ದುಷ್ಟಶಕ್ತಿಗಳ ಊರುಭಂಗವಾಗಲಿದೆ: ಸಂಕ್ರಾಂತಿ ಶುಭಾಶಯಗಳೊಡನೆ ವಿರೋಧಿಗಳಿಗೆ ಟಾಂಗ್ ಕೊಟ್ಟ ದೇವೇಗೌಡ

ರೈತ ಪರ ಸರ್ಕಾರವನ್ನು ಕದಡಿಸಲು ಯತ್ನಿಸುತ್ತಿರುವ ದುಷ್ಟ ಶಕ್ತಿಗಳ ಊರುಭಂಗವಾಗಲಿದ್ದು ಈ ಪರ್ವ ಅನ್ನದಾತ ರೈತರು ಹಾಗೂ ಸಮಸ್ತ ಜನತೆಯ ಮನ-ಮನೆಗಳಲ್ಲಿ ಸುಖ,....
ಎಚ್​.ಡಿ.ದೇವೇಗೌಡ
ಎಚ್​.ಡಿ.ದೇವೇಗೌಡ
Updated on
ಬೆಂಗಳೂರು:  ರೈತ ಪರ ಸರ್ಕಾರವನ್ನು ಕದಡಿಸಲು ಯತ್ನಿಸುತ್ತಿರುವ ದುಷ್ಟ ಶಕ್ತಿಗಳ ಊರುಭಂಗವಾಗಲಿದ್ದು ಈ ಪರ್ವ ಅನ್ನದಾತ ರೈತರು ಹಾಗೂ ಸಮಸ್ತ ಜನತೆಯ ಮನ-ಮನೆಗಳಲ್ಲಿ  ಸುಖ, ಶಾಂತಿ, ಸಮೃದ್ಧಿ ತರಲಿ ಎಂದು‌ ಹಾರೈಸುತ್ತೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ನಾಡಿನ ಜನತೆಗೆ ಸಂಕ್ರಾಂತಿಯ ಶುಭಾಶಯ ಕೋರಿದ್ದಾರೆ.
ದೇವೇಗೌಡರು ತಮ್ಮ ಟ್ವೀಟ್ ಮೂಲಕ ಸಮಸ್ತ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರುತ್ತಲೇ ರಾಜ್ಯ ಸರ್ಕಾರವನ್ನು ಬೀಳಿಸಲೆತ್ನಿಸುವ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ. 
"ಸಮಸ್ತರಿಗೂ ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಈ ಸಂದರ್ಭದಲ್ಲಿ ರೈತ ಪರ ಸರ್ಕಾರವನ್ನು ಕದಡಿಸಲು ಯತ್ನಿಸುತ್ತಿರುವ ದುಷ್ಟ ಶಕ್ತಿಗಳ ಊರುಭಂಗವಾಗಲಿದ್ದು ಈ ಪರ್ವ ಅನ್ನದಾತ ರೈತರು ಹಾಗೂ ಸಮಸ್ತ ಜನತೆಯ ಮನ-ಮನೆಗಳಲ್ಲಿ  ಸುಖ, ಶಾಂತಿ, ಸಮೃದ್ಧಿ ತರಲಿ ಎಂದು‌ ಹಾರೈಸುತ್ತೇನೆ." ದೇವೇಗೌಡ ಟ್ವೀಟ್ ಮಾಡಿದ್ದಾರೆ.
ಜೆಡಿಎಸ್ ಶಾಸಕರನ್ನು ಕಮಲ ಪಕ್ಷದ ನಾಯಕರು ತಮ್ಮತ್ತ ಸೆಳೆಯಲು ಯತ್ನಿಸುತ್ತಿದ್ದಾರೆ ಎಂಬ ಸುದ್ದಿ ಎರಡು ದಿನಗಳಿಂದ ಹರಿದಾಡುತ್ತಿರುವ ಹಿನ್ನೆಲೆಯಲಿ ದೇವೇಗೌಡರ ಈ ಟ್ವೀಟ್ ಅವರಲ್ಲಿನ ಆತಂಕಕ್ಕೆ ಸಾಕ್ಷಿಯಂತಿದೆ.
ಇನ್ನು ಆಪರೇಷನ್ ಕಮಲ್ದ ಭಯದಿಂದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಪಕ್ಷದ ಎಲ್ಲಾ ಶಾಸಕರೆಅನ್ನು ಇಂದು ಸಂಜೆಯೊಳಗೆ ಬೆಂಗಳೂರಿಗೆ ಬರಹೇಳಿದ್ದು ಶಾಸಕರನ್ನು ರೆಸಾರ್ಟ್​​ಗೆ ಶಿಫ್ಟ್ ಮಾಡುವ ಯೋಜನೆ ಇದೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com