ಇನ್ನು ಮುಂದೆ ಪದವಿ ಕಾಲೇಜು ಉಪನ್ಯಾಸಕರಿಗೆ ಸ್ವ ಮೌಲ್ಯಮಾಪನ ಕಡ್ಡಾಯ

ಈ ವರ್ಷದಿಂದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬೋಧಕರಾಗಿರುವ ಉಪನ್ಯಾಸಕರು ಕಡ್ಡಾಯವಾಗಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಈ ವರ್ಷದಿಂದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರು ಕಡ್ಡಾಯವಾಗಿ ಸ್ವ ಮೌಲ್ಯಮಾಪನ ಮಾಡಿಕೊಳ್ಳಬೇಕಾಗುತ್ತದೆ. ಉಪನ್ಯಾಸಕರ ಬೋಧನೆಯಲ್ಲಿ ಸುಧಾರಣೆಯನ್ನು ತರಲು ಕಾಲೇಜು ಶಿಕ್ಷಣ ಇಲಾಖೆ ಉಪನ್ಯಾಸಕರಿಗೆ ಸ್ವ ಮೌಲ್ಯಮಾಪನ ಕ್ರಮ ಜಾರಿಗೆ ತಂದಿದೆ.

ಮುಂದಿನ ಏಪ್ರಿಲ್ ತಿಂಗಳಿನಿಂದ ಪ್ರತಿಯೊಬ್ಬ ಉಪನ್ಯಾಸಕರು ಕೂಡ ತಮ್ಮ ಕೆಲಸ, ಬೋಧನೆಗಳ ಮೌಲ್ಯಮಾಪನ ಮಾಡಿ ಸಂಬಂಧಪಟ್ಟ ಪ್ರಾಂಶುಪಾಲರಿಗೆ ವಿವರ ಸಲ್ಲಿಸಬೇಕು. ಈ ಕುರಿತು ಎಲ್ಲಾ 412 ಸರ್ಕಾರಿ ಪದವಿ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ. ಸ್ವಯಂ ಮೌಲ್ಯಮಾಪನ ಅರ್ಜಿಗಳನ್ನು ತಜ್ಞರು ಮೌಲ್ಯಮಾಪನ ಮಾಡಿ ಇಲಾಖೆಯ ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ.

ಸ್ವ ಮೌಲ್ಯಮಾಪನ ಮಾಡಲು ಉಪನ್ಯಾಸಕರಿಗೆ ಸುಮಾರು 35 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅದನ್ನು ಶಿಕ್ಷಕರು ಇಲಾಖೆಯ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬೇಕು. ಸಿಲೆಬಸ್ ಗಳ ಬಳಕೆ, ಬೋಧನೆ ಯೋಜನೆ, ಬೋಧನೆ ನೆರವು, ಬೋಧನೆ ಸಲಕರಣೆಗಳ ಪೂರೈಕೆ, ಬೋಧನೆ ವಿಧಾನ, ವಿಶೇಷ ಬೋಧನೆ, ವಿದ್ಯಾರ್ಥಿಗಳ ಸಾಧನೆ, ರಜೆ, ಪುಸ್ತಕ ಪ್ರಕಟಣೆ ಇತ್ಯಾದಿಗಳನ್ನು ಒಳಗೊಂಡಿದೆ.

ಸಾಮಾನ್ಯವಾಗಿ ವಿದ್ಯಾರ್ಥಿಗಳು ಶಿಕ್ಷಕರ ಮೌಲ್ಯಮಾಪನ ಮಾಡುತ್ತಾರೆ. ಆದರೆ ಅದರಿಂದ ಹೆಚ್ಚಿನ ಸಕಾರಾತ್ಮಕ ಫಲಿತಾಂಶ ಸಿಗದಿದ್ದಾಗ ಶಿಕ್ಷಕರೇ ತಮ್ಮನ್ನು ಮೌಲ್ಯಮಾಪನ ಮಾಡುವ ಯೋಜನೆ ತರಲಾಯಿತು. ಬೋಧಕರ ಬೋಧನೆ ಮಾತ್ರವಲ್ಲದೆ ಅವರ ಶಿಸ್ತು ಮತ್ತು ವರ್ತನೆಗಳನ್ನು ಕೂಡ ಪರಿಗಣಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com