ಚಿತ್ರದುರ್ಗ ಚಳ್ಳಕೆರೆ ತಾಲ್ಲೂಕಿನಲ್ಲಿ ಮೊದಲ ಭ್ರೂಣಲಿಂಗ ಪತ್ತೆ ಪ್ರಕರಣ ದಾಖಲು

ಭ್ರೂಣಹತ್ಯೆ ಕಾನೂನು ಬಾಹಿರವಾಗಿದ್ದರೂ ಕೂಡ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ಸ್ತ್ರೀರೋಗ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಿತ್ರದುರ್ಗ: ಭ್ರೂಣಹತ್ಯೆ ಕಾನೂನು ಬಾಹಿರವಾಗಿದ್ದರೂ ಕೂಡ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ಸ್ತ್ರೀರೋಗ ತಜ್ಞೆಯೊಬ್ಬರು 6 ತಿಂಗಳ ಭ್ರೂಣದ ಲಿಂಗ ಬಹಿರಂಗಪಡಿಸಿ ಪಿಡಿಪಿಎನ್ ಡಿಟಿ ಕಾಯ್ದೆಯನ್ನು(ಪೋಸ್ಟ್-ಕಾನ್ಸೆಪ್ಶನ್ ಪ್ರಿ-ನ್ಯಾಟಲ್ ಡಯಾಗ್ನೋಸ್ಟಿಕ್ ಟೆಕ್ನಿಕ್ಸ್ ಆಕ್ಟ್) ಉಲ್ಲಂಘಿಸಿದ್ದಾರೆ. ಇದೀಗ ಅಧಿಕಾರಿಗಳು ವೈದ್ಯೆ ಮತ್ತು ಆಕೆ ನಡೆಸುತ್ತಿರುವ ಕ್ಲಿನಿಕ್ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಪಿಸಿಪಿಎನ್ ಡಿಟಿ ಉಪ ನಿರ್ದೇಶಕ ಡಾ ಪ್ರಭು ಗೌಡ, ಭ್ರೂಣದ ಲಿಂಗ ಪತ್ತೆ ಹಚ್ಚಿನ ಡಾ ಶಂಕರ ಲಕ್ಷ್ಮಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಗರ್ಭಿಣಿ ಮತ್ತು ಆಕೆಯ ಮನೆಯವರು ಹೆಣ್ಣು ಮಗುವಾದರೆ ತೆಗೆಸಬೇಕೆಂದು ಒತ್ತಾಯಿಸಲಾಗಿತ್ತು. ವೈದ್ಯರು ಗರ್ಭಪಾತಕ್ಕೆ ಒಪ್ಪಿಕೊಂಡ ಕರ್ನಾಟಕದಲ್ಲಿ ಇದು ಮೊದಲ ಪ್ರಕರಣ ಎಂದರು.

ಗರ್ಭಪಾತ ಮಾಡಲು ನೀಡಿದ ಮಾತ್ರೆಗೆ ಪ್ರತಿಯಾಗಿ ನೀಡಿದ ಔಷಧಗಳನ್ನು 48 ಗಂಟೆಗಳೊಳಗೆ ಕೊಟ್ಟಿರುವುದರಿಂದ ಸದ್ಯ ಗರ್ಭಿಣಿ ಮತ್ತು ಭ್ರೂಣ ಅಪಾಯದಿಂದ ಪಾರಾಗಿದ್ದಾರೆ. ವೈದ್ಯೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೈದ್ಯೆಯ ಪರವಾನಗಿಯನ್ನು ರದ್ದುಪಡಿಸುವಂತೆ ಕರ್ನಾಟಕ ವೈದ್ಯಕೀಯ ಮಂಡಳಿ ಶಿಫಾರಸು ಮಾಡಿದೆ.

ಘಟನೆಯ ಹಿನ್ನಲೆಯೇನು?: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ಲಕ್ಷ್ಮಿ ಶ್ರೀನಿವಾಸ ನರ್ಸಿಂಗ್ ಹೋಂ ನಡೆಸುತ್ತಿರುವ ವೈದ್ಯೆ ಡಾ ಶಂಕರ ಲಕ್ಷ್ಮಿ  ಕಳೆದ ಜನವರಿ 29ರಂದು 6 ತಿಂಗಳ ಭ್ರೂಣದ ಲಿಂಗ ಪತ್ತೆ ಮಾಡಿದ್ದರು. ಚಳ್ಳಕೆರೆ ತಾಲ್ಲೂಕಿನ ವಿಶ್ವೇಶ್ವರಪುರ ಗ್ರಾಮದಿಂದ ಗರ್ಭಿಣಿ ಚೆಕಪ್ ಗೆಂದು ಬಂದಿದ್ದರು.

ತಮಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದು ಮೂರನೇ ಮಗು ಹೆಣ್ಣು ಮಗುವಾದರೆ ಕಷ್ಟ ಎಂದು ನಿರಂತರವಾಗಿ ಪತಿ ಕಿರುಕುಳ ನೀಡುತ್ತಿದ್ದಾರೆ. ದಯವಿಟ್ಟು ಭ್ರೂಣ ಲಿಂಗ ಪತ್ತೆ ಮಾಡಿ, ಹೆಣ್ಣು ಮಗುವಾದರೆ ತೆಗೆಸಿಬಿಡಿ ಎಂದು ಗರ್ಭಿಣಿ ನಿರಂತರವಾಗಿ ಒತ್ತಾಯಿಸುತ್ತಿದ್ದರಂತೆ. ತೀವ್ರ ಒತ್ತಡದಿಂದ ವೈದ್ಯೆ ಲಿಂಗ ಪತ್ತೆ ಮಾಡಿದಾಗ ಅದು ಕೂಡ ಹೆಣ್ಣು ಮಗು ಎಂದು ತಿಳಿಯಿತು. ಆಗ ಗರ್ಭಪಾತ ಮಾಡುವಂತೆ ಮತ್ತೆ ಒತ್ತಡ ಹೇರಲಾರಂಭಿಸಿದರು. ಗರ್ಭಿಣಿ ಗರ್ಭಪಾತವಾಗಲು ಒಂದು ಮಾತ್ರೆ ತಿಂದರು. ವಿಷಯ ಪತಿಗೆ ತಿಳಿದು ವೈದ್ಯೆ ಬಳಿ ಬಂದು ಜಗಳವಾಡಿದರು.

ಪತಿ ತಾಲ್ಲೂಕು ಆರೋಗ್ಯಾಧಿಕಾರಿಗೆ ದೂರು ನೀಡಿದಾಗ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ವಿಷಯ ತಿಳಿಸಿದರು. ಜಿಲ್ಲಾ ಆರೋಗ್ಯಾಧಿಕಾರಿಗಳು ವೈದ್ಯೆಯ ಕ್ಲಿನಿಕ್ ಗೆ ಬಂದು ಪರಿಶೀಲನೆ ನಡೆಸಿದರು. ಅವರು ಜಿಲ್ಲಾ ಮಟ್ಟದ ಪಿಸಿಪಿಎನ್ ಡಿಟಿ ನಿರ್ದೇಶನಾಲಯಕ್ಕೆ ತಿಳಿಸಿದರು. ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಅಗತ್ಯ ದಾಖಲೆ, ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com