ಮಂಗಳೂರು ಜನತೆಯನ್ನು ಬೆಚ್ಚಿಬೀಳಿಸುವ ಪ್ರೇಮಿಗಳ ದಿನದ 10 ವರ್ಷಗಳ ಹಿಂದಿನ ಘಟನೆ!

ಪ್ರೇಮಿಗಳ ದಿನ ಮಂಗಳೂರು ನಗರ ಜನತೆಗೆ ಈ ವರ್ಷ ಕೂಡ ಸಿಂಹಸ್ವಪ್ನವಾಗಿದೆ. ರಾಜ್ಯದ ಬೇರೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಂಗಳೂರು: ಪ್ರೇಮಿಗಳ ದಿನವನ್ನು ಸಂಭ್ರಮ-ಸಡಗರದಿಂದ ಮಂಗಳೂರು ನಗರದ ಜನತೆ ಆಚರಿಸುತ್ತಿಲ್ಲ. ರಾಜ್ಯದ ಬೇರೆ ಪ್ರಮುಖ ನಗರಗಳಲ್ಲಿ ಪಬ್, ಮಾಲ್ ಮತ್ತು ಇತರ ಸ್ಥಳಗಳು ಪ್ರೇಮಿಗಳಿಗೆ ಸ್ವರ್ಗಸ್ಥಳವಾಗಿದೆ. ಆದರೆ ಮಂಗಳೂರು ನಗರದಲ್ಲಿ ಪ್ರೇಮಿಗಳ ದಿನಕ್ಕೆ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಪಬ್, ಮಾಲ್ ಗಳು ಹಮ್ಮಿಕೊಂಡಿಲ್ಲ. ಇದಕ್ಕೆ ಕಾರಣ 10 ವರ್ಷಗಳ ಹಿಂದೆ ಪಬ್ ಮೇಲೆ ನಡೆದ ದಾಳಿ.

ಗಿಫ್ಟ್ ಶಾಪ್ ಗಳಲ್ಲಿ ಪ್ರೇಮಿಗಳ ದಿನದ ಸಂದೇಶ ಸಾರುವ ಗ್ರೀಟಿಂಗ್ ಕಾರ್ಡುಗಳು ಮತ್ತು ಗಿಫ್ಟ್ ಗಳು ಕೂಡ ಕಾಣೆಯಾಗಿವೆ. ಪಬ್ ಗಳು ಮತ್ತು ಗಿಫ್ಟ್ ಮಳಿಗೆಗಳಿಗೆ ಯಾವುದಾದರೂ ಸಂಘಟನೆ ದಾಳಿ ನಡೆಸಬಹುದು ಎಂಬ ಭೀತಿಯಿಂದ ಪ್ರೇಮಿಗಳ ದಿನದ ಆಚರಣೆ ಕಣ್ಮರೆಯಾಗಿದೆ.


2009ರಲ್ಲಿ ಮಂಗಳೂರಿನ ಪಬ್ ಮೇಲೆ ನಡೆದ ದಾಳಿ ಮತ್ತೆ ಮರುಕಳಿಸಬಾರದು ಎಂದು ಜನ ಎಚ್ಚರಿಕೆಯಿಂದಿದ್ದಾರೆ. ಪ್ರೇಮಿಗಳ ದಿನದಂದು ಸಾರ್ವಜನಿಕವಾಗಿ ತೊಂದರೆ ನೀಡಬಾರದು ಎಂದು ಬಲಪಂಥೀಯ ಸಂಘಟನೆಗಳಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರೂ ಕೂಡ ಜನರು ಸಾರ್ವಜನಿಕವಾಗಿ ಆಚರಿಸಲು ಸಿದ್ದರಿಲ್ಲ.

ಪ್ರೇಮಿಗಳ ಮೇಲೆ ಪಬ್ ನಲ್ಲಿ ದಾಳಿ ನಡೆಸಿದ ಪ್ರಕರಣ ಇನ್ನೂ ನನ್ನ ನೆನಪಿನಲ್ಲಿದೆ ಎನ್ನುತ್ತಾರೆ ಮಂಗಳೂರಿನ ಕಾನೂನು ವಿದ್ಯಾರ್ಥಿಯೊಬ್ಬರು. ಪಬ್ ಮಾಲಿಕರು, ಗಿಫ್ಟ್ ಮಳಿಗೆಗಳ ಮಾಲಿಕರು ಸಹ ತಮ್ಮ ಮಳಿಗೆಗಳನ್ನು ಫೆಬ್ರವರಿ 14ರ ಆಚರಣೆಗೆ ಅಲಂಕರಿಸುವ ಮನಸ್ಥಿತಿಯಲ್ಲಿಲ್ಲ.

ಪ್ರೇಮಿಗಳ ದಿನಕ್ಕೆ ಮಂಗಳೂರು ನಗರದಲ್ಲಿ ಭದ್ರತೆ ಸಹಜವಾಗಿದೆ ಎಂದರು ನಗರ ಪೊಲೀಸ್ ಆಯುಕ್ತ ಟಿ ಆರ್ ಸುರೇಶ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com