ಕೆಜಿಎಫ್ ನಲ್ಲಿ ಅಪರೂಪದ ಪೈರೊಕ್ಲಾಸ್ಟಿಕ್ ಬಂಡೆ ಪತ್ತೆ!

ರಾಜಧಾನಿ ಬೆಂಗಳೂರಿನಿಂದ 100 ಕಿ. ಮೀ ಹಾಗೂ ಕೆಜಿಎಫ್ ನಿಂದ 4 ಕಿ. ಮೀ ದೂರದಲ್ಲಿರುವ ಪೆಡ್ಡಪಲ್ಲಿ ಗ್ರಾಮದಲ್ಲಿ ಅಪರೂಪದ ಪೈರೊಕ್ಲಾಸ್ಟಿಕ್ ಬಂಡೆ ಪತ್ತೆಯಾಗಿದೆ.
ಬಂಡೆಗಲ್ಲು
ಬಂಡೆಗಲ್ಲು

ಕೋಲಾರ: ರಾಜಧಾನಿ ಬೆಂಗಳೂರಿನಿಂದ 100 ಕಿ. ಮೀ ಹಾಗೂ ಕೆಜಿಎಫ್ ನಿಂದ 4 ಕಿ. ಮೀ ದೂರದಲ್ಲಿರುವ  ಪೆಡ್ಡಪಲ್ಲಿ ಗ್ರಾಮದಲ್ಲಿ ಅಪರೂಪದ ಪೈರೊಕ್ಲಾಸ್ಟಿಕ್  ಬಂಡೆ ಪತ್ತೆಯಾಗಿದೆ.  ಭಾರತೀಯ ಪುರಾತತ್ವ ಇಲಾಖೆ ಜಿಲ್ಲಾಡಳಿತದೊಂದಿಗೆ ಬಂಡೆ ಪತ್ತೆಯಾದ  ಸ್ಥಳದಲ್ಲಿ ಸಮೀಕ್ಷೆ ನಡೆಸುತ್ತಿದೆ.

ಈ ಬಂಡೆ ಪತ್ತೆಯಾದ ಸ್ಥಳದಲ್ಲಿ ಸಮೀಕ್ಷೆ ಕಾರ್ಯ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜೆ ಮಂಜುನಾಥ್ ಉಪ ನಿರ್ದೇಶಕ  ಗೋಪಾಲಯ್ಯ ಅವರಿಗೆ ಸೂಚನೆ ನೀಡಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಮಂಜುನಾಥ್,  ಸಮೀಕ್ಷೆ ವರದಿಯನ್ನು ಭಾರತೀಯ ಸರ್ವೇಕ್ಷಣಾ ಇಲಾಖೆಗೆ  ಕಳುಹಿಸಲಾಗುವುದು ಎಂದು ಹೇಳಿದ್ದಾರೆ.

ಇದು ಚೋಳರ ಕಾಲದ ರಾಜರ ಕಾಲದ್ದು ಎಂದು ತಮ್ಮ ತಾತ ಹೇಳುತ್ತಿದ್ದರು ಎಂದು ಹಿರಿಯ ನಾಗರಿಕರಾದ ಮುನಿಯಪ್ಪ ಹೇಳಿದ್ದಾರೆ. ಭೂ ಮೇಲ್ಮೆಗೆ ಬರುವ ಲಾವಾ ತಣ್ಣಾಗಾದ ನಂತರ  ಪೈರೊಕ್ಲಾಸ್ಟಿಕ್  ಬಂಡೆಯಾಗಿ ರೂಪುಗೊಂಡಿದೆ ಎಂದು  ವಿಜ್ಞಾನಿ ವೆಂಕಟೇಶ್ವರಲು  ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com