ಬಿಬಿಎಂಪಿ ಬಜೆಟ್; ಸರ್ವಜನರ ಹಿತ ಪರಮ ಗುರಿ, 645.97 ಕೋಟಿ ಮೊತ್ತದ ಕಲ್ಯಾಣ ಕಾರ್ಯಕ್ರಮಗಳ ಘೋಷಣೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ಜನರಿಗೆ ವೈಯಕ್ತಿಕ ಮನೆ ಹೊಂದಲು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ 5 ಕೋಟಿ ರೂ....
ಬಿಬಿಎಂಪಿ ಬಜೆಟ್;  ಸರ್ವಜನರ ಹಿತ ಪರಮ ಗುರಿ, 645.97 ಕೋಟಿ ಮೊತ್ತದ ಕಲ್ಯಾಣ ಕಾರ್ಯಕ್ರಮಗಳ ಘೋಷಣೆ
ಬಿಬಿಎಂಪಿ ಬಜೆಟ್; ಸರ್ವಜನರ ಹಿತ ಪರಮ ಗುರಿ, 645.97 ಕೋಟಿ ಮೊತ್ತದ ಕಲ್ಯಾಣ ಕಾರ್ಯಕ್ರಮಗಳ ಘೋಷಣೆ
Updated on
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ಜನರಿಗೆ ವೈಯಕ್ತಿಕ ಮನೆ ಹೊಂದಲು ಪ್ರಸಕ್ತ ಸಾಲಿನ  ಬಜೆಟ್ ನಲ್ಲಿ 5 ಕೋಟಿ ರೂ. ಮೀಸಲಿರಿಸುವ ಮೂಲಕ ಬಿಬಿಎಂಪಿ ಮೇಲ್ವರ್ಗದವರಿಗೂ ತನ್ನ ಯೋಜನೆಗಳನ್ನು ವಿಸ್ತರಿಸಿದೆ.
ಜೊತೆಗೆ, ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರು ಸ್ವಾವಲಂಬಿಯಾಗಿ ಬದುಕಲು ಪ್ರೇರೇಪಿಸುವ ಸಲುವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು 2 ಕೋಟಿ ರೂ. ಅನುದಾನ ಘೋಷಿಸಿದೆ.
ನಗರದ ಕಲ್ಯಾಣ ಕಾರ್ಯಕ್ರಮಕ್ಕಾಗಿ ಬಜೆಟ್‍ನ ಶೇ.24.10ರಷ್ಟು ಭಾಗ ಅಂದರೆ, 645.97 ಕೋಟಿ ರೂ. ಅನುದಾನ ಘೋಷಿಸಿರುವ ಬಿಬಿಎಂಪಿ, ಪ್ರತಿ ವಾರ್ಡ್ ಗೆ 10 ಒಂಟಿ ಮನೆಗಳನ್ನು ಒದಗಿಸಲು 100 ಕೋಟಿ ರೂ. ಪರಿಶಿಷ್ಟ ಜಾತಿ, ವರ್ಗದ ಪ್ರದೇಶದ ಅಭಿವೃದ್ಧಿಗೆ 60 ಕೋಟಿ ರೂ.  ಪ್ರತಿ ವಾರ್ಡ್ ನಲ್ಲಿ ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ 5 ವೈಯಕ್ತಿಕ ಮನೆ ನಿರ್ಮಾಣಕ್ಕೆ  50 ಕೋಟಿ ರೂ. 'ಬಡವರ ಬಂಧು' ಯೋಜನೆಯಡಿ ಪ್ರತಿ ವಾರ್ಡ್ ನ ಬೀದಿ ಬದಿ ವ್ಯಾಪಾರಿಗಳಿಗೆ 15 ತಳ್ಳುವ ಗಾಡಿಗಳ ವಿತರಣೆಗೆ  4 ಕೋಟಿ ರೂ. ಹಾಗೂ ನಿರಾಶ್ರಿತರಿಗೆ ರಾತ್ರಿ ತಂಗುದಾಣ ನಿರ್ಮಾಣ ಹಾಗೂ ನಿರ್ವಹಣೆಗೆ 1 ಕೋಟಿ ರೂ. ಪ್ರಕಟಿಸಿದೆ.
