ಹೊಸ ವರ್ಷಾಚರಣೆ ಸಂಭ್ರಮಕ್ಕೆ ಬಿಎಂಆರ್ಸಿಎಲ್ ಸಜ್ಜು: ಬೆಳಿಗ್ಗೆ 2ರವರೆಗೆ 'ನಮ್ಮ ಮೆಟ್ರೋ' ಸಂಚಾರ

ಹೊಸ ವರ್ಷದ ಮುನ್ನಾದಿನ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಪಾಲ್ಗೊಳ್ಳುವ ಜನರಿಗೆ ಬಿಎಂಆರ್ಸಿಎಲ್ ನಿಂದ  ಇಲ್ಲಿದೆ ಶುಭ ಸುದ್ದಿ! ಹೊಸ ವರ್ಷಾಚರಣೆಗಾಗಿ ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿ ಹಲವೆಡೆ ಭಾರೀ ಜನಸ್ತೋಮ ಸೇರುವ ನಿರೀಕ್ಷೆ ಇದ್ದು ಇದಕ್ಕಾಗಿ ಬಿಎಂಆರ್ಸಿಎಲ್ ಮೆಟ್ರೊ ರೈಲು ಸೇವೆಗಳನ್ನು ಸಾಮಾನ್ಯ  ದಿನಕ್ಕಿಂತ ಮೂರು ಗಂಟೆಗಳ ಕಾಲ ಹೆಚ್ಚುವರಿಯಾಗಿ ಒ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಹೊಸ ವರ್ಷದ ಮುನ್ನಾದಿನ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಪಾಲ್ಗೊಳ್ಳುವ ಜನರಿಗೆ ಬಿಎಂಆರ್ಸಿಎಲ್ ನಿಂದ  ಇಲ್ಲಿದೆ ಶುಭ ಸುದ್ದಿ! ಹೊಸ ವರ್ಷಾಚರಣೆಗಾಗಿ ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿ ಹಲವೆಡೆ ಭಾರೀ ಜನಸ್ತೋಮ ಸೇರುವ ನಿರೀಕ್ಷೆ ಇದ್ದು ಇದಕ್ಕಾಗಿ ಬಿಎಂಆರ್ಸಿಎಲ್ ಮೆಟ್ರೊ ರೈಲು ಸೇವೆಗಳನ್ನು ಸಾಮಾನ್ಯ  ದಿನಕ್ಕಿಂತ ಮೂರು ಗಂಟೆಗಳ ಕಾಲ ಹೆಚ್ಚುವರಿಯಾಗಿ ಒದಗಿಸಲಿದೆ. ಮೆಟ್ರೋ ರೈಲುಗಳು ಪ್ರತಿದಿನದಂತೆ ರಾತ್ರಿ 11.30ರಿಂದ ಬೆಳಿಗ್ಗೆ 2 ರವರೆಗೆ (ಜನವರಿ 1, 2020) ವಿಸ್ತರಿಸುವುದಾಗಿ  ಮೆಟ್ರೋ ನಿಗಮ ಪ್ರಕಟಿಸಿದೆ.  ಅಧಿಕೃತ ಪತ್ರಿಕಾ ಪ್ರಕಟಣೆಯ ಪ್ರಕಾರ,ಈ ವಿಸ್ತರಣೆಯಾಗಿರುವ ಸಮಯದಲ್ಲಿ ನೇರಳೆ ಮಾರ್ಗ ಹಾಗೂ ಹಸಿರು ಮಾರ್ಗ ಎರಡರಲ್ಲಿಯೂ ಮೆಟ್ರೋ ರೈಲುಗಳು ಪ್ರತಿ 15 ನಿಮಿಷಗಳ ಆವರ್ತನದಲ್ಲಿ ಕಾರ್ಯನಿರ್ವಹಿಸುತ್ತವೆ.

ರೈಲುಗಳ ಅಂತಿಮ ಸಮಯ ಹೀಗಿದೆ- ಬೈಯಪ್ಪನಹಳ್ಳಿ - ಬೆಳಿಗ್ಗೆ 1.35; ಮೈಸೂರು ರಸ್ತೆ - ಬೆಳಿಗ್ಗೆ 1.:40; ನಾಗಸಂದ್ರ - ಬೆಳಿಗ್ಗೆ 1.30; ಮತ್ತು ಯೆಲಚೇನಹಳ್ಳಿ ಮೆಟ್ರೋ ನಿಲ್ದಾಣ - ಬೆಳಿಗ್ಗೆ 1.35. ನಾದಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ (ಮೆಜೆಸ್ಟಿಕ್) ನಿಂದ ನಾಲ್ಕೂ ದಿಕ್ಕುಗಳಿಗಾಗಿ ಕಡೆಯ ರೈಲು ಬೆಳಿಗ್ಗೆ 2 ಗಂಟೆಗೆ ಹೊರಡಲಿದೆ.

ಇನ್ನು ಈ ಹೆಚ್ಚುವರಿ ಸಮಯದಲ್ಲಿನ ರೈಲು ಸಂಚಾರಕ್ಕಾಗಿ ಎಂಜಿ ರಸ್ತೆ, ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ 50 ರೂ.ಗಳ ಫ್ಲಾಟ್ ದರದಲ್ಲಿ ಕಾಗದದ ಟಿಕೆಟ್‌ಗಳನ್ನು ಮಾತ್ರ ನೀಡಲಾಗುತ್ತದೆ.  ಈ ಮೂರು ನಿಲ್ದಾಣಗಳಿಂದ ಯಾವುದೇ ಟೋಕನ್‌ಗಳನ್ನು ನೀಡಲಾಗುವುದಿಲ್ಲ.  ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಡಿಸೆಂಬರ್ 31 ರಂದು ರಾತ್ರಿ 8 ಗಂಟೆಯಿಂದ ಮುಂಚಿತವಾಗಿ ಕಾಗದದ ಟಿಕೆಟ್ ಖರೀದಿಸಿಟ್ಟುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅವುಗಳು ಮೂರು ನಿರ್ದಿಷ್ಟ ನಿಲ್ದಾಣಗಳಿಂದ ಹೆಚ್ಚುವರಿ ಸಮಯದಲ್ಲಿ ಪ್ರಯಾಣಕ್ಕಾಗಿ ಮಾತ್ರವೇ ಮಾನ್ಯವಾಗಿರುತ್ತದೆ.

ಇನ್ನು ಸ್ಮಾರ್ಟ್ ಕಾರ್ಡ್ ಹೊಂದಿರುವವರು ಈ ಅವಧಿಯಲ್ಲಿಯೂ ಸಹ ಸಾಮಾನ್ಯ ರಿಯಾಯಿತಿ ದರಗಳೊಂದಿಗೆ ಎಂದಿನಂತೆ ಪ್ರಯಾಣಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ಇನ್ನು ಮೇಲಿನ ಮೂರು ನಿಲ್ದಾಣಗಳಲ್ಲದೆ ಇತರ ಮೆಟ್ರೋ ನಿಲ್ದಾಣಗಳಲ್ಲಿ ಟೋಕನ್ ಗಳ ಅನುಮತಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com