ರಕ್ತದಲ್ಲಿ ಪತ್ರ ಬರೆದ ವಿಜಯಪುರ ಯುವಕ: 2 ತಿಂಗಳಾದರೂ ಸಿಎಂರಿಂದ ಬಂದಿಲ್ಲ ಪ್ರತಿಕ್ರಿಯೆ

ತನ್ನೂರಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಬೇಕೆಂದು 26 ವರ್ಷದ ಯುವಕ ತನ್ನ ರಕ್ತದಲ್ಲಿ 10 ಪುಟಗಳ ...
ರಕ್ತದಲ್ಲಿ ಪತ್ರ ಬರೆದ ಯುವಕ ವಿಜಯ್ ರಂಜನ್
ರಕ್ತದಲ್ಲಿ ಪತ್ರ ಬರೆದ ಯುವಕ ವಿಜಯ್ ರಂಜನ್

ವಿಜಯಪುರ: ತನ್ನೂರಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಬೇಕೆಂದು 26 ವರ್ಷದ ಯುವಕ ತನ್ನ ರಕ್ತದಲ್ಲಿ 10 ಪುಟಗಳ ಪತ್ರ ಬರೆದು ಮುಖ್ಯಮಂತ್ರಿಗಳಿಗೆ ಕಳುಹಿಸಿದ ಪತ್ರಕ್ಕೆ ಇದುವರೆಗೆ ಪ್ರತಿಕ್ರಿಯೆ ಬಂದಿಲ್ಲ.

ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲ್ಲೂಕಿನ ನಲ್ಟ್ ವಾಡ್ ಗ್ರಾಮದ ವಿಜಯ್ ರಂಜನ್ ಜೋಶಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು ಮುಖ್ಯಮಂತ್ರಿ, ಶಿಕ್ಷಣ ಸಚಿವರು, ಮುದ್ದೆಬಿಹಾಳ ಶಾಸಕರು ಮತ್ತು ಜಿಲ್ಲಾಧಿಕಾರಿಗಳಿಗೆ ಕಳೆದ ನವೆಂಬರ್ 10ರಂದು ತನ್ನ ರಕ್ತದಲ್ಲಿ ಪತ್ರ ಬರೆದು ಕಳುಹಿಸಿದ್ದರು. ಆದರೆ ಎರಡು ತಿಂಗಳುಗಳು ಕಳೆದರೂ ಸಹ ಮುಖ್ಯಮಂತ್ರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ತನ್ನ ಗೆಳೆಯನ ಸಹಾಯ ಪಡೆದು ಸಿರಿಂಜ್ ತರಿಸಿ ರಕ್ತವನ್ನು ತೆಗೆದು ಅದರಿಂದ 10 ಪುಟಗಳ ಪತ್ರವನ್ನು ವಿಜಯ್ ರಂಜನ್ ಬರೆದಿದ್ದರು. ನಲ್ಟ್ ವಾಡದಲ್ಲಿ ತಕ್ಷಣವೇ ಸರ್ಕಾರಿ ಹೈಸ್ಕೂಲ್, ಡಿಗ್ರಿ ಕಾಲೇಜುಗಳನ್ನು ತೆರೆಯಬೇಕು. ಇಲ್ಲಿ 25 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದ್ದು ಇದರಿಂದ ಜನತೆಗೆ ಅನುಕೂಲವಾಗಲಿದೆ ಎಂದು ಜೋಶಿ ಪತ್ರದಲ್ಲಿ ವಿವರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com