ಸಚಿವ ಡಿಕೆಶಿಗೆ ಬಿಗ್ ರಿಲೀಫ್, ಮೂರು ಪ್ರಕರಣಗಳಲ್ಲಿ ಕ್ಲೀನ್ ಚಿಟ್!

ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಸಚಿವ ಡಿಕೆಶಿಗೆ ಬಿಗ್ ರಿಲೀಫ್, ಮೂರು ಪ್ರಕರಣಗಳಲ್ಲಿ ಕ್ಲೀನ್ ಚಿಟ್!
ಸಚಿವ ಡಿಕೆಶಿಗೆ ಬಿಗ್ ರಿಲೀಫ್, ಮೂರು ಪ್ರಕರಣಗಳಲ್ಲಿ ಕ್ಲೀನ್ ಚಿಟ್!
ಬೆಂಗಳೂರು: ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಶಿವಕುಮಾರ್ ವಿರುದ್ಧ ಐಟಿ ಇಲಾಖೆ ದಾಖಲಿಸಿದ್ದ ನಾಲ್ಕು ಪ್ರಕರಣಗಳಪೈಕಿ ಮೂರರಲ್ಲಿ ಕ್ಲೀನ್ ಚಿಟ್ ನೀಡಿ ನ್ಯಾಯಾಲಯ ಆದೇಶಿಸಿದೆ.
ಸಾಕ್ಷ್ಯನಾಶ, ಅಸಂಬದ್ಧ ಹೇಳಿಕೆ, ಚೀಟಿ ಹರಿದ ಪ್ರಕರಣದ ಸಂಬಂಧ ಪ್ರಕರಣಗಳಲ್ಲಿ ಡಿಕೆಶಿ ಆರೋಪ ಮುಕ್ತರಾಗಿದ್ದಾರೆ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಘೋಷಿಸಿದೆ.
2017ರ ಆಗಸ್ಟ್ 1ಕ್ಕೆ ಡಿಕೆಶಿ ಅವರ ಬೆಂಗಳೂರು, ದೆಹಲಿ ನಿವಾಸ ಸೇರಿ ಐವತ್ತು ಕಡೆ ಐಟಿ ದಾಳಿಯಾಗಿದ್ದು ಆ ವೇಳೆ 300 ಕೋಟಿಗೆ ಮೇಲೆ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಈ ಸಂಬಂಧ ನ್ಯಾಯಾಲಯದಲ್ಲಿ ಆದಾಯ ತೆರಿಗೆ ಇಲಾಖೆ ದೂರು ಸಲ್ಲಿಸಿದೆ.
ಐಟಿ ಇಲಾಖೆ ದೂರಿನ ವಿರುದ್ಧ ಸಚ್ವಿವ ಡಿಕೆಶಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.ನನ್ನ ಮೇಲೆ ಆರೋಪ ಮಾಡಿದ ಅಧಿಕಾರಿಗೆ ಆ ರೀತಿ ಪ್ರಕರಣ ದಾಖಲಿಸಲು ಯಾವ ಅಧಿಕಾರವಿಲ್ಲ, ಅಲ್ಲದೆ ಈ ಆರೋಪಗಳೆಲ್ಲಾ ನಿರಾಧಾರ ಎಂದು ಡಿಕೆಶಿ ವಾದಿಸಿದ್ದರು.
ಈ ಸಂಬಂಧ ಫೆಬ್ರವರಿ 6ರಂದು ಜನಪ್ರತಿನಿಧಿ ನ್ಯಾಯಾಲಯ ವಿಚಾರಣೆ ನಡೆಸಿ‌, ಆದೇಶವನ್ನು ಕಾಯ್ದಿರಿಸಿತ್ತು. ಇದೀಗ ಗುರುವಾರ ತನ್ನ ಆದೇಶ ನೀಡಿರುವ ನ್ಯಾಯಾಲಯ ಸಚಿವರನ್ನು ಮೂರು ಪ್ರಕರಣಗಳಿಂದ ಆರೋಪ ಮುಕ್ತವಾಗಿಸಿದೆ.
ಈ ನಡುವೆ ಡಿ.ಕೆ. ಶಿವಕುಮಾರ್ ವಿರುದ್ಧದ ಹವಾಲಾ ಪ್ರಕರಣ ಹಾಗೆಯೇ ಉಳಿದಿದ್ದು  ಈ ಸಂಬಂಧ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com