ಬಾಣಸವಾಡಿ-ವೈಟ್ ಫೀಲ್ಡ್ ನಡುವೆ ಹೊಸ ಡೆಮು ರೈಲು ಸಂಚಾರ ಪ್ರಾರಂಭ

ಬಾಣಸವಾಡಿ ಹಾಗೂ ವೈಟ್ ಫೀಲ್ಡ್ ನಡುವೆ ಹೊಸ ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಡೆಮು) ರೈಲಿಗೆ ಬೆಂಗಳೂರು ಕೇಂದ್ರ ಕ್ಷೇತ್ರದ ಸಂಸದ ಪಿ.ಸಿ ಮೋಹನ್ ಭಾನುವಾರ ಚಾಲನೆ ನಿಡಿದ್ದಾರೆ.
ಬಾಣಸವಾಡಿ-ವೈಟ್ ಫೀಲ್ಡ್ ನಡುವೆ ಹೊಸ ಡೆಮು ರೈಲು ಸಂಚಾರ ಪ್ರಾರಂಭ
ಬಾಣಸವಾಡಿ-ವೈಟ್ ಫೀಲ್ಡ್ ನಡುವೆ ಹೊಸ ಡೆಮು ರೈಲು ಸಂಚಾರ ಪ್ರಾರಂಭ
ಬೆಂಗಳೂರು: ಬಾಣಸವಾಡಿ ಹಾಗೂ ವೈಟ್ ಫೀಲ್ಡ್ ನಡುವೆ ಹೊಸ ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಡೆಮು) ರೈಲಿಗೆ ಬೆಂಗಳೂರು ಕೇಂದ್ರ ಕ್ಷೇತ್ರದ ಸಂಸದ  ಪಿ.ಸಿ ಮೋಹನ್ ಭಾನುವಾರ ಚಾಲನೆ ನಿಡಿದ್ದಾರೆ. ವಿಶೇಷ ರೈಲಿಗೆ ಹೂಮಾಲೆ, ಬಲೂನುಗಳಿಂದ ಅಲಂಕರಿಸಲಾಗಿತ್ತು.
ವೈಟ್ ಫೀಲ್ಡ್,-ಬಾಣಸವಾಡಿ ವಿಶೇಷ ಡೆಮು ರೈಲು  (ಟ್ರೈನ್ ನಂ. 06577) ಬೆಳಿಗ್ಗೆ  10.20ಕ್ಕೆ ರೈಲ್ವೆ ನಿಲ್ದಾಣದ ಫ್ಲ್ಯಾಟ್ ಫಾರಂ ಸಂಖ್ಯೆ ಎರಡರಿಂದ ಹೊರಟಿದೆ. ಇದು ನಿಗದಿತ ವೇಳಾಪಟ್ಟಿಗಿಂತ 50 ನಿಮಿಷಗಳಷ್ಟು ತಡವಾಗಿ ಸಂಚಾರ ಪ್ರಾರಂಭಿಸಿದೆ.
ಭಾನುವಾರ ಹೊರತು ವಾರದ ಎಲ್ಲಾ ದಿನಗಳಲ್ಲಿ ರೈಲು ಸಂಚಾರ ನಡೆಸಲಿದ್ದು ಬೆಳಿಗ್ಗೆ 7.50ಕ್ಕೆ ವೈಟ್ ಫೀಲ್ಡ್ ನಿಂದ ಹೊರಡುವ ರೈಲು 8.30ಕ್ಕೆ ಬಾಣಸವಾಡಿ ತಲುಪಲಿದೆ.ಸಂಜೆ 6.25ಕ್ಕೆ ಬಾಣಸಆಡಿಯಿಂದ ಹೊರಡುವ ರೈಲು 7.20ಕ್ಕೆ ವೈಟ್ ಫೀಲ್ಡ್ ತಲುಪಲಿದೆ.
ಈ ವಾರದ ಪ್ರಾರಂಭದಲ್ಲಿ ರೈಲ್ವೆ ಇಲಾಖೆ ಹೊಸ ಡೆಮು ರೈಲಿನ ವೇಳಾ ಪಟ್ಟಿ ಘೋಷಣೆ ಮಾಡಿದಾಗ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಆದರೆ ಇಲಾಖೆ ಮಾತ್ರ ತನ್ನ ನಿರ್ಣಯಕ್ಕೆ ಅಂಟಿಕೊಂಡಿದೆ.
ಇದಕ್ಕೆ ಮುನ್ನ ಮಾತನಾಡಿದ ಕೇಂದ್ರ ಸಂಸದ ಮೋಹನ್ ಕೇಂದ್ರದ ಸಬ್ ಅರ್ಬನ್ ರೈಲು ಯೋಜನೆಗೆ ರಾಜ್ಯ ಒಡ್ಡಿರುವ 19 ಶರತ್ತುಗಳು ಸ್ವೀಕಾರಾರ್ಹವಾಗಿಲ್ಲ ಎಂದು ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com