ಮಂಗಳಸೂತ್ರ ಕಸಿದ ಸರಗಳ್ಳರು: 6 ವರ್ಷದ ನಂತರ ಹಾಲು ಮಾರುವ ಮಹಿಳೆಗೆ ಸಿಕ್ತು ನ್ಯಾಯ!

ಹಾಲು ಖರೀದಿಸುವ ನೆಪದಲ್ಲಿ ಮಹಿಳೆಯ  ‘ಮಂಗಳಸೂತ್ರ’ ದೋಚಿದ್ದ ಇಬ್ಬರು ಯುವಕರಿಗೆ ಶಿಕ್ಷೆ ನೀಡುವ ಮೂಲಕ ಹಾಲು ಮಾರುವ ಮಹಿಳೆಗೆ ನ್ಯಾಯ ಸಿಕ್ಕಂತಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ಹಾಲು ಖರೀದಿಸುವ ನೆಪದಲ್ಲಿ ಮಹಿಳೆಯ  ‘ಮಂಗಳಸೂತ್ರ’ ದೋಚಿದ್ದ ಇಬ್ಬರು ಯುವಕರಿಗೆ ಶಿಕ್ಷೆ ನೀಡುವ ಮೂಲಕ ಹಾಲು ಮಾರುವ ಮಹಿಳೆಗೆ ನ್ಯಾಯ ಸಿಕ್ಕಂತಾಗಿದೆ.

ನಾಗರಭವಿಯ ಮನೋಹರ್ ಅಲಿಯಾಸ್ ಮನು (25) ಮತ್ತು ಮನೀಷಾ ಅಲಿಯಾಸ್ ಜಿರಾಫೆ (27) ಗೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ,  ಪ್ರಧಾನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಆದೇಶ ಹೊರಡಿಸಿದೆ.

2013ರ ಆಗಸ್ಟ್ 21ರಂದು, ಗಿಡದಕೊನೇನಹಳ್ಳಿಯ ಮುಳ್ಳಕಟ್ಟಮ್ಮ ರಸ್ತೆಯಲ್ಲಿರುವ ಆರ್ಚ್ ಬಳಿಯ ಫುಟ್ ಪಾತ್ ಮೇಲೆ  ಮಂಜುಳಾ  ಕುಳಿತಿದ್ದರು. ಈ ವೇಳೆ ಹಾಲು ಖರೀದಿಸುವ ನೆಪದಲ್ಲಿ ಇಬ್ಬರು ಬೈಕ್ ನಲ್ಲಿ ಬಂದರು. ಮಹಿಳೆಯ ಬಳಿ ಹಾಲು ಪಡೆದು 100 ನೀಡಿ ಚಿಲ್ಲರೆ ವಾಪಸ್ ಕೇಳಿದ್ದಾರೆ,  ಚಿಲ್ಲರೆ ಕೊಡಲು ಮಂಜುಳಾ ಬ್ಯಾಗ್ ಗೆ ಕೈ ಹಾಕಿದ ವೇಳೆ ಆಕೆಯ ಬ್ಯಾಗ್ ಕಿತ್ತುಕೊಳ್ಳಲು ಮನು ಮಂದಾದ, ಈ ವೇಳೆ ಆಕೆ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ.

ಈ ವೇಳೆ ಆಕೆಯನ್ನು ನೆಲಕ್ಕೆ ತಳ್ಳಿದ್ದಾನೆ,  ಈ ವೇಳೆ ಆಕೆಯ ಮಾಂಗಲ್ಯ ಸರ ಕಿತ್ತು ಬಿದ್ದಿದೆ,  ಮನು ಆಕೆಗೆ  ಚಾಕು ತೋರಿಸಿ ಸರ ಕಿತ್ತುಕೊಂಡು ಹೋಗಿದ್ದಾನೆ. ಈ ವೇಳೆ  ಮಂಜುಳಾ ಜ್ಞಾನಭಾರತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನವೆಂಬರ್ 4 2013 ರಂದು ಉಪ್ಪಾರ ಪೇಟೆ ಪೊಲೀಸರು  ಇಬ್ಬರನ್ನು ಬಂಧಿಸಿದ್ದರು. ಇವರನ್ನು ವಿಚಾರಣೆಗೊಳಪಡಿಸಿದಾಗ  ತಪ್ಪೊಪ್ಪಿಕೊಂಡಿದ್ದಾರೆ,  ಸರಕದ್ದ ದಿನವೇ ಬಾಪೂಜಿನಗರ ರಾಮಾಚಾರಿ ಎಂಬುವರ ಬಳಿಯಲ್ಲಿ ಮಾರಿದ್ದಾಗಿ ತಿಳಿಸಿದ್ದಾನೆ.

ಉಪ್ಪಾರಪೇಟೆ ಪೊಲೀಸರು ಮಂಜುಳಾರನ್ನು ಕರೆಸಿ ವಿಚಾರಿಸಿದಾಗ ಆಕೆ ಅವರನ್ನು ಗುರುತು ಹಿಡಿದಿದ್ದಾರೆ, ಅದೇ ದಿನ ಇಬ್ಬರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಅದಾದ ನಂತರ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಇಬ್ಬರಿಗೂ ಕಠಿಣ ಶಿಕ್ಷೆ ವಿಧಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com