ಮೈಸೂರು: ನಗರದ ಎರಡು ಸ್ಪಾ ಮೇಲೆ ದಾಳಿ ನಡೆಸಿದ ಪೊಲೀಸರು, ಮಸಾಜ್ ಸೆಂಟರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಐವರನ್ನು ಬಂಧಿಸಿದ್ದು, ಆರು ಮಹಿಳೆಯರನ್ನು ರಕ್ಷಿಸಿದ್ದಾರೆ. .ಬಂಧಿತರನ್ನು ಮೈಸೂರಿನ ಹರೀಶ್ (38), ನಾರಾಯಣ್ (57), ಕೋಳಿಕೋಡ್ ನ ಧೀರಜ್ (27), ಅಶ್ವಥ್ (29) ಹಾಗೂ ಆಶಿಲ್ (29) ಎಂದು ಗುರುತಿಸಲಾಗಿದೆ. .ಸಿಸಿಬಿಯ ಎಸಿಪಿ ಬಿ.ಆರ್.ಲಿಂಗಪ್ಪ ನೇತೃತ್ವದ ತಂಡ ದಾಳಿ ನಡೆಸಿದ್ದು, 6 ಸಾವಿರ ನಗದು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದೆ..ಮುಂಬೈನ ಓರ್ವ ಮಹಿಳೆ ಸೇರಿ ಆರು ಮಹಿಳೆಯರನ್ನು ರಕ್ಷಿಸಲಾಗಿದ್ದು, ನಜರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ..Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos