ಸಾಕ್ಷಿಗಳ ಮರುವಿಚಾರಣೆಗೆ ವಿರೋಧ: ರುದ್ರೇಶ್ ಹತ್ಯೆ ಆರೋಪಿಗಳ ಅರ್ಜಿವಜಾ
ರಾಜ್ಯ
ಸಾಕ್ಷಿಗಳ ಮರುವಿಚಾರಣೆಗೆ ವಿರೋಧ: ರುದ್ರೇಶ್ ಹತ್ಯೆ ಆರೋಪಿಗಳ ಅರ್ಜಿ ವಜಾ
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಸಾಕ್ಷಿಗಳ ಮರು ವಿಚಾರಣೆ ನಡೆಸುವುದನ್ನು ವಿರೋಧಿಸಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನಿ ಕರ್ನಾಟಕ ....
ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಸಾಕ್ಷಿಗಳ ಮರು ವಿಚಾರಣೆ ನಡೆಸುವುದನ್ನು ವಿರೋಧಿಸಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನಿ ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ.
ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ ಅವರಿದ್ದ ಏಕಸದಸ್ಯ ಪೀಠ ಕಾಯ್ದಿರಿಸಿದ್ದ ತೀರ್ಪನ್ನು ಇಂದು (ಮಂಗಳವಾರ) ಉಚ್ಚರಿಸಿದ್ದು "ಆರೊಪಿಗಳು ಅಂದುಕೊಳ್ಳುವಷ್ಟು ಗಂಭೀರವಾದದ್ದೇನೂ ಇಲ್ಲ, ತಾಂತ್ರಿಕ ಅಂಶಗಳು ಹಾಗೂ ಕಾನೂನು ಅಂಶಗಳ ಆಧಾರದ ಮೇಲೆ ಸಾಕ್ಷಿಗಳ ಮರುವಿಚಾರಣೆ ನಡೆಸುವುದು ತಪ್ಪಲ್ಲ" ಎಂದು ನ್ಯಾಯಪೀಠ ಹೇಳಿದೆ.
2016, ಅಕ್ಟೋಬರ್ 16ರಂದು ಬೆಂಗಳೂರು ಶಿವಾಜಿನಗರದ ಕಾಮರಾಜ ರಸ್ತೆಯಲ್ಲಿ ನಡೆದಿದ್ದ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಅಸೀಮ್ ಶರೀಫ್, ಇರ್ಫಾನ್ ಪಾಷಾ ಸೇರಿ ಐವರು ಆರೊಪಿಗಳಾಗಿದ್ದು ರಾಷ್ಟ್ರೀಯ ತನಿಖಾ ಸಂಸ್ಥೆಯು ಪ್ರಕರಣದ ತನಿಖೆ ಕೈಗೊಂಡಿದೆ.
ರುದ್ರೇಶ್ ಸ್ನೇಹಿತರಾದ ಬಿ. ಜಯರಾಮ್, ಡಿ, ಕುಮಾರೇಷನ್ ಹಾಗೂ ಹರಿಕೃಷ್ಣ ಪ್ರಮುಖ ಸಾಕ್ಷಿಅಗ್ಳಾಗಿದ್ದಾರೆ. ಎನ್ ಐಎ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು ಈ ವೇಳೆ ಒಮ್ಮೆ ವಿಚಾರಣೆ ನಡೆಸಿದ್ದ ಆರೊಪಿಗಳನ್ನು ಇನ್ನೊಮ್ಮೆ ವಿಚಾರಣೆ ನಡೆಸುವುದು ಕಾನೂನು ಬಾಹಿರ ಎಂದು ಆರೊಪಿಗಳು ವಿರೋಧಿಸಿದ್ದರು. ಇದನ್ನು ಎನ್ ಐಎ ನ್ಯಾಯಾಲಯದ ನ್ಯಾಯಾಧೀಶಸಿದ್ದಲಿಂಗ ಪ್ರಭು ಖಂಡಿಸಿ ಆರೋಪಿಗಳ ಅರ್ಜಿಯನ್ನು ವಜಾ ಮಾಡಿದ್ದರು. ಇದನ್ನು ಪ್ರಶ್ನಿಸಿದ್ದ ರಾಒಪಿಗಳು ವಿಶೇಷ ನ್ಯಾಯಾಲಯ ದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು.ಈಗ ಹೈಕೋರ್ಟ್ ಸಹ ಆರೊಪಿಗಳ ಮನವಿಯನ್ನು ಅಮಾನ್ಯಗೊಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