ಪೋಷಕರ ಮೇಲಿನ ಬೇಸರಕ್ಕೆ 25 ವರ್ಷ ಹುಟ್ಟೂರಿಗೆ ಕಾಲಿಡಲಿಲ್ಲ!

: ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ತಮ್ಮ ಜೀವನದಿಂದಲೇ ಎಲ್ಲರಿಗೆ ಆದರ್ಶವಾಗಿದ್ದವರು. ಆದರೆ ಅಂತಹಾ ಸ್ವಾಮೀಜಿಗಳೂ ಸಹ ತಮ್ಮ ಪೋಷಕರ ಮೇಲಿನ....
ಪೋಷಕರ ಮೇಲಿನ ಬೇಸರಕ್ಕೆ 25 ವರ್ಷ ಹುಟ್ಟೂರಿಗೆ ಕಾಲಿಡಲಿಲ್ಲ!
ಪೋಷಕರ ಮೇಲಿನ ಬೇಸರಕ್ಕೆ 25 ವರ್ಷ ಹುಟ್ಟೂರಿಗೆ ಕಾಲಿಡಲಿಲ್ಲ!
ತುಮಕೂರು: ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ತಮ್ಮ ಜೀವನದಿಂದಲೇ ಎಲ್ಲರಿಗೆ ಆದರ್ಶವಾಗಿದ್ದವರು. ಆದರೆ ಅಂತಹಾ ಸ್ವಾಮೀಜಿಗಳೂ ಸಹ ತಮ್ಮ ಪೋಷಕರ ಮೇಲಿನ ಬೇಸರದಿಂದ 25 ವರ್ಷ ಹುಟ್ಟೂರಿಗೆ ಕಾಲಿಡಲಿಲ್ಲ ಎನ್ನುವುದು ಅಚ್ಚರಿಯ ಸತ್ಯ.
ಶಿವಕುಮಾರ ಸ್ವಾಮಿಗಳು ತಾವು ಹುಟ್ಟಿ ಬೆಳೆದ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರಕ್ಕೆ 25 ವರ್ಷ ಬಂದಿರಲಿಲ್ಲ.ತಮ್ಮ ಗುರುವಾಗಿದ್ದ ಉದ್ದಾನ ಶಿವಯೋಗಿಗಳ ಮೇಲಿನ ಅಪಾರ ಭಕ್ತಿ ಅವರ ಈ ನಿರ್ಧಾರದ ಹಿಂದಿತ್ತು.
ಬಿಎ ಓದಿದ್ದ ಮಗ ಶಿವಣ್ಣ ಸುನ್ನತ ಸರ್ಕಾರಿ ಅಧಿಕಾರಿಯಾಗಬೇಕು ಎನ್ನುವುದು ಅವರ ತಂದೆ ಪಟೇಲ್ ಹೊನ್ನೇಗೌಡ-ಗಂಗಮ್ಮ  ಅವರ ರ ಆಸೆಯಾಗಿತ್ತು. ಆದರೆ ಉದ್ಧಾನ ಶಿವಯೋಗಿಗಳುಶಿವಣ್ಣ ಸನ್ಯಾಸ ಸ್ವೀಕರಿಸಬೇಕು.ಜಗತ್ತಿಗೆ ಬೆಳಕಾಗಬೇಕೆಂದು ಸಂಕಲ್ಪಿಸಿದ್ದರು. ಮಗ ಸನ್ಯಾಸಿಯಾಗಲಿದ್ದಾನೆ ಎನ್ನುವುದು ತಿಳಿದು ಆ ದಂಪತಿಗಳು ಅಪಾರ ದುಃಖಿತರಾಗಿದ್ದರು.
ಇದನ್ನು ತಿಳಿದ ಶ್ರೀಗಳ ಗುರು ಶಿವಯೋಗಿಗಳು ತಾವೇ ಸ್ವತಃಅ ವೀರಾಪುರಕ್ಕೆ ತೆರಳಿ ದಂಪತಿಗಳಿಗೆ ಸಾಂತ್ವನ ಹೇಳಲು ಪ್ರಯತ್ನಿಸಿದ್ದರು. ಆದರೆ ಶಿವಯೋಗಿಗಳಿಗೆ ತಾವು ಸಿಕ್ಕಬಾರದು ಎಂಬ ಉದ್ದೇಶದಿಂಡ ಹೊನ್ನೇಗೌಡ ದಂಪತಿಗಳು ಮನೆಯಿಂದ ದೂರ ತೆರಳಿದ್ದರು. ಇದರಿಂದ ನೊಂದ ಗುರು ಶಿವಯೋಗಿಗಳು ಅಲ್ಲಿಂದ ಸಿದ್ದಗಂಗೆಗೆ ನಡೆದೇ ಬಂದಿದ್ದರು.
