ಕನ್ನಡ ಸಾಹಿತ್ಯ ಸಮ್ಮೇಳನ: ಪೂರ್ಣಕುಂಭ ಸ್ವಾಗತಕ್ಕೆ ಹೋರಾಟಗಾರರಿಂದ ವಿರೋಧ
84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಪೇಡಾ ನಗರಿ ಧಾರವಾಡ ಸಜ್ಜಾಗಿದೆ. ಆದರೆ. ಈ ಬಾರಿ ಸಮ್ಮೇಳನಾಧ್ಯಕ್ಷರನ್ನು ಬರಮಾಡಿಕೊಳ್ಳಲು ಕನ್ನಡ ಸಾಹಿತ್ಯ ಪರಿಷತ್ ನಿಂದ ಪೂರ್ಣ ಕುಂಭ ಸ್ವಾಗತ ಆಯೋಜನೆಗೆ ಕೆಲ ಪ್ರಗತಿಪರರಿಂದ ವಿರೋಧ ವ್ಯಕ್ತವಾಗಿದೆ.
ಬೆಂಗಳೂರು: ಇದೇ 4ರಿಂದ ಆರಂಭವಾಗಲಿರುವ 84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಪೇಡಾ ನಗರಿ ಧಾರವಾಡ ಸಜ್ಜಾಗಿದೆ. ಆದರೆ. ಈ ಬಾರಿ ಸಮ್ಮೇಳನಾಧ್ಯಕ್ಷರನ್ನು ಬರಮಾಡಿಕೊಳ್ಳಲು ಕನ್ನಡ ಸಾಹಿತ್ಯ ಪರಿಷತ್ ನಿಂದ ಪೂರ್ಣ ಕುಂಭ ಸ್ವಾಗತ ಆಯೋಜನೆಗೆ ಕೆಲ ಪ್ರಗತಿಪರರಿಂದ ವಿರೋಧ ವ್ಯಕ್ತವಾಗಿದೆ.
ಸಂಸ್ಕೃತಿ ಹೆಸರಿನಲ್ಲಿ 1001 ಮಹಿಳೆಯರನ್ನು ಬಳಸಿಕೊಳ್ಳುವ ಪದ್ಥತಿಯನ್ನು ನಿಲ್ಲಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳಾ ಹೋರಾಟಗಾರರು ಅಭಿಯಾನ ಶುರುಮಾಡಿದ್ದಾರೆ.