ಮಲೆಮಹದೇಶ್ವರ ಬೆಟ್ಟ ಇನ್ಮುಂದೆ ರಾಜ್ಯದ ಆರನೇ ಹುಲಿ ಸಂರಕ್ಷಣಾ ವಲಯ

ರಾಜ್ಯದಲ್ಲಿ ಹೊಸ ಅಭಯಾರಣ್ಯ, ರಕ್ಷಿತಾರಣ್ಯಗಳನ್ನು ವಿಸ್ತರಿಸಲು ರಾಜ್ಯ ಸರ್ಕಾರ ಮುಂದಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಹೊಸ ಅಭಯಾರಣ್ಯ, ರಕ್ಷಿತಾರಣ್ಯಗಳನ್ನು ವಿಸ್ತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಮಲೆಮಹದೇಶ್ವರ ಬೆಟ್ಟದ ವನ್ಯಮೃಗ ಅಭಯಾರಣ್ಯಕ್ಕೆ ಕೊನೆಗೂ ಹುಲಿ ಮೀಸಲು ಅರಣ್ಯ ಎಂದು ಘೋಷಿಸಲಗಿದ್ದು, ರಾಜ್ಯದಲ್ಲಿ ಇದು ಆರನೇ ಹುಲಿ ಅಭಯಾರಣ್ಯವಾಗಿದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ನಿನ್ನೆ ಸಭೆ ಸೇರಿದ ಕರ್ನಾಟಕ ವನ್ಯಮೃಗ ಮಂಡಳಿ ಸದಸ್ಯರು ಈ ನಿರ್ಧಾರಕ್ಕೆ ಬಂದಿದ್ದಾರೆ. ಸಭೆಯಲ್ಲಿ ಹುಬ್ಬಳ್ಳಿ-ಅಂಕೋಲ ರೈಲ್ವೆ ಯೋಜನೆ ಕುರಿತು ನಿರ್ಧಾರವನ್ನು ಮುಂದೂಡಲಾಯಿತು.

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಮಂಡಳಿಯ ಸದಸ್ಯರಿಂದ ಸಂಪೂರ್ಣ ವಿರೋಧವಿದೆ. ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಇಂತಹ ಮೂಲಭೂತ ಯೋಜನೆಯನ್ನು ಸರಿಯಾಗಿ ಅಧ್ಯಯನ ಮಾಡಬೇಕು. ಎರಡು ದಶಕಗಳ ರೈಲ್ವೆ ಯೋಜನೆಗೆ ಹಲವು ಹಂತಗಳಲ್ಲಿ  ವಿರೋಧ ಕೇಳಿಬರುತ್ತಲೇ ಇದೆ, ಪ್ರಾಕೃತಿಕ ಸಂಪತ್ತು ಮತ್ತು ವನ್ಯಜೀವಿಗಳಿಗೆ ಧಕ್ಕೆಯುಂಟಾಗುತ್ತದೆ ಎಂಬುದು ಪರಿಸರ ಪ್ರಿಯರ ಮತ್ತು ಮಂಡಳಿ ಸದಸ್ಯರ ವಾದವಾಗಿದೆ.

ಮಾನವ ಪ್ರಾಣಿ ಸಂಘರ್ಷದಿಂದ ಉಂಟಾಗುವ ಅನಾಹುತಕ್ಕೆ ಪರಿಹಾರ ಮೊತ್ತವನ್ನು 5 ಲಕ್ಷದಿಂದ 10 ಲಕ್ಷ ರೂಪಾಯಿಗಳಿಗೆ ಸದ್ಯದಲ್ಲಿಯೇ ಏರಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ರಾಜ್ಯದಲ್ಲಿ ಈಗಾಗಲೇ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ತುಮಕೂರಿನ ಮಾಲೂರು-ಕಾಮಸಮುದ್ರ ವನ್ಯಜೀವಿ ಅಭಯಾರಣ್ಯ ಚಿಂಕರಾಗಳಿಗೆ, ಕೋಲಾರದ ಮುಳಬಾಗಿಲು ಬಾವಲಿಗಳಿಗೆ, ಚಿರತೆ, ಕರಡಿ ಮತ್ತು ಆನೆ ಕಾರಿಡಾರಿಗೆ ಮಂಡಳಿಯಿಂದ ಒಪ್ಪಿಗೆ ಪಡೆಯಲಾಯಿತು.ಕಾವೇರಿ ವನ್ಯಜೀವಿ ಅಭಯಾರಣ್ಯದ ಪಕ್ಕದಲ್ಲಿ ಮುನೀಶ್ವರ ಅರಣ್ಯ ಪ್ರದೇಶವನ್ನು ಕೂಡ ಸೇರಿಸಲಾಗಿದೆ. 32 ಸಾವಿರ ಎಕರೆಯ ಪರ್ವತ ಪ್ರದೇಶವಾದ ಕಪ್ಪಟಗುಡ್ಡ ಮೀಸಲು ಅರಣ್ಯವನ್ನು ಕೂಡ ವನ್ಯಜೀವಿ ಅಭಯಾರಣ್ಯಗಳಿಗೆ ಸೇರಿಸಲಾಗಿದೆ.
ಶರಾವತಿ ಕಣಿವೆ ವನ್ಯಜೀವಿ ಅಭಯಾರಣ್ಯ ಮತ್ತು ಗುಡೆಕೋಟೆ ಅಭಯಾರಣ್ಯವನ್ನು ವಿಸ್ತರಿಸಲು ಅನುಮೋದನೆ ನೀಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com