ಬೆಂಗಳೂರು: ವಕೀಲೆ ಆತ್ಮಹತ್ಯೆ, ಏಳು ಮಂದಿ ವಿರುದ್ಧ ಕೇಸು ದಾಖಲು

ಸ್ಥಳೀಯ ಕಾರ್ಪೊರೇಟರ್ ಮತ್ತು ನೆರೆಮನೆಯವರ ಕಿರುಕುಳ ತಾಳಲಾರದೆ ಯುವ ವಕೀಲೆಯೊಬ್ಬರು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸ್ಥಳೀಯ ಕಾರ್ಪೊರೇಟರ್ ಮತ್ತು ನೆರೆಮನೆಯವರ ಕಿರುಕುಳ ತಾಳಲಾರದೆ ಯುವ ವಕೀಲೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಕಳೆದ ಸೋಮವಾರ ಸಂಜೆ ಈ ಘಟನೆ ನಡೆದಿದ್ದು ನಿನ್ನೆ ಬೆಳಕಿಗೆ ಬಂದಿದೆ.

ಮೃತ ವಕೀಲೆಯನ್ನು ಧರಣಿ ಎಂದು ಗುರುತಿಸಲಾಗಿದೆ. ಈಕೆ ಮಹದೇವಪುರ ಬಳಿ ನಾರಾಯಣಪರದಲ್ಲಿ ತಾಯಿ ಜೊತೆ ನೆಲೆಸಿದ್ದರು. ಆಕೆಯ ಮನೆ ಮುಂದಿನ ಜಾಗವೊಂದಕ್ಕೆ ಸಂಬಂಧಿಸಿದಂತೆ ಕಾರ್ಪೊರೇಟರ್ ಸುರೇಶ್ ಮತ್ತು ನೆರೆಮನೆಯವರು ಕಿರುಕುಳ ನೀಡುತ್ತಿದ್ದು ಅದನ್ನು ತಾಳಲಾರದೆ ಈ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ವರ್ಷ ಸೆಪ್ಟೆಂಬರ್ 9ರಂದು ಕಿರುಕುಳಕ್ಕೆ ಸಂಬಂಧಪಟ್ಟಂತೆ ಧರಣಿ ತಾಯಿ ಪೊಲೀಸರಿಗೆ ದೂರು ಸಹ ನೀಡಿದ್ದರು, ಆದರೂ ಕೂಡ ಕಿರುಕುಳ ಮುಂದುವರಿದಿತ್ತು.
ಪ್ರಕರಣ ಸಂಬಂಧ ಕಾರ್ಪೊರೇಟರ್ ಸೇರಿದಂತೆ ಏಳು ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com