ಹಂಪಿಯ ಯಂತ್ರೋಧ್ದಾರಕ ಪ್ರಾಣದೇವರು ಪೇಜಾವರ ವಿಶ್ವೇಶ ತೀರ್ಥರ ಆರಾಧ್ಯ ದೈವ

ವಿಶ್ವ ವಿಖ್ಯಾತ ಹಂಪಿಯ ಚಕ್ರತೀರ್ಥದಲ್ಲಿರುವ ಯಂತ್ರೋಧ್ದಾರಕ ಪ್ರಾಣದೇವರು ಪೇಜಾವರ ವಿಶ್ವೇಶ ತೀರ್ಥರ ಆರಾಧ್ಯ ದೈವ ಆಗಿದ್ದರು. 
ವಿಶ್ವೇಶತೀರ್ಥ ಸ್ವಾಮೀಜಿಗಳು
ವಿಶ್ವೇಶತೀರ್ಥ ಸ್ವಾಮೀಜಿಗಳು

ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯ ಚಕ್ರತೀರ್ಥದಲ್ಲಿರುವ ಯಂತ್ರೋಧ್ದಾರಕ ಪ್ರಾಣದೇವರು ಪೇಜಾವರ ವಿಶ್ವೇಶ ತೀರ್ಥರ ಆರಾಧ್ಯ ದೈವ ಆಗಿದ್ದರು. 

ಎಂಟು ವರ್ಷ ವಯಸ್ಸಿನವರಾಗಿದ್ದಾಗಲೇ ಕೋದಂಡರಾಮ ದೇವಸ್ಥಾನದ ಬಳಿ ಇರುವ ಯಂತ್ರೋಧ್ದಾರಕ ದೇವಸ್ಥಾನಕ್ಕೆ ಶ್ರೀಗಳು ಭೇಟಿ ನೀಡಿದ್ದರು. 

ಎಂಟನೇ ವಯಸ್ಸಿನಲ್ಲಿರುವಾಗಲೇ ತುಂಗಭದ್ರ ನದಿ ದಡದಲ್ಲಿರುವ ಯಂತ್ರೋದ್ದಾರಕದಲ್ಲಿ ಸನ್ಯಾಸತ್ವ ಸ್ವೀಕಾರಮಾಡಿದ್ದ ಶ್ರೀಗಳು,
ಸನ್ಯಾಸತ್ವ ಸ್ವೀಕಾರಮಾಡಿದ 80ವರ್ಷಗಳ ನಂತರ ಮತ್ತೆ ಹಂಪಿಯಲ್ಲಿ ವಿಶೇಷ ಪೂಜೆ ನೆರವೇರಿಸಿದ್ದರು. 

ಹಿರಿಯ ಕಿರಿಯ ಇಬ್ಬರು ಶ್ರೀಗಳು ಯಂತ್ರೋದ್ದಾರಕದಲ್ಲಿ ಪೂಜೆ ಸಲ್ಲಿಸಿದ್ದು ಇದೀಗ ನೆನಪು ಮಾತ್ರ,17/06/18ರಂದು ಹಂಪಿಗೆ ಭೇಟಿ  ನೀಡಿ ಯಂತ್ರೋದ್ದಾರಕದಲ್ಲಿ ಪೂಜೆ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com