ಮಠಕ್ಕೆ ಆಗಮಿಸಿ ತನ್ನ ಶಿಷ್ಯ ಶಿವಣ್ಣನಿಗೆ ನಡೆದದ್ದನ್ನು ಶಿವಯೋಗಿಗಳು ವಿವರಿಸಿದ್ದಾರೆ. ಇದನ್ನು ಕೇಳಿದಾಗ ಗುರುಗಳ ಮೇಲೆ ಅಪಾರ ಭಕ್ತಿ ಇದ್ದ ಸ್ವಾಮೀಜಿಗೆ ಬಹಳ ಬೇಸರವಾಗಿತ್ತು. ತಮ್ಮ ಪೋಷಕರ ವರ್ತನೆ, ಶ್ರೀಗಳಿಗೆ ತೋರಿಸಿದ ಉದಾಸೀನ ಅವರಿಗೆ ಬಹಳ ನೋವು ನೀಡಿತು. ಇದರಿಂದಾಗಿ ಅವರು ವೀರಾಪುರಕ್ಕೆ ತೆರಳುವುದನ್ನೇ ಬಿಟ್ಟರು.
ಸಿದ್ದಗಂಗೆ ಮಠದ ಪೀಠವೇರಿದ ಬಳಿಕ ಸಹ ಶಿವಕುಮಾರ ಶ್ರೀಗಳು ತಮ್ಮ ಜನ್ಮಸ್ಥಳಕ್ಕೆ ತೆರಳಲಿಲ್ಲ.
ಆದರೆ ವೀರಾಪುರ ಗ್ರಾಮಸ್ಥರು 1930ರಿಂದ 1955ರ ವರೆಗೂ ತಮ್ಮ ಗ್ರಾಮಕ್ಕೆ ಸ್ವಾಮೀಜಿ ಭೇಟಿ ನೀಡಬೇಕೆಂದು ಆಗ್ರಹಿಸುತ್ತಲೇ ಇದ್ದರು.ಆದರೆ ಸ್ವಾಮಿಗಳು ಂಆತ್ರ ನಯವಾಗಿಯೇ ನಿರಾಕರಿಸಿದ್ದರು.
ಕಡೆಗೊಮ್ಮೆ ಶ್ರೀಗಳ ಪೂರ್ವಾಶ್ರಮದ ಅಣ್ಣನ ಮಗ ವೀರಾಪುರದಲ್ಲಿ ಮನೆ ಕಟ್ಟಿದ್ದನು. ಆ ಮನೆ ಗೃಹ ಪ್ರವೇಶಕ್ಕೆ ಆತ ಶ್ರೀಗಳನ್ನು ಆಹ್ವಾನಿಸಿದ್ದರು. ಆದರೆ ಶ್ರೀಗಳು ಆಗಲೂ ಒಪ್ಪಿರಲಿಲ್ಲ. ಆಗ ಆತ "ಶಿವಯೋಗಿಗಳ ಅನುಗ್ರಹ ಸಿಕ್ಕದ ಆ ಮನೆಗೆ ನಾನೆಂದಿಗೂ ಪ್ರವೇಶಿಸಲಾರೆ. ಆ ಮನೆ ಪಾಳು ಬಿದ್ದರೂ ಸರಿ" ಎಂದು ಖಡಾಖಂಡಿತವಾಗಿ ನುಡಿದರು.
"ಭಕ್ತನ ಭಕ್ತಿಗೆ ಸಹ ಅದ್ಭುತ ಶಕ್ತಿ ಇದೆ" ಎಂದು ನಂಬಿದ್ದ ಶಿವಕುಮಾರ ಶ್ರೀಗಳು ತಾವು ಗೃಹಪ್ರವೇಶಕ್ಕೆ ಆಗಮಿಸಲು ಒಪ್ಪಿಕೊಂಡಿದ್ದರು.ಹೀಗೆ ತಾವು 25 ವರ್ಷ ಕಾಲದ ನಂತರ ತಮ್ಮ ಹುಟ್ಟೂರಿಗೆ ಶ್ರೀಗಳು ಆಗಮಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com