ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ಶ್ರೀಗಳು ಐಸಿಯು ನಲ್ಲಿದ್ದಾರೆ ಸ್ವಾಮೀಜಿಗಳ ಹೆಚ್ಚಿನ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವೈದ್ಯರ ತಂಡವೊಂದನ್ನು ರಚಿಸಿದ್ದಾರೆ. ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರ ತಂಡ ಶುಕ್ರವಾರ ಸಿದ್ದಗಂಗಾ ಆಸ್ಪತ್ರೆಗೆ ಭೇಟಿ ನೀಡಲಿದ್ದು, ಶ್ರೀಗಳ ತಪಾಸಣೆ ನಡೆಸಲಿದ್ದಾರೆ.