ಬೆಳಗಾವಿ: ಹುಟ್ಟುಹಬ್ಬಕ್ಕೆ ತಲ್ವಾರ್ ನಿಂದ ಕೇಕ್ ಕತ್ತರಿಸಿದ ಬಿಜೆಪಿ ನಾಯಕನ ಬಂಧನ

: ತನ್ನ ಜನ್ಮದಿನಕ್ಕಾಗಿ ತಯಾರಾದ ಕೇಕ್ ಅನ್ನು ತಲ್ವಾರ್ ನಿಂದ ಕತ್ತರಿಸಿದ್ದ ಬಿಜೆಪಿ ನಾಯಕ ನಿಖಿಲ್ ಮುರ್ಕುಟೆ ಅವರನ್ನು ಪೋಲೀಸರು ಬಂಧಿಸಿದ್ದಾರೆ.
ಬೆಳಗಾವಿ: ಹುಟ್ಟುಹಬ್ಬಕ್ಕೆ ತಲ್ವಾರ್ ನಿಂದ ಕೇಕ್ ಕತ್ತರಿಸಿದ ಬಿಜೆಪಿ ನಾಯಕನ ಬಂಧನ
ಬೆಳಗಾವಿ: ಹುಟ್ಟುಹಬ್ಬಕ್ಕೆ ತಲ್ವಾರ್ ನಿಂದ ಕೇಕ್ ಕತ್ತರಿಸಿದ ಬಿಜೆಪಿ ನಾಯಕನ ಬಂಧನ
Updated on
ಬೆಳಗಾವಿ: ತನ್ನ ಜನ್ಮದಿನಕ್ಕಾಗಿ ತಯಾರಾದ ಕೇಕ್ ಅನ್ನು ತಲ್ವಾರ್ ನಿಂದ ಕತ್ತರಿಸಿದ್ದ ಬಿಜೆಪಿ ನಾಯಕ ನಿಖಿಲ್ ಮುರ್ಕುಟೆ ಅವರನ್ನು ಪೋಲೀಸರು ಬಂಧಿಸಿದ್ದಾರೆ. ಇವರು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಅವರ ಜತೆ ಸೇರಿ ಆಚರಿಸಿಕೊಂಡಿದ್ದ ಹುಟ್ಟುಹಬ್ಬದ ಸಮಾರಂಭದ ವೇಳೆ ತಲ್ವಾರ್ ನಿಂದ ಕೇಕ್ ಕತ್ತರಿಸಿದ್ದ ಹಲವು ಫೋಟೋಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದವು.
ಬಂಧಿತ ನಿಖಿಲ್ ಮುರ್ಕುಟೆ  ಬೆಳಗಾವಿ ಮಹಾನಗರ ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷನಾಗಿದ್ದಾರೆ. ಬೆಳಗಾವಿಯ ಮಾಳಮಾರುತಿ ಪೋಲೀಸರು ಈ ಕಾರ್ಯಾಚರಣೆ ನಡೆಸಿದ್ದು ನಿಖಿಲ್ ಅವರನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳಿಸಿದ್ದಾರೆ. ಅಲ್ಲದೆ ನಿಖಿಲ್ ಅವರಿಗೆ ನ್ಯಾಯಾಲಯವು  10 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಫೆಬ್ರವರಿ  1ರಂದು ಬೆಳಗಾವಿಯ ಗಾಂಧಿನಗರದಲ್ಲಿ ನಡೆದಿದ್ದ ಸಮಾರಂಭದಲ್ಲಿ ನಿಖಿಲ್ ಜತೆಗೆ ಶಾಸಕ ಬೆನಕೆ ಹಾಗೂ ಮಾಜಿ ಶಾಸಕ ಸಂಜಯ್ ಪಾಟೀಲ್ ಕೂಡ ಭಾಗವಹಿಸಿದ್ದರು.
ಇದಕ್ಕೆ ಹಿಂದೆ ಮಹಾರಾಷ್ಟ್ರದ ನಾಸಿಕ್ ನ ಶಿವಸೇನಾ ಮುಖ್ಯಸ್ಥ ಪ್ರವೀಣ್ ಟಿಡ್ಮೆ ಸಹ ಇದೇ ರೀತಿ ತಲ್ವಾರ್ ಬಳಸಿ ಕೇಕ್ ಕತ್ತರಿಸಿದ್ದು ಅವರನ್ನು ಸಹ ಪೋಲೀಸರು ಬಂಧಿಸಿದ್ದರು.2013 ರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇವರ ಚಿತ್ರಗಳು ವೈರಲ್ ಆಗುತ್ತಿದ್ದಂತೆ ಮಹಾರಾಷ್ಟ್ರ ಪೊಲೀಸರು ಪ್ರವೀಣ್ ವಿರುದ್ಧ ಸುಮೊ ಮೋಟೋ ಪ್ರಕರಣ ದಾಖಲಿಸಿಕೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com