸ್ವಗ್ರಾಮ ತಲುಪಲಿದ್ದು ಸಧ್ಯ ಯೋಧನ ಕುಟುಂಬ ದಗ ಬಳಿಯ ಹಟಲಗೇರಿ ನಾಕದಲ್ಲಿ ವಾಸವಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