ಟಿ. ನರಸಿಪುರ: ದಕ್ಷಿಣ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ, ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಭಕ್ತರು

ಹನ್ನೊಂದನೇ ದಕ್ಷೀಣ ಭಾರತ ಕುಂಭಮೇಳ ಮೈಸೂರು ಜಿಲ್ಲೆ ತಿರಮಕೂಡಲ ನರಸಿಪುರದ ತ್ರಿವೇಣಿ ಸಂಗಮದಲ್ಲಿ ವಿದ್ಯುಕ್ತ ಚಾಲನೆ ದೊರಕುದೆ.
ದಕ್ಷಿಣ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ, ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಭಕ್ತರು
ದಕ್ಷಿಣ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ, ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಭಕ್ತರು
Updated on
ಮೈಸೂರು: ಹನ್ನೊಂದನೇ ದಕ್ಷೀಣ ಭಾರತ ಕುಂಭಮೇಳ ಮೈಸೂರು ಜಿಲ್ಲೆ ತಿರಮಕೂಡಲ ನರಸಿಪುರದ ತ್ರಿವೇಣಿ ಸಂಗಮದಲ್ಲಿ ವಿದ್ಯುಕ್ತ ಚಾಲನೆ ದೊರಕುದೆ. ಕುಂಭಮೇಳದ ಮೊದಲ ದಿನವಾದ ಭಾನುವಾರ ನೂರಾರು ಸಂಖ್ಯೆಯ ಭಕ್ತರು ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಪವಿತ್ರ್ ಸ್ನಾನ ಮಾಡಿ ಪುನೀತರಾಗಿದ್ದಾರೆ.
ಬೆಳಿಗ್ಗೆ 9ಕ್ಕೆ ನದಿಯ ಮಧ್ಯ ನಿರ್ಮಿಸಲಾಗಿರುವ ಯಾಗಮಂಟಪದಲ್ಲಿ ಅರ್ಚಕರು ಹೋಮ, ಹವನ ನಡೆಸುವ ಮೂಲಕ ಕುಂಭಮೇಳಕ್ಕೆ ಚಲನೆ ಸಿಕ್ಕಿದೆ. ಬೆಂಗಳೂರಿನ ರಾಜರಾಜೇಶ್ವರಿ ದೇವಸ್ಥಾನದ ಅರ್ಚಕರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿದೆ.
ಭಾನುವಾರ (ಫೆ.17) ರಿಂಡ ಮೂರು ದಿನಗಳ ಕಾಲ ಈ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಪ್ರತ್ರಿದಿನ ಬೆಳಿಗ್ಗೆ ಸಂಕಲ್ಪ ಹೋಮ, ರುದ್ರಾಭಿಷೇಕ ಪೂಜಾ ಕೈಂಕರ್ಯ ನೆರವೇರಲಿದೆ.
ಇಂದು ಶ್ರೀ ಅಗಸ್ತ್ಯೇಶ್ವರ ಸನ್ನಿಧಿಯಲ್ಲಿ  ಅನುಜ್ಞೆ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಮಂಗಳಾರತಿ. ನೆರವೇರಿದರೆ ಸಂಜೆ ವೇಳೆ ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಫೆ.18ರಂದು ಸಹ ಬೆಳಿಗ್ಗೆ ನದಿ ನಡುವಿನ ಯಾಗಶಾಲೆಯಲ್ಲಿ ಪುಣ್ಯಾಹ, ನವಗ್ರಹಹೋಮ, ಸುದರ್ಶನ ಹೋಮ, ರುದ್ರ ಹೋಮ, ಪೂರ್ಣಾಹುತಿ. 11 ಗಂಟೆಗೆ ಧರ್ಮಸಭೆ, ಸಂಜೆ 4 ಗಂಟೆಗೆ ಮಹಾತ್ಮ ಸಂತರ ಮಹಾಮಂಡಲೇಶ್ವರರ ಸಂಗಮ ಕ್ಷೇತ್ರ ಪ್ರವೇಶ, ಪಟ್ಟಣದ ಗುಂಜಾನರಸಿಂಹಸ್ವಾಮಿ ದೇವಾಲಯದ ಮುಂಭಾಗದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ. ಸಂಜೆ 4 ಗಂಟೆಗೆ ರುದ್ರ ಹೋಮ, ಪೂರ್ಣಾಹುತಿ, 7 ಗಂಟೆಗೆ ಗಂಗಾಪೂಜೆ ವಾರಾಣಸಿ ಮಾದರಿಯಲ್ಲಿ ದೀಪಾರತಿ ಕಾರ್ಯಕ್ರಮಆಯೋಜನೆಯಾಗಿದೆ.
ಫೆ.19ರಂದು ಸಹ ನದಿ ನಡುವಿನ ಯಾಗಶಾಲೆಯಲ್ಲಿ ಚಂಡಿ ಹೋಮ, ಪೂರ್ಣಾಹುತಿ, ಕುಂಬೋದ್ವಾಸನ, ಸಪ್ತ ನದಿಗಳಿಂದ ತಂದ ತೀರ್ಥಗಳನ್ನು ತ್ರಿವೇಣಿ ಸಂಗಮದಲ್ಲಿ ಸಂಯೊಜನೆ. ಬೆಳಗ್ಗೆ 9.35ರಿಂದ 9.50ರವರೆಗೆ ಹಾಗೂ 11.30ರಿಂದ 12ರವರೆಗೆ ಮಹೋದಯ ಪುಣ್ಯ ಕಾಲದ ಮಹಾಮಾಘ ಸ್ನಾನ. ಧರ್ಮ ಸಭೆ ಆಯೋಜನೆಯಾಗಿದೆ.
ಪ್ರತಿ ಬಾರಿ ಅಗಸ್ತ್ಯೇಶ್ವರ ದೇವಾಲಯದ ಪ್ರಾಂಗಣದಲ್ಲಿ ನಡೆಯುತ್ತಿದ್ದ ಹೋಮ ಹವನಗಳು ಈ ಬಾರಿ ದೇವಾಲಯ ಜೀರ್ಣೋದ್ದಾರದ ಕಾರಣ ನದಿ ನಡುವಿನ ಯಾಗಶಾಲೆಯಲ್ಲಿ ನಡೆಯುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com