ಮತ್ತೆ ಪ್ರತ್ಯೇಕ ರಾಜ್ಯದ ಕೂಗು: ಮಧೋಳದಲ್ಲಿ ಉತ್ತರ ಕರ್ನಾಟಕ ಧ್ವಜಾರೋಹಣ

ಬಹು ದಿನಗಳಿಂದ ತಣ್ಣಗಾಗಿದ್ದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಕೇಳಿಬಂದಿದೆ. ಬಾಗಲಕೋಟೆ ಜಿಲ್ಲೆ ಮುಧೋಳ ನಗರದಲ್ಲಿರುವ ಉತ್ತರ ಕರ್ನಾಟಕ ಹೋರಾಟ ಸಮಿತಿ....
ಮಧೋಳದಲ್ಲಿ ಉತ್ತರ ಕರ್ನಾಟಕ ಧ್ವಜಾರೋಹಣ
ಮಧೋಳದಲ್ಲಿ ಉತ್ತರ ಕರ್ನಾಟಕ ಧ್ವಜಾರೋಹಣ
ಮಧೋಳ: ಬಹು ದಿನಗಳಿಂದ ತಣ್ಣಗಾಗಿದ್ದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಕೇಳಿಬಂದಿದೆ. ಬಾಗಲಕೋಟೆ ಜಿಲ್ಲೆ ಮುಧೋಳ ನಗರದಲ್ಲಿರುವ ಉತ್ತರ ಕರ್ನಾಟಕ ಹೋರಾಟ ಸಮಿತಿ ಉಪಕಚೇರಿ ಆವರಣದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ಧ್ವಜಾರೋಹಣ ನಡೆಸಿದೆ.
ಮಧೋಳದಲ್ಲಿನ ಹೋರಾಟಗಾರರು ಪ್ರತ್ಯೇಕ ರಾಜ್ಯಕ್ಕಾಗಿ ಕನ್ನಡ ಧ್ವಜ ಬಿಟ್ಟು ಬೇರೆ ಧ್ವಜ ನಿರ್ಮಿಸಿ ಧ್ವಜಾರೋಹಣ ಮಾಡಿದ್ದಾರೆ. ಮಂಗಳವಾರ ಬೆಳಿಗ್ಗೆ ಈ ಕಾರ್ಯಕ್ರಮ ನಡೆದಿದೆ.
ಕಳೆದ ಸಪ್ಟೆಂಬರ್ 23ರಂದು ಬಾಗಲಕೋಟೆಯಲ್ಲಿ ಸಭೆ ಸೇರಿದ್ದ ಹೋರಾಟ ಸಮಿತಿ ಸದಸ್ಯರು  ಜನವರಿ 1ರಂದುಪ್ರತ್ಯೇಕ ಧ್ವಜಾರೋಹಣ ಮಾಡಬೇಕೆಂದು ನಿರ್ಣಯ ತೆಗೆದುಕೊಂಡಿದ್ದು ಆ ನಿರ್ಣಯವನ್ನು ಇಂದು ಜಾರಿಗೊಳಿಸಲಾಗಿದೆ./ಉತ್ತರ ಕರ್ನಾಟಕ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ್ ಗೋಲಶೆಟ್ಟಿ ಸೇರಿ ಅನೇಕರು ಈ ಸಮಯದಲ್ಲಿ ಹಾಜರಿದ್ದರು.
ಕೇಸರಿ, ಹಳದಿ, ಹಸಿರು ಬಣ್ಣಗಳ ನಡುವೆ ರಾಜ್ಯದ 13 ಜಿಲೆಗಳಿರುವ ಚಿತ್ರವನ್ನು ನೀಲಿ ಬಣ್ಣದಲ್ಲಿ ರಚಿಸಲಾಗಿದೆ
ಇದೇ ವೇಳೆ ಕನ್ನಡ ಪರ ಸಂಘಟೆನೆಗಳು ಉತ್ತರ ಕರ್ನಾಟಕ ಪ್ರತ್ಯೇಕ ಧ್ವಜಾರೋಹಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.ಈ ಸಂಬಂಧ ಪ್ರತಿಭಟನೆ ನಡೆಸುವುದಾಗಿಯೂ ಅವುಗಳು ಎಚ್ಚರಿಕೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com