ಸೂರ್ಯಕಿರಣ್ ದುರಂತ: ಘಟನಾ ಸ್ಥಳದ ಪಕ್ಕದಲ್ಲೇ ವಾಸವಿದ್ದ ಕುಟುಂಬ ಅದೃಷ್ಟವಶಾತ್ ಪಾರು!

ಸೂರ್ಯ ಕಿರಣ್ ಸಮರ ವಿಮಾನಗಳ ಡಿಕ್ಕಿಯಾಗಿ ಓರ್ವ ಪೈಲಟ್ ಸಾವನ್ನಪ್ಪಿರುವ ಘಟನೆ ನಿನ್ನೆ (ಮಂಗಳವಾರ) ಬೆಂಗಳೂರಿನಲ್ಲಿ ನಡೆದಿದ್ದು ಈ ವೇಳೆ ಹಾರೋಹಳ್ಳಿಯಲ್ಲಿನ ಇಸ್ರೋ ಲೇಔಟ್ ನ 1ನೇ....
ಘಟನಾ ಸ್ಥಳದ  ಪಕ್ಕದಲ್ಲೇ ವಾಸವಿದ್ದ ಕುಟುಂಬ ಅದೃಷ್ಟವಶಾತ್ ಪಾರು!
ಘಟನಾ ಸ್ಥಳದ ಪಕ್ಕದಲ್ಲೇ ವಾಸವಿದ್ದ ಕುಟುಂಬ ಅದೃಷ್ಟವಶಾತ್ ಪಾರು!
Updated on
ಬೆಂಗಳೂರು: ಸೂರ್ಯ ಕಿರಣ್ ಸಮರ ವಿಮಾನಗಳ ಡಿಕ್ಕಿಯಾಗಿ ಓರ್ವ ಪೈಲಟ್ ಸಾವನ್ನಪ್ಪಿರುವ ಘಟನೆ ನಿನ್ನೆ (ಮಂಗಳವಾರ) ಬೆಂಗಳೂರಿನಲ್ಲಿ ನಡೆದಿದ್ದು ಈ ವೇಳೆ ಹಾರೋಹಳ್ಳಿಯಲ್ಲಿನ ಇಸ್ರೋ ಲೇಔಟ್ ನ 1ನೇ ಕ್ರಾಸ್ ನಲ್ಲಿರುವ ಒಂದು ಮನೆಗೆ ಹಾನಿಯಾಗಿದೆ. ವಿಮಾನಗಳ ಡಿಕ್ಕಿಯಾದಾಗ ಉಂಟಾದ ಹೊಗೆ ಹಾಗೂ ಬೆಂಕಿಯ ಕಾರಣ ಮನೆಯ ಹಿಂಭಾಗದ ಗೋಡೆ ಹಾನಿಗೊಳಗಾಗಿದೆ.
ಎರಡಂತಸ್ತಿನ ಮನೆ ಮಾಲೀಕರಾಗಿದ್ದ ವಿನಯ್ ಕುಮಾರ್ ಘಟನೆ ನಡೆದ ವೇಳೆ ಕೋರಮಂಗಲದಲ್ಲಿದ್ದ ತಮ್ಮ ಕಛೇರಿಯಲ್ಲಿ ಕೆಲಸದಲ್ಲಿದ್ದರು. ನಿಮ್ಮ ಮನೆ ಸಮೀಪ ವಿಮಾನ ಅಪಘಾತವಾಗಿದೆ ಎಂದು ಕರೆ ಸ್ವೀಕರಿಸಿದ ತಕ್ಷಣ ವಿನಯ್ ಮನೆಯತ್ತ ಧಾವಿಸಿದ್ದಾರೆ. ಪೋಲೀಸರು ಕೆಲ ನಿಮಿಷಗಳ ಕಾಲ ವಿನಯ್ ಗೆ ಅವರ ಮನೆಯೊಳಗೆ ತೆರಳಲು ಅವಕಾಶ ಕಲ್ಪಿಸಿದ್ದಾರೆ.  ಆ ವೇಳೆ ಮನೆ ಒಳಾಂಗಣದಲ್ಲಿ ಯಾವುದೇ ಹಾನಿಯಾಗಿರದೆ ಹೋದರೂ ಹೊರಭಾಗ ಕೆಲವು ಹಾನಿಯಾಗಿದೆ ಎಂದು ವಿನಯ್ ಕಂಡುಕೊಂಡರು.
ಸ್ಥಳೀಯರು ಹೇಳುವಂತೆ ವಿಮಾನವು ಮನೆಯ ಮೇಲ್ಛಾವಣಿಯ ಭಾಗಕ್ಕೆ ಹೊಡೆದಿದೆ. ಆವೇಳೆ ನೀರಿನ ಟ್ಯಾಂಕ್ ಗೆ ಸಂಪರ್ಕಿಸುವ ಪೈಪ್ ಹಾಗೂ ಕೆಲ ಕಾಂಕ್ರೀಟ್ ರಚನೆಗಳು ಹಾನಿಗೊಂಡಿದೆ."ನಾವಿನ್ನೂ ಹಾನಿಯ ಪ್ರಮಾಣವನ್ನು ನಿರ್ಣಯಿಸಬೇಕಾಗಿದೆ" ವಿನಯ್ ಹೇಳಿದ್ದಾರೆ. ಘಟನೆ ವೇಳೆ ಅವರ ಪತ್ನಿ ಕೆಲಸದ ಮೇಲೆ ಹೊರ ಹೋಗಿದ್ದರೆವ್ ಮಗ ಶಾಲೆಗೆ ತೆರಳಿದ್ದನೆನ್ನಲಾಗಿದೆ.
ಏರ್ ಶೋನಲ್ಲಿ ವಿಮಾನಗಳ ಸಾಹಸ ಪ್ರದರ್ಶನ ವೀಕ್ಷಣೆಗೆ ಆಗಮಿಸಿದ್ದ ಎಂ.ರೋಷನ್  ಹಾರೋಹಳ್ಳಿಯ ಇಸ್ರೋ ಲೇಔಟ್ ನಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದ. ಅವನು ತನ್ನ ಕ್ಯಾಮರಾದಲ್ಲಿ ದುರಂತ ಸಂಭವಿಸುವ ದೃಶ್ಯಗಳನ್ನು ಸೆರೆ ಹಿಡಿದ್ದಾರೆ. "ನಾನೇನು ಕ್ಂಡೆನೋ ಅದನ್ನು ನೆನೆದರೆ ಈಗಲೂ ನನಗೆ ಭಯವಾಗುತ್ತಿದೆ. ಎರಡು ವಿಮಾನಗಳು ಡಿಕ್ಕಿಯಾಗುವ ವೇಳೆ ನನ್ನ ಕ್ಯಾಮರಾ ಜೂಮ್ ನಲ್ಲಿದ್ದು ಇದರ ಚಿತ್ರೀಕರಣ ನಡೆಸಿದ್ದೆ. ನಾನು ತುಸು ಕಾಲ ಆರಾಮವಾಗಿರಲು ಇಲ್ಲಿಗೆ ಬಂದಿದ್ದೆ. ಆದರೆ ಈಗ ನನ್ನ ಪತ್ನಿ, ಪುಟ್ಟ ಕಂದಮ್ಮನೊಡನೆ ನಾನು ಮತ್ತೆ ನನ್ನ ಮನೆ ಕೆಆರ್ ಪುರಂಗೆ ಮರಳುತ್ತೇನೆ" ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com