ಏರೋ ಇಂಡಿಯಾ 2019: ಸುಮಾರು 20 ಕಾರುಗಳನ್ನು ಬೆಂಕಿಯಿಂದ ರಕ್ಷಿಸಿದ ಸ್ವಯಂ ಸೇವಕರು

ಯಲಹಂಕದ ವಾಯು ನೆಲೆಯಲ್ಲಿ ಏರೋ ಇಂಡಿಯಾ ಶೋ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸುಮಾರು 300 ಕ್ಕೂ ಹೆಚ್ಚು ಕಾರುಗಳು ಸಂಪೂರ್ಣವಾಗಿ ...
ಕಾರುಗಳನ್ನು ರಕ್ಷಿಸಿದ ಚಾಲಕ ದಿಲೀಪ್
ಕಾರುಗಳನ್ನು ರಕ್ಷಿಸಿದ ಚಾಲಕ ದಿಲೀಪ್
ಬೆಂಗಳೂರು: ಯಲಹಂಕದ ವಾಯು ನೆಲೆಯಲ್ಲಿ ಏರೋ ಇಂಡಿಯಾ ಶೋ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸುಮಾರು 300 ಕ್ಕೂ ಹೆಚ್ಚು ಕಾರುಗಳು ಸಂಪೂರ್ಣವಾಗಿ ದಹನವಾಗಿದ್ದವು. 
ಪಾರ್ಕಿಂಗ್ ಸ್ಥಳದಲ್ಲಿ ಕಾರಿನಲ್ಲಿ ಕುಳಿತಿದ್ದ, ದಿಲೀಪ್ ಎಂಬ ಕಾರು ಚಾಲಕನಿಗೆ ಸುಟ್ಟವಾಸನೆ ಮೂಗಿಗೆ ಬಡಿದಿದೆ, ಕೂಡಲೇ ಕಾರಿನಿಂದ ಕೆಳಗಿಳಿದ ತನಗೆ ಬೆಂಕಿ ಹರಡುತ್ತಿರುನವ ವಿಷಯ ತಿಳಿಯಿತು ಎಂದು ಹೇಳಿದ್ದಾರೆ.
ಗುಂಪಾಗಿ ನಿಂತಿದ್ದ ಜನರ ಗಮನ ಸೆಳೆಯಲು ಆತ ಜೋರಾಗಿ ಕೂಗಿ ಕೊಂಡಿದ್ದಾನೆ, ಆಗ ಸ್ವಲ್ಪ ಜನ ಬಂದು ಕಾರಿನ ಕಿಟಕಿ ಗಾಜು ಒಡೆದು ಸುಮಾರು 20 ಕಾರುಗಳನ್ನು ಬೆಂಕಿಯ ಕೆನ್ನಾಲಗೆಯಿಂದ ರಕ್ಷಿಸಿದ್ದಾರೆ. 
ಹ್ಯಾಂಡ್ ಬ್ರೇಕ್ ತೆಗೆದು ಕಾರುಗಳನ್ನು ಮುಂದಕ್ಕೆ ತಳ್ಳಿದರು ಹೀಗಾಗಿ ಸುಮಾರು  20 ಕಾರುಗಳನ್ನು ಸುರಕ್ಷಿತವಾಗಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com