ಕಿವುಡ, ಮೂಗ ಮತ್ತು ಅಂಧರ ಶಾಲೆಗಳನ್ನು ನಡೆಸುತ್ತಿರುವ ದತ್ತಿ ಸಂಸ್ಥೆಗಳಿಗೆ 10 ಕೋಟಿ ರೂ., ವಿಕಲಚೇತನರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ನೆರವು ಒದಗಿಸುವ ಸಲುವಾಗಿ 2 ಕೋಟಿ ರೂ., ವಿಕಲಚೇತನರಿಗೆ ಜೈಪುರ ಕಾಲು ಜೋಡಣೆ ಸೌಲಭ್ಯ, ವೈದ್ಯಕೀಯ ನೆರವು, ಶಾಲಾ ಶುಲ್ಕ ಮರುಪಾವತಿ ಸೇರಿ ಸ್ವಾವಲಂಬನೆಯ ಬದುಕು ನಡೆಸಲು ನೆರವಾಗುವ ಯೋಜನೆಗಳಿಗೆ  ಒಟ್ಟು 75 ಕೋಟಿ ರೂ. ಮೀಸಲಿರಿಸಲಾಗಿದೆ.
ಪ್ರತಿ ವಾರ್ಡ್ ಗಳಿಗೆ 10 ಆಟೋ ರಿಕ್ಷಾಗಳನ್ನು ನೀಡಲು ಬಿಬಿಎಂಪಿ ಮುಂದಾಗಿದ್ದು, ಇದಕ್ಕಾಗಿ 10 ಕೋಟಿ ರೂ.ಮೀಸಲಿರಿಸಿದೆ. ಮಂಗಳಮುಖಿಯರಿಗೆ 1 ಕೋಟಿ ರೂ. ವೆಚ್ಚದಲ್ಲಿ ವಿಶೇಷ  ಕಾರ್ಯಕ್ರಮಗಳು, 4 ಕೋಟಿ ರೂ. ವೆಚ್ಚದಲ್ಲಿ ಪ್ರತಿ ವಾರ್ಡ್ ಗೆ 50 ಸೈಕಲ್ ಗಳ ವಿತರಣೆ, 8 ಕೋಟಿ ರೂ. ವೆಚ್ಚದಲ್ಲಿ ಪ್ರತಿ ವಾರ್ಡ್ ನಲ್ಲಿ 50 ಹೊಲಿಗೆ ಯಂತ್ರ ವಿತರಣೆ, ಬೀದಿ ಬದಿ ವ್ಯಾಪಾರಿಗಳ ಕಲ್ಯಾಣಕ್ಕೆ 25 ಲಕ್ಷ ರೂ. ಹಿರಿಯ ನಾಗರಿಕರ ಕಲ್ಯಾಣ ಕಾರ್ಯಕ್ರಮಗಳಿಗೆ 5 ಕೋಟಿ ರೂ. ಘೋಷಿಸಲಾಗಿದೆ.
ಬಿಎಂಟಿಸಿ ಉಚಿತ ಬಸ್‍ ಪಾಸ್‍ ಸೌಲಭ್ಯಕ್ಕೆ 1.50 ಕೋಟಿ ರೂ.,  ಪಿಯುಸಿ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ವಿಸ್ತರಣೆಗೆ 1 ಕೋಟಿ ರೂ., ಶಾಲಾ ಕಾಲೇಜುಗಳಲ್ಲಿ ಆರ್. ಓ ಘಟಕ ಸ್ಥಾಪನೆಗೆ 1 ಕೋಟಿ ರೂ., ಶಾಲಾ ಕಾಲೇಜು ಕಟ್ಟಡಗಳಲ್ಲಿ ಮಳೆ ನೀರು ಕೋಯ್ಲು ಯೋಜನೆಗೆ 2 ಕೋಟಿ ರೂ. ವಿದ್ಯಾರ್ಥಿಗಳ ಚಿಕಿತ್ಸೆಗೆ 1 ಕೋಟಿ ರೂ.,  ನಗರದ ಹಲವೆಡೆ ಸ್ಯಾನಿಟರಿ ಇನ್ಸಿನೇಟರ್ ಯಂತ್ರ ಅಳವಡಿಕೆಗೆ 50 ಲಕ್ಷ ರೂ. ಹಾಗೂ ಬಿಬಿಎಂಪಿ ಶಾಲಾ ಕಾಲೇಜುಗಳ ದುರಸ್ತಿ ಹಾಗೂ ಮೂಲಭೂತ ಸೌಕರ್ಯಕ್ಕಾಗಿ 25 ಕೋಟಿ ರೂ. ಮೀಸಲಿರಿಸಲಾ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com